‘ಹಿಂದೂ’ ಪದ: ತಾಕತ್ ಇದ್ರೆ ಚರ್ಚೆಗೆ ಬನ್ನಿ… | ಸತೀಶ್ ಜಾರಕಿಹೊಳಿಗೆ ಚಕ್ರವರ್ತಿ ಸೂಲಿಬೆಲೆ ಸವಾಲು - Mahanayaka
6:18 PM Wednesday 11 - December 2024

‘ಹಿಂದೂ’ ಪದ: ತಾಕತ್ ಇದ್ರೆ ಚರ್ಚೆಗೆ ಬನ್ನಿ… | ಸತೀಶ್ ಜಾರಕಿಹೊಳಿಗೆ ಚಕ್ರವರ್ತಿ ಸೂಲಿಬೆಲೆ ಸವಾಲು

sathish jarakiholi sulibele
17/11/2022

ಬೆಳಗಾವಿ: ಹಿಂದೂ ಧರ್ಮದ ಕುರಿತು ಮಾತನಾಡಿದ್ರೆ ನಾನು ಸುಮ್ಮನಿರಲ್ಲ, ತಾಕತ್ ಇದ್ರೆ, ಬಹಿರಂಗ ಚರ್ಚೆಗೆ ಬನ್ನಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರಿಗೆ ಬಿಜೆಪಿ ಪರ ಭಾಷಣಕಾರ ಚಕ್ರವರ್ತಿ ಸೂಲಿಬೆಲೆ ಸವಾಲು ಹಾಕಿದ್ದಾರೆ.

ಹುಕ್ಕೇರಿ ತಾಲೂಕಿನ ಸತೀಶ್ ಜಾರಕಿಹೊಳಿ ಕ್ಷೇತ್ರವಾದ ಯಮಕನಮರಡಿ ವಿದ್ಯಾವರ್ಧಕ ಶಾಲಾ ಸಂಘದ ಆವರಣದಲ್ಲಿ ನಡೆದ “ನಾನು ಹಿಂದೂ” ಸಮಾವೇಶದಲ್ಲಿ ಮಾತನಾಡಿದ ಅವರು, ನನ್ನ ವೈಯಕ್ತಿಕ ಟೀಕೆ ಮಾಡಿದ್ರೆ ಸುಮ್ಮನಿರುತ್ತಿದ್ದೆ, ಜಾತಿ ಬಗ್ಗೆ ಟೀಕೆ ಮಾಡಿದ್ರೆ ಸುಮ್ಮನಿರುತ್ತಿದೆ. ಆದ್ರೆ ಹಿಂದೂ ಧರ್ಮದ ಬಗ್ಗೆ ಮಾತನಾಡಿದ್ರೆ ಸುಮ್ಮನಿರಲ್ಲ, ತಾಕತ್ ಇದ್ರೆ, ಬಹಿರಂಗ ಚರ್ಚೆಗೆ ಬನ್ನಿ ಎಂದು ಸವಾಲು ಹಾಕಿದರು.

ಹಿಂದೂ ಜಾಗೃತನಾಗಿದ್ದಾನೆ, ಮೊದಲಿನಂತೆ ಅಲ್ಲ, ಹಲಾಲ್ ವಿಚಾರ ಬಂದಾಗ ಬೀದಿಗೆ ಬಂದು ನಿಲ್ಲುತ್ತೆ, ಹಿಂದೂ ಅಂದ್ರೆ, ಅಶ್ಲೀಲನಾ? ಎಂದು ಪ್ರಶ್ನಿಸಿದ ಅವರು, ಹಿಂದೂ ಅಂದ್ರೆ ಬದುಕಿನ ಶೈಲಿ ಎಂದು ಸುಪ್ರೀಂ ಕೋರ್ಟ್ ಹೇಳುತ್ತದೆ ಎಂದರು.

ಹಿಂದೂ ಧರ್ಮಕ್ಕೆ ಯಾರೂ ಸಂಸ್ಥಾಪಕರಿಲ್ಲ, ಯಾಕೆಂದ್ರೆ, ಇದು ವಿಜ್ಞಾನ, ವಿಜ್ಞಾನಕ್ಕೆ ಯಾರೂ ಸಂಸ್ಥಾಪಕರಿರುವುದಿಲ್ಲ, ಅಂಬೇಡ್ಕರ್ ಸೇರಿದಂತೆ ಮಹಾನ್ ಪುರುಷರು ಯಾರೂ ಸಹ ಹಿಂದೂ ಧರ್ಮದ ಬಗ್ಗೆ ಮಾತನಾಡಲಿಲ್ಲ, ಅವರ ಫೋಟೋ ಹಾಕಿ ನೀವು ಹಿಂದೂ ಬಗ್ಗೆ ಮಾತನಾಡ್ತೀರಲ್ಲ ಎಂದು ತರಾಟೆಗೆತ್ತಿಕೊಂಡರು.

ಸಮಾವೇಶದಲ್ಲಿ ಸಂಸದ ಅಣ್ಣಾ ಸಾಹೇಬ್, ಬೆಳಗಾವಿ ಗ್ರಾಮೀಣ ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ್ ಪಾಟೀಲ್, ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ ಅಧ್ಯಕ್ಷ ಮಾರುತಿ ಅಷ್ಟಗಿ, ಮುಖಂಡ ರಾಜೇಶ್ ನೆರ್ಲಿ ಸಹಿತ ಹಲವು ಬಿಜೆಪಿ ನಾಯಕರು ಭಾಗಿಯಾಗಿದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ