ಬಾಲಕಿಯ ಕೈ ಹಿಡಿದು ಜಿಪ್ ತೆಗೆಸುವುದು ಲೈಂಗಿಕ ದೌರ್ಜನ್ಯ ಅಲ್ಲ ಎಂದಿದ್ದ ಜಡ್ಜ್ ನ ಬಡ್ತಿಗೆ ಬ್ರೇಕ್!
ದೆಹಲಿ: ಕಾನೂನು ಮರೆತು ಬೇಕಾಬಿಟ್ಟಿ ತೀರ್ಪು ನೀಡಿ ಹಲವು ವಿವಾದಗಳಿಗೆ ಕಾರಣರಾಗಿರುವ ನ್ಯಾಯಧೀಶೆ ಪುಷ್ಪಾ ಗಣೇದಿವಾಲಾ ಅವರನ್ನು ನ್ಯಾಯಾಲಯದ ಖಾಯಂ ನ್ಯಾಯಾಧೀಶರನ್ನಾಗಿ ನೇಮಿಸುವ ಪ್ರಸ್ತಾಪಕ್ಕೆ ಸುಪ್ರೀಂ ಕೋರ್ಟ್ ನ ಕೊಲಿಜಿಯಂ ತಡೆ ನೀಡಿದೆ.
ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪು ನೀಡಿದ್ದ ಪುಷ್ಪಾ ಗಣೇದಿವಾಲಾ, ಅಪ್ರಾಪ್ತ ವಯಸ್ಸಿನ ಬಾಲಕಿಯ ಕೈ ಹಿಡಿಯುವುದು, ಪ್ಯಾಂಟ್ ಜಿಪ್ ತೆಗೆಯುವುದು ಪೋಕ್ಸೋ ಕಾಯ್ದೆಯಡಿಯಲ್ಲಿ ಲೈಂಗಿಕ ದೌರ್ಜನ್ಯ ಎಂದು ಪರಿಗಣಿಸುವಂತಿಲ್ಲ ಎಂದು ತೀರ್ಪು ನೀಡಿದ್ದರು.
ಈ ಹಿಂದೆ ಇದೇ ಪುಷ್ಪ ಅವರು ಚರ್ಮ ಮುಟ್ಟಿದರೆ ಮಾತ್ರವೇ ಲೈಂಗಿಕ ದೌರ್ಜನ್ಯ ಬಟ್ಟೆಯ ಮೇಲಿನಿಂದ ಮುಟ್ಟಿದರೆ ಅದು ಲೈಂಗಿಕ ದೌರ್ಜನ್ಯ ಅಲ್ಲ ಎಂದು ತೀರ್ಪು ನೀಡಿದ್ದರು. ಜನವರಿ 20ರಂದು ಮುಖ್ಯ ನ್ಯಾಯ ಮೂರ್ತಿ ಎಸ್ ಎ ಬೊಬ್ಡೆ ನೇತೃತ್ವದ ಕೊಲಿಜಿಯಂ, ಪುಷ್ಪಾ ಅವರನ್ನು ಖಾಯಂ ನ್ಯಾಯಾಧೀಶರನ್ನಾಗಿ ಮಾಡುವ ಪ್ರಸ್ತಾಪವನ್ನಿಟ್ಟಿತ್ತು. ಆದರೆ ವಿವಾದಾತ್ಮಕ ತೀರ್ಪುಗಳ ಹಿನ್ನೆಲೆಯಲ್ಲಿ ಈ ಪ್ರಸ್ತಾಪದಿಂದ ಹಿಂದಕ್ಕೆ ಸರಿಯಲಾಗಿದೆ ಎಂದು ವರದಿಯಾಗಿದೆ.