10ನೇ ತರಗತಿ ಪಾಸ್ ಆದವರಿಗೆ ಸುಪ್ರೀಂ ಕೋರ್ಟ್ ನಲ್ಲಿದೆ ಉದ್ಯೋಗಾವಕಾಶ - Mahanayaka
7:26 AM Wednesday 18 - September 2024

10ನೇ ತರಗತಿ ಪಾಸ್ ಆದವರಿಗೆ ಸುಪ್ರೀಂ ಕೋರ್ಟ್ ನಲ್ಲಿದೆ ಉದ್ಯೋಗಾವಕಾಶ

suprim court
21/08/2024

Supreme Court Junior Attendant Recruitment – ಭಾರತದ ಸುಪ್ರೀಂ ಕೋರ್ಟ್ ನಲ್ಲಿ 10ನೇ ತರಗತಿ ಪಾಸಾದ ಅರ್ಹತೆ ಉಳ್ಳ ಅಭ್ಯರ್ಥಿಗಳನ್ನು ಖಾಲಿ ಇರುವ ಜೂನಿಯರ್ ಅಟೆಂಡೆಂಟ್ ಅಥವಾ ಪಾಕ ಪ್ರವೀಣ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಅಧಿಸೂಚನೆ ಹೊರಡಿಸಿದೆ.

ಸುಪ್ರೀಂ ಕೋರ್ಟ್ ನಲ್ಲಿ ಪಾಕ ಪ್ರವೀಣರನ್ನು ನೇಮಕಾತಿ ಮಾಡಿಕೊಳ್ಳಲು ಅಧಿಸೂಚನೆಯಲ್ಲಿ ತಿಳಿಸಿರುವ ಇತರೆ ಅರ್ಹತೆಗಳನ್ನು? ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುವ ವಿಧಾನ ಹೇಗೆ ಇರುತ್ತದೆ? ಅರ್ಜಿ ಸಲ್ಲಿಸಲು ಅರ್ಜಿ ಶುಲ್ಕವೇಷ್ಟು? ಅರ್ಜಿ ಸಲ್ಲಿಸುವ ಲಿಂಕ ಹಾಗೂ ಇನ್ನುಳಿದ ಅಗತ್ಯ ನೇಮಕಾತಿ ಮಾಹಿತಿಯನ್ನು ಕೆಳಗೆ ನೀಡಲಾಗಿದೆ.

ನೇಮಕಾತಿ ಹುದ್ದೆಗಳ ವಿವರ:


Provided by

ಭಾರತ ಸುಪ್ರೀಂ ಕೋರ್ಟ್ ನಲ್ಲಿ ಒಟ್ಟು 80 ಹುದ್ದೆಗಳು ಖಾಲಿ ಇರುತ್ತವೆ. ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ನಿಗದಿಪಡಿಸಿದ ಎಲ್ಲಾ ಅರ್ಹತೆಗಳನ್ನು ಹೊಂದಿದ್ದರೆ ಆನ್ಲೈನ್ ಮೂಲಕವೇ ಸಪ್ಟೆಂಬರ್ 12ನೇ ತಾರೀಖಿನ ಒಳಗಾಗಿ ಅರ್ಜಿ ಸಲ್ಲಿಸಬೇಕು.

ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿತ ಅರ್ಹತೆಗಳು:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕನಿಷ್ಠ ವಿದ್ಯಾರ್ಹತೆ 10ನೇ ತರಗತಿ ಪಾಸ್ ಆಗಿರಬೇಕು. ಈ ಅರ್ಹತೆಯೊಂದಿಗೆ ಅರ್ಜಿ ಸಲ್ಲಿಸುವವರು ಒಂದು ವರ್ಷದ ಕುಕ್ಕಿಂಗ್ ಅಥವಾ ಕಲಿನರಿ ಆರ್ಟ್ಸ್ ಡಿಪ್ಲೋಮಾ ಕೋರ್ಸ್ ಮುಗಿಸಿರಬೇಕು ಹಾಗೂ ಪ್ರತಿಷ್ಠಿತ ಹೋಟೆಲ್, ರೆಸ್ಟೋರೆಂಟ್ ಅಥವಾ ಸರ್ಕಾರಿ ಅಂಗ ಸಂಸ್ಥೆಗಳಲ್ಲಿ ಅಡುಗೆದಾರರಾಗಿ ಕಾರ್ಯನಿರ್ವಹಿಸಿರಬೇಕು. ಅದೇ ರೀತಿ ವಯೋಮಿತಿ ಅರ್ಹತೆ ಏನೆಂದು ನೋಡುವುದಾದರೆ ಕನಿಷ್ಠ 18ರಿಂದ 27 ವರ್ಷದ ವಯೋಮಿತಿಯಲ್ಲಿರಬೇಕು.

ಅಭ್ಯರ್ಥಿಗಳನ್ನು ಹೇಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ?:

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಮೂರು ಹಂತಗಳ ಒಟ್ಟು 200 ಅಂಕಗಳಿಗೆ ಆಯ್ಕೆ ವಿಧಾನ ಇರಲಿದೆ. ಮೊದಲನೆಯ ಹಂತದಲ್ಲಿ 100 ಅಂಕಗಳಿಗೆ ಲಿಖಿತ ಪರೀಕ್ಷೆಯನ್ನು ನಡೆಸಲಾಗುತ್ತದೆ, ನಂತರದಲ್ಲಿ 70 ಅಂಕಗಳಿಗೆ ಪ್ರಾಯೋಗಿಕ ಟ್ರೇಡ್ ಸ್ಕಿಲ್ ಟೆಸ್ಟ್ ನಡೆಸಿ ನಂತರದಲ್ಲಿ 30 ಅಂಕಗಳಿಗೆ ಸಂದರ್ಶನ ನಡೆಸಲಾಗುತ್ತದೆ. ಲಿಖಿತ ಪರೀಕ್ಷೆಗೆ ಪರೀಕ್ಷಾ ಕೇಂದ್ರವು ಕನ್ನಡಿಗರಿಗೆ ಬೆಂಗಳೂರಿನಲ್ಲಿಯೂ ಕೂಡ ಲಭ್ಯವಿದೆ.

ಅರ್ಜಿ ಸಲ್ಲಿಕೆಗೆ ಅರ್ಜಿ ಶುಲ್ಕ —  Supreme Court Junior Attendant Recruitment :

* ಸುಪ್ರೀಂ ಕೋರ್ಟ್ ನೇಮಕಾತಿಯ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು 400 ರೂಪಾಯಿ ಅರ್ಜಿ ಶುಲ್ಕ ಪಾವತಿಸಬೇಕು.

* ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಮಾಜಿ ಸೈನಿಕ ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ 200ರೂ. ನಿಗದಿಪಡಿಸಲಾಗಿದೆ.

ನೇಮಕಾತಿಗೆ ಪ್ರಮುಖ ದಿನಾಂಕಗಳು:

* ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗುವ ದಿನಾಂಕ – 23 ಆಗಸ್ಟ್ 2024

* ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಮುಕ್ತಾಯವಾಗುವ ದಿನಾಂಕ – 12 ಸೆಪ್ಟೆಂಬರ್ 2024

ಅರ್ಜಿ ಸಲ್ಲಿಸಲು ಸುಪ್ರೀಂ ಕೋರ್ಟ್ ನ ಅಧಿಕೃತ ಜಾಲತಾಣ – www.sci.gov.in


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ