ಬಿಸಿಲ ತಾಪ… ಆಸ್ಪತ್ರೆಗೆ ಫ್ಯಾನ್ ಜೊತೆ ಬರುತ್ತಿರುವ ರೋಗಿಗಳು!!!
ಚಾಮರಾಜನಗರ: ಬಿಸಿಲ ತಾಪ, ಕಾರ್ಯನಿರ್ವಹಿಸದ ಆಸ್ಪತ್ರೆ ಫ್ಯಾನ್ ಗಳಿಂದ ಬೇಸತ್ತ ಜನರು ಅಡ್ಮಿಟ್ ಆಗುತ್ತಿದ್ದಂತೆ ಗರ್ಭಿಣಿಯರು, ವೃದ್ಧರು ಫ್ಯಾನ್ ಜೊತೆ ಬರುತ್ತಿರುವ ಘಟನೆ ಚಾಮರಾಜನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ನಡೆಯುತ್ತಿದೆ.
ಗರ್ಭಿಣಿಯರು ಹಾಗೂ ಸಂಬಂಧಿಕರು ಆಸ್ಪತ್ರೆಗೆ ಬಂದ ವೇಳೆ ಬಿಸಿಲ ತಾಪಕ್ಕೆ ಹೈರಣಾಗುತ್ತಿದ್ದು ಸ್ವಂತ ಹಣದಿಂದ ಟೇಬಲ್ ಫ್ಯಾನ್ ಗಳನ್ನು ಖರೀದಿಸಿ ಬಳಸುತ್ತಿದ್ದಾರೆ.
ಆಸ್ಪತ್ರೆಯಲ್ಲಿ ಯಾವ ಫ್ಯಾನ್ ಕೂಡ ಕಾರ್ಯನಿರ್ವಹಿಸದಿರುವುದನ್ನು ವೈದ್ಯರು, ಸಿಬ್ಬಂದಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ರೋಗಿಗಳ ಸಂಬಂಧಿಕರು ದೂರಿದ್ದಾರೆ.
ಆಸ್ಪತ್ರೆಯ ಆಡಳಿತ ಮಂಡಳಿ ಆಸ್ಪತ್ರೆಗೆ ಫ್ಯಾನ್ ಹಾಕಿಸಲಾಗದಷ್ಟು ಧಾರಿದ್ರ್ಯತನವನ್ನು ಪ್ರದರ್ಶಿಸಿದ್ದು, ಇದರಿಂದ ಬೇಸತ್ತು ಜನರೇ ಫ್ಯಾನ್ ತೆಗೆದುಕೊಂಡು ಹೋಗುವ ಸ್ಥಿತಿ ನಿರ್ಮಾಣವಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw