“ಸುಮ್ಮನೆ ಹೊರಗೆ ಬಂದೆ ಸಾರ್” ಎಂದ ಯುವಕನಿಗೆ ದಾರಿ ಬಿಟ್ಟ ಪೊಲೀಸರು | ಯಾಕೆ ಗೊತ್ತಾ?
24/05/2021
ದಾವಣಗೆರೆ: ಲಾಕ್ ಡೌನ್ ಸಂದರ್ಭದಲ್ಲಿ ಪೊಲೀಸರನ್ನು ಕಂಡು ಸಾರ್ವಜನಿಕರು ಹೆದರುವುದು ಸಾಮಾನ್ಯ ಆದರೆ, ಇಲ್ಲೊಬ್ಬ ವ್ಯಕ್ತಿ ಪೊಲೀಸರೇ ಹೆದರಿ ದೂರ ನಿಲ್ಲುವಂತೆ ಮಾಡಿರುವ ಘಟನೆ ದಾವಣಗೆರೆಯ ಶಾಮನೂರು ರಸ್ತೆ ಬಳಿಯಲ್ಲಿ ನಡೆದಿದೆ.
ಯುವಕನೊಬ್ಬ ಸ್ಕೂಟಿಯಲ್ಲಿ ರಸ್ತೆಯಲ್ಲಿ ಸಂಚರಿಸುತ್ತಿದ್ದ. ಈ ವೇಳೆ ಪೊಲೀಸರು ಆತನನ್ನು ತಡೆದು, “ಲಾಕ್ ಡೌನ್ ಇರೋದು ಗೊತ್ತಿಲ್ವಾ? ಎಲ್ಲಿಗೆ ಹೋಗುತ್ತಿದ್ದಿ?” ಎಂದು ತಮ್ಮ ಶೈಲಿಯಲ್ಲಿ ಪ್ರಶ್ನಿಸಿದ್ದಾರೆ. ಈ ವೇಳೆ ಯುವಕ, “ಸರ್ ಸುಮ್ಮನೆ ಹೋಗುತ್ತಿದ್ದೇನೆ” ಎಂದು ಉತ್ತರ ನೀಡಿದ್ದಾನೆ.
“ನಿನಗೆ ಲಾಕ್ ಡೌನ್ ನಿಯಮ ಗೊತ್ತಿಲ್ವಾ ?” ಎಂದು ಪೊಲೀಸರು ಗದರಿದಾಗ ಆತ, “ಸರ್… ನಾನು ಕೊರೊನಾ ಸೋಂಕಿತ ಆಸ್ಪತ್ರೆಗೆ ಹೋಗುತ್ತಿದ್ದೇನೆ” ಎಂದು ಉತ್ತರ ನೀಡಿದ್ದಾನೆ. ಆತ ಕೊರೊನಾ ಸೋಂಕಿತ ಎಂದು ಹೇಳುತ್ತಿದ್ದಂತೆಯೇ ಬೆಚ್ಚಿಬಿದ್ದ ಪೊಲೀಸರು ಆತನನ್ನು ಬಿಟ್ಟು ಕಳಿಸಿದ್ದಾರೆ.