ಸುಪ್ರಭಾತ ಅಭಿಯಾನದಿಂದ ಹಿಂದಕ್ಕೆ ಸರಿದ ಪ್ರಮೋದ್ ಮುತಾಲಿಕ್ - Mahanayaka
9:27 PM Wednesday 5 - February 2025

ಸುಪ್ರಭಾತ ಅಭಿಯಾನದಿಂದ ಹಿಂದಕ್ಕೆ ಸರಿದ ಪ್ರಮೋದ್ ಮುತಾಲಿಕ್

muthalik
10/05/2022

ಧಾರವಾಡ: ಶ್ರೀರಾಮ ಸೇನೆಯ ಪ್ರತಿಭಟನೆಯಿಂದ ಒತ್ತಡಕ್ಕೆ ಸಿಲುಕಿರುವ ರಾಜ್ಯ ಸರ್ಕಾರ ಅನಧಿಕೃತ ಮೈಕ್ ಗಳ ತೆರವಿಗೆ ಆದೇಶ ನೀಡಿದ್ದು, ಈ ಹಿನ್ನೆಲೆಯಲ್ಲಿ ಶ್ರೀರಾಮ ಸೇನೆ ಸುಪ್ರಭಾತ ಅಭಿಯಾನದಿಂದ ಹಿಂದಕ್ಕೆ ಸರಿದಿದೆ.

ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಅವರು, ಕೊನೆಗೂ ರಾಜ್ಯ ಸರ್ಕಾರ ತನ್ನ ನಿಲುವು ಬದಲಿಸಿ, ಅನಧಿಕೃತ ಮೈಕ್ ಗಳ ತೆರವಿಗೆ ಗಡುವು ನೀಡಿರುವುದು ಸ್ವಾಗತಾರ್ಹ ಕ್ರಮವಾಗಿದೆ.

ರಾಜ್ಯ ಸರ್ಕಾರ ಅನಧಿಕೃತ ಧ್ವನಿ ವರ್ಧಕಗಳ ತೆರವಿಗೆ ಆದೇಶ ಹೊರಡಿಸಿರುವ ಹಿನ್ನಲೆಯಲ್ಲಿ, ಶ್ರೀರಾಮ ಸೇನೆಯಿಂದ ರಾಜ್ಯಾಧ್ಯಂತ ಕರೆ ನೀಡಲಾಗಿದ್ದ ಸುಪ್ರಭಾತ ಅಭಿಯಾನವನ್ನು ವಾಪಾಸ್ ಪಡೆಯಲಾಗಿದೆ ಎಂದು ಮುತಾಲಿಕ್ ತಿಳಿಸಿದರು.

ಸರ್ಕಾರದ ಮುಂದಿನ ನಿಲುವನ್ನು ನೋಡಿಕೊಂಡು, ಮತ್ತೆ ಆರಂಭಿಸುವ ಕುರಿತಂತೆ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ed8Qj9yS882JNjUvoz0kbs

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಮಸೀದಿ, ಚರ್ಚ್, ದೇಗುಲಗಳಲ್ಲಿ ಮೈಕ್ ಬಳಕೆಗೆ ನಿಯಮ ರೂಪಿಸಲಾಗುತ್ತಿದೆ: ಸಚಿವ ಆನಂದ್ ಸಿಂಗ್

‘ದಿ ಕಾಶ್ಮೀರ್ ಫೈಲ್ಸ್’  ಚಿತ್ರ ಪ್ರದರ್ಶನಕ್ಕೆ ನಿಷೇಧ ಹೇರಿದ ಸಿಂಗಾಪುರ!

ರೈಲಿನಲ್ಲೂ ಲೌಡ್ ಸ್ಪೀಕರ್ ಗೆ ಕಂಟಕ! | ಲೌಡ್ ಸ್ಪೀಕರ್ ನಿಷೇಧಿಸಿದ ರೈಲ್ವೆ ಇಲಾಖೆ

ಕುತೂಹಲಕ್ಕೆ ಕಾರಣವಾದ ನವದೆಹಲಿಗೆ ಸಿಎಂ ಬೊಮ್ಮಾಯಿ ಭೇಟಿ!

ಇತ್ತೀಚಿನ ಸುದ್ದಿ