ಶಾರೂಖ್ ಪುತ್ರಿ ಸುಹಾನಾ ಖಾನ್ ಎಂತಹ ಫೋಟೋಗೆ ಪೋಸು ನೀಡಿದ್ದಾರೆ ಗೊತ್ತಾ? - Mahanayaka

ಶಾರೂಖ್ ಪುತ್ರಿ ಸುಹಾನಾ ಖಾನ್ ಎಂತಹ ಫೋಟೋಗೆ ಪೋಸು ನೀಡಿದ್ದಾರೆ ಗೊತ್ತಾ?

25/02/2021

ಬಾಲಿವುಡ್ ನ ಸ್ಟಾರ್ ನಟ ಶಾರೂಖ್ ಖಾನ್ ಪುತ್ರಿ ಸುಹಾನಾ ಖಾನ್ ವಿಭಿನ್ನ ಉಡುಪುಗಳಲ್ಲಿ ಫೋಟೋಗಳನ್ನು ಶೇರ್ ಮಾಡಿಕೊಂಡು ಸದಾ ವಿವಾದಕ್ಕೀಡಾಗುತ್ತಿದ್ದರೂ, ಅವರಿಗೆ ಅವರದ್ದೇ ಆದ ಅಭಿಮಾನಿ ಬಳಗ ಕೂಡ ಇದೆ.

ಇದೀಗ ಹೊಸದಾಗಿ ಅವರು ತನ್ನಇನ್ಸ್ಟಾಗ್ರಾಮ್ ನಲ್ಲಿ ತಮ್ಮ ಮನಮೋಹಕ ಚಿತ್ರಗಳನ್ನು ಹಂಚಿಕೊಂಡಿದ್ದು, ಅಭಿಮಾನಿಗಳ ಎದೆಯಲ್ಲಿ ಕಿಚ್ಚು ಹತ್ತಿಸಿದ್ದಾರೆ. ನ್ಯೂಯಾರ್ಕ್ ನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಶಾರೂಖ್ ಖಾನ್ ಅವರ 20 ವರ್ಷ ವಯಸ್ಸಿನ ಪುತ್ರಿ ಸುಹಾನಾ ಖಾನ್ ಇದೀಗ ತಮ್ಮ ಸ್ನೇಹಿತೆಯ ಮನೆಯಲ್ಲಿ ತೆಗೆದ ಫೋಟೋಗಳನ್ನು ಇನ್ಟ್ಸಾಗ್ರಾಮ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಸುಹಾನಾ ಅವರ ಚಿತ್ರಕ್ಕೆ ಅಮಿತಾಬ್ ಬಚ್ಚನ್ ಅವರ ಮೊಮ್ಮಗಳು ನವಿಯಾ ನಂದಾ ಅವರು ಕೂಡ ಪ್ರತಿಕ್ರಿಯಿಸಿದ್ದು, ಬೆಂಕಿಯ ಇಮೊಜಿಯನ್ನು ನೀಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನ್ಯೂಯಾರ್ಕ್ ವಿಶ್ವವಿದ್ಯಾಲಯದಲ್ಲಿ ಚಲನಚಿತ್ರ ನಿರ್ಮಾಣದ ವಿದ್ಯಾರ್ಥಿನಿಯಾಗಿ ಸುಹಾನಾ ಅಧ್ಯಯನ ಮಾಡುತ್ತಿದ್ದಾರೆ.

ಇತ್ತೀಚಿನ ಸುದ್ದಿ