ಮುಟ್ಟಾದರೆ ಹೆಣ್ಣುಮಕ್ಕಳು ಕಾಡಲ್ಲಿ ಮಲಗ ಬೇಕು: ಹಿರಿಯೂರಿನಲ್ಲಿ ಅನಿಷ್ಠ ಆಚರಣೆ ಇನ್ನೂ ಜೀವಂತ! - Mahanayaka

ಮುಟ್ಟಾದರೆ ಹೆಣ್ಣುಮಕ್ಕಳು ಕಾಡಲ್ಲಿ ಮಲಗ ಬೇಕು: ಹಿರಿಯೂರಿನಲ್ಲಿ ಅನಿಷ್ಠ ಆಚರಣೆ ಇನ್ನೂ ಜೀವಂತ!

hiriyuru
08/02/2023

ಭಾರತ ಡಿಜಿಟಲ್ ಇಂಡಿಯಾದ ಕನಸಿನಲ್ಲಿದೆ ಆದರೆ, ದೇಶದ ಜನರು ಇನ್ನೂ ಕೂಡ ಮೂಢನಂಬಿಕೆಯ ಕೊಂಪೆಯಲ್ಲೇ ಕೊಳೆಯುತ್ತಿದ್ದಾರೆ. ಮೂಢನಂಬಿಕೆಯ ಕೊಂಪೆಯಿಂದ ಜನ ಹೊರ ಬಾರದೇ ದೇಶದ ಸರ್ವತೋಮುಖ ಬೆಳವಣಿಗೆ ಸಾಧ್ಯವಿಲ್ಲ. ಇಂತಹದ್ದೊಂದು ಮೌಢ್ಯದ ಆಚರಣೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ ನಡೆದಿದ್ದು, ಬಿಜೆಪಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರು ಸ್ಥಳಕ್ಕೆ ಭೇಟಿ ನೀಡಿ ಜಾಗೃತಿ ಮೂಡಿಸಿದ್ದಾರೆ.


Provided by

ಹಿರಿಯೂರು ತಾಲ್ಲೂಕು ಬಡಗೊಲ್ಲರಹಟ್ಟಿಯಲ್ಲಿ ಹೆಣ್ಣು ಮುಟ್ಟಾದರೆ ಸಾಕು, ಆಕೆಯನ್ನು ಅತ್ಯಂತ ಕೀಳಾಗಿ ಕಾಣಲಾಗುತ್ತಿದೆ. ಆಕೆಯನ್ನು ಮನೆಯೊಳಗೆ ಸೇರಿಸಿಕೊಳ್ಳದೇ ಕಾಡಿನ ಮಧ್ಯೆ ಆಕೆ ಮಲಗ ಬೇಕಿದೆ. ರಾತ್ರಿ ವೇಳೆ ಕಾಡು ಪ್ರಾಣಿಗಳು ದಾಳಿ ನಡೆಸಿದರೂ ಆಕೆ ಮನೆಯೊಳಗೆ ಬಾರದಂತಹ ಅನಿಷ್ಠ ಮತ್ತು ಅಮಾನವೀಯತೆಯ ಆಚರಣೆ ಇದಾಗಿದೆ.

ತಾಲ್ಲೂಕಿನ ಯಲ್ಲದಕೆರೆ ಮೊರಾರ್ಜಿ ದೇಸಾಯಿ ವಸತಿ ಶಾಲೆ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿದ್ದ ಶಾಸಕಿ ಪೂರ್ಣಿಮಾ ಅವರು ಗ್ರಾಮಸ್ಥರ ಮನವಿಯ ಮೇರೆಗೆ ಪಕ್ಕದಲ್ಲಿರುವ ಬಡಗೊಲ್ಲರಹಟ್ಟಿಗೆ ಭೇಟಿ ನೀಡಿದರು. ಈ ವೇಳೆ ಹೆಣ್ಣು ಮಕ್ಕಳು ಮನೆಯಿಂದ ಹೊರಗಿನ ಖಾಲಿ ಪ್ರದೇಶವೊಂದರಲ್ಲಿ ಮಲಗಿರುವುದು ಕಂಡು ಬಂದಿದೆ. ಬಳಿಕ ಶಾಸಕಿಯ ಮನವಿಯ ಮೇರೆಗೆ ಊರಿನ ಹೊರಗಿದ್ದ ಹೆಣ್ಣು ಮಕ್ಕಳನ್ನು ಒಳಗಡೆ ಕರೆ ತಂದಿದ್ದಾರೆ.


Provided by

ಇಲ್ಲಿನ ಹೆಣ್ಣು ಮಕ್ಕಳು ಕೇವಲ ಮುಟ್ಟಿನ ಕಾರಣಕ್ಕಾಗಿಯೇ 10ನೇ ತರಗತಿಯ ಬಳಿಕ ವಿದ್ಯಾಭ್ಯಾಸ ಕೂಡ ಮುಂದುವರಿಸುತ್ತಿಲ್ಲ ಎಂದು ಗ್ರಾಮಸ್ಥರು ತಿಳಿಸಿದ್ದಾರೆ ಎಂದು ಶಾಸಕಿ ತಿಳಿಸಿದ್ದಾರೆ.

ಮನುವಾದಿ ಅನಿಷ್ಠ ಆಚರಣೆಗಳು ಹೆಣ್ಣಿನ ಸಾಮಾಜಿಕ ಸ್ವಾತಂತ್ರ್ಯವನ್ನು ಕಿತ್ತುಕೊಂಡಿತ್ತು. ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಭಾರತದ ಸಂವಿಧಾನದಲ್ಲಿ ಮಹಿಳೆಯರಿಗೆ ಸಮಾನ ಸ್ಥಾನ, ಹಕ್ಕುಗಳನ್ನು ನೀಡಿದ್ದಾರೆ. ಆದರೂ ಇಂದಿಗೂ ಈ ಅನಿಷ್ಠ ಸಂಪ್ರದಾಯಗಳು ಭಾರತದಲ್ಲಿ ಜೀವಂತವಿರುವುದು ಸಂವಿಧಾನವನ್ನು ಸಮರ್ಪಕವಾಗಿ ಜಾರಿ ಮಾಡದ ಪರಿಣಾಮವಾಗಿದೆ. ತಕ್ಷಣವೇ ಈ ಸಮುದಾಯದ ಹೆಣ್ಣುಮಕ್ಕಳ ರಕ್ಷಣೆಗೆ ಸರ್ಕಾರ ಕಟ್ಟುನಿಟ್ಟಿನ ಕ್ರಮವನ್ನು ಕೈಗೊಳ್ಳಬೇಕಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ