ಸಂಪ್ ನೊಳಗೆ ಒಂದೂವರೆ ನಿಮಿಷ ಸಿಲುಕಿದರೂ ಸಾವು ಗೆದ್ದು ಬಂದ ಮಗು
13/04/2021
ಬೆಂಗಳೂರು: ಸಂಪ್ ಗೆ ಬಿದ್ದ ಮಗು ಸುಮಾರು ಒಂದು ನಿಮಿಷಕ್ಕೂ ಅಧಿಕ ಹೊತ್ತು ಸಂಪ್ ನೊಳಗೆ ಸಿಲುಕಿದ್ದು, ಬಳಿಕ ಮಗುವನ್ನು ತಂದೆಯೇ ರಕ್ಷಿಸಿದ ಘಟನೆ ನಡೆದಿದ್ದು, ಮಗುವಿನ ತಂದೆಗೆ ಸಂಪ್ ನಿಂದ ಹೊರ ಬರಲು ಸ್ಥಳೀಯರು ನೆರವು ನೀಡಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಎರಡನೇ ಹಂತದಲ್ಲಿ ಏಪ್ರಿಲ್ 3ರಂದು ಈ ಘಟನೆ ನಡೆದಿದ್ದು, ಆಂಧ್ರ ಮೆಸ್ ಕಟ್ಟಡದ ಸಂಪ್ ಗೆ ಟ್ಯಾಂಕರ್ ಮೂಲಕ ನೀರು ತುಂಬಿಸಲಾಗುತ್ತಿತ್ತು. ಈ ವೇಳೆ ಆಟವಾಡುತ್ತಾ ಬಂದ ಮಗು ಸಂಪ್ ಗೆ ಬಿದ್ದಿದೆ.
ಮಗು ಸಂಪ್ ಒಳಗೆ ಬಿದ್ದ ಕೆಲವೇ ಕ್ಷಣಗಳಲ್ಲಿ ಜನ ಅಲ್ಲಿಯೇ ಓಡಾಡಿದ್ದಾರೆ. ಆದ್ರೆ ಮಗು ಬಿದ್ದಿರುವುದು ಯಾರ ಗಮನಕ್ಕೂ ಬಂದಿರಲಿಲ್ಲ. ಒಂದೂವರೆ ನಿಮಿಷದ ಬಳಿಕ ಮಗುವಿನ ತಂದೆ ಮಗುವನ್ನು ಹುಡುಕಿಕೊಂಡು ಬಂದಿದ್ದು, ಅನುಮಾನಗೊಂಡು ಸಂಪ್ ಗೆ ಇಳಿದು ನೋಡಿದ್ದು, ಈ ವೇಳೆ ಮಗುವನ್ನು ಹೇಗೋ ರಕ್ಷಿಸಿದ್ದಾರೆ. ಈ ವೇಳೆ ಸ್ಥಳೀಯರು ಮಗುವಿನ ತಂದೆಗೆ ಸಂಪ್ ನಿಂದ ಹೊರಗೆ ಬರಲು ನೆರವಾದರು.