ಸ್ವಲ್ಪ ಕನ್ನಡ ಬರುತ್ತದೆ, ಇನ್ನೂ ಕಲಿಯುತ್ತೇನೆ ಎಂದ ಸನ್ನಿ ಲಿಯೋನ್
ಬೆಂಗಳೂರು: ನನಗೆ ಸ್ವಲ್ಪ ಕನ್ನಡ ಬರುತ್ತದೆ ಇನ್ನೂ ಕಲಿಯುತ್ತೇನೆ ಎಂದು ಬಾಲಿವುಡ್ ತಾರೆ ಸನ್ನಿ ಲಿಯೋನ್(Sunny Leone) ಹೇಳಿದ್ದು, ಐ ಲವ್ ಯು ಬೆಂಗಳೂರು ಎಂದು ಕೂಗಿದ್ದಾರೆ.
ಡಿ.7ರಂದು ಬೆಂಗಳೂರಿಗೆ ಕಾರ್ಯಕ್ರಮವೊಂದಕ್ಕೆ ಅತಿಥಿಯಾಗಿ ಆಗಮಿಸಿದ್ದ ಸನ್ನಿ ಲಿಯೋನ್ ಕನ್ನಡದಲ್ಲಿ ಮಾತನಾಡಲು ಪ್ರಯತ್ನಿಸಿದ್ದಾರೆ. ಅಲ್ಲದೇ ನನಗೆ ಸ್ವಲ್ಪ ಕನ್ನಡ ಬರುತ್ತೆ, ಇನ್ನೂ ಕಲಿಯುತ್ತೇನೆ ಅಂತ ಹೇಳಿದ್ದಾರೆ.
ಲವ್ ಯು ಆಲಿಯಾ, ಡಿ.ಕೆ., ಚಾಂಪಿಯನ್ ಸಿನಿಮಾಗಳಲ್ಲಿ ಈಗಾಗಲೇ ಸ್ಪೆಷಲ್ ಹಾಡುಗಳಿಗೆ ಸನ್ನಿ ಲಿಯೋನ್ ಹೆಜ್ಜೆ ಹಾಕಿ ಗಮನ ಸೆಳೆದಿದ್ದರು. ಮಂಡ್ಯದ ಗ್ರಾಮವೊಂದರಲ್ಲಿ ಸನ್ನಿ ಲಿಯೋನ್ ಅಭಿಮಾನಿಗಳ ಬಳಗ ಕೂಡ ಇದೆ. ಈಗಾಗಲೇ ಕರ್ನಾಟಕಕ್ಕೆ ಹತ್ತಿರವಾಗಿರುವ ಸನ್ನಿ ಲಿಯೋನ್, ಇದೀಗ ಕನ್ನಡ ಕಲಿಯುತ್ತೇನೆ ಎಂದು ಹೇಳಿ, ಕನ್ನಡಿಗರ ಹೃದಯ ಮತ್ತೊಮ್ಮೆ ಗೆದ್ದಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: