ಸುಳ್ಳು ಜಾತಿ ಪ್ರಮಾಣ ಪತ್ರ:  ತಹಶೀಲ್ದಾರ್ ಸೇರಿದಂತೆ ಐವರ ವಿರುದ್ಧ ಎಫ್ ಐಆರ್ - Mahanayaka
6:07 PM Wednesday 11 - December 2024

ಸುಳ್ಳು ಜಾತಿ ಪ್ರಮಾಣ ಪತ್ರ:  ತಹಶೀಲ್ದಾರ್ ಸೇರಿದಂತೆ ಐವರ ವಿರುದ್ಧ ಎಫ್ ಐಆರ್

fir
21/09/2021

ಶಿವಮೊಗ್ಗ: ಕೆಎಸ್ಸಾರ್ಟಿಸಿ ಚಾಲಕನ ಹುದ್ದೆಗೆ ಅನುಕೂಲ ಮಾಡಿಕೊಡಲು ವ್ಯಕ್ತಿಯೊಬ್ಬರಿಗೆ ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿದ ಆರೋಪದ ಮೇಲೆ ತಹಶೀಲ್ದಾರ್ ಸೇರಿ ಐವರ ವಿರುದ್ಧ ಇಲ್ಲಿನ ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಹಶೀಲ್ದಾರ್ ಸಿ.ಎನ್‌.ಮಂಜುನಾಥ್, ಕೊಟ್ರೇಶ್, ರಾಜಸ್ವ ನಿರೀಕ್ಷಕ ವಿಜಯಕುಮಾರ್, ಗ್ರಾಮಲೆಕ್ಕಿಗ ಎಚ್‌.ಸುರೇಶ್, ಮೈಸೂರು ವಿಭಾಗದ ಕೆಎಸ್ಸಾರ್ಟಿಸಿ ಚಾಲಕ ರಾಮಸ್ವಾಮಿ ವಿರುದ್ಧ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದೂರು ಸಲ್ಲಿಸಿದ್ದಾರೆ.

ಶಿವಮೊಗ್ಗ ತಾಲ್ಲೂಕು ಬಿ.ಬೀರನಹಳ್ಳಿ ಸಮೀಪದ ತರಗನಹಳ್ಳಿಯ ರಾಮಸ್ವಾಮಿ ಕೆಎಸ್ಸಾರ್ಟಿಸಿ ಚಾಲಕ ಹುದ್ದೆಗೆ ಸೇರಲು 2012ರಲ್ಲಿ ಪರಿಶಿಷ್ಟ ಪಂಗಡದ ಪ್ರಮಾಣಪತ್ರ ಪಡೆದಿದ್ದರು. ಸುಳ್ಳು ಜಾತಿ ಪ್ರಮಾಣ ಪತ್ರ ಸಲ್ಲಿಸಿ ಕೆಲಸ ಗಿಟ್ಟಿಸಿಕೊಂಡಿರುವುದಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗೆ ದೂರು ಬಂದಿತ್ತು.

ಈ ದೂರಿನ ಬಗ್ಗೆ ತನಿಖೆ ನಡೆಸಿದ ಅಧಿಕಾರಿಗಳು ಜಾತಿ ಪ್ರಮಾಣಪತ್ರ ರದ್ದುಗೊಳಿಸಿದ್ದರು. ನಂತರ ಸಮಗ್ರ ತನಿಖೆ ನಡೆಸಿದ ಜಾರಿ ನಿರ್ದೇಶನಾಲಯಕ್ಕೆ ಈಗ ಐವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/HpGUvPNd4TWBQJG8MXH5on

ಇನ್ನಷ್ಟು ಸುದ್ದಿಗಳು…

ಹಿಂದೂ ಧರ್ಮಕ್ಕೆ ಅಪಾಯ ಇದೆ ಎನ್ನುವುದು ಕಾಲ್ಪನಿಕ: ಕೇಂದ್ರ ಸರ್ಕಾರ ಸ್ಪಷ್ಟನೆ

ಗಣೇಶ ವಿಸರ್ಜನೆಗೆ ಸಮುದ್ರಕ್ಕೆ ಹಾರಿದ ಮೂವರು ಮಕ್ಕಳು ನೀರುಪಾಲು!

ಅಶ್ಲೀಲ ವಿಡಿಯೋ ಪ್ರಕರಣ: 2 ತಿಂಗಳ ಜೈಲುವಾಸದ ಬಳಿಕ ರಾಜ್ ಕುಂದ್ರಾಗೆ ಜಾಮೀನು

ಮಠದಲ್ಲಿಯೇ ಸ್ವಾಮೀಜಿಯ ಮರ್ಡರ್!? | ನೇಣು ಬಿಗಿದ ಸ್ಥಿತಿಯಲ್ಲಿ ಸ್ವಾಮೀಜಿಯ ಮೃತದೇಹ ಪತ್ತೆ

ನಾನು ಎರಡು ಬಾರಿ ರಾಜ್ಯಸಭಾ ಸ್ಥಾನವನ್ನು ನಿರಾಕರಿಸಿದ್ದೇನೆ | ನಟ ಸೋನು ಸೂದ್‌

ಪಂಜಾಬ್ ನಲ್ಲಿ ಪ್ರಥಮ ದಲಿತ ಸಿಎಂ ಆಗಿ ಚರಣಜಿತ್ ಸಿಂಗ್ ಆಯ್ಕೆ | ದೇಶದ್ಯಾದ್ಯಂತ ‘ದಲಿತ ಸಿಎಂ’ ಚರ್ಚೆ

ಇತ್ತೀಚಿನ ಸುದ್ದಿ