ಕನ್ನಡಿಗನ ಪಾತ್ರದಲ್ಲಿ ತಮಿಳುನಟ ಸೂರ್ಯ ನಟನೆ | ಹಾಸ್ಯ ನಟ ವಡಿವೇಲು ಅವರಿಂದಲೂ ಪ್ರಸಂಶೆ ಪಡೆದ “ಸೂರರೈ ಪೊಟ್ರು”
15/11/2020
ತಮಿಳುನಟ ಸೂರ್ಯ ನಟಿಸಿದ, ಕನ್ನಡಿಗ ಕ್ಯಾಪ್ಟನ್ ಗೋಪಿನಾಥ್ ಅವರ ಜೀವನಾಧರಿತ ತಮಿಳು ಚಿತ್ರ ಸೂರರೈ ಪೊಟ್ರು ಸದ್ಯ ಭಾರೀ ಸದ್ದು ಮಾಡುತ್ತಿದೆ. ಈ ಚಿತ್ರಕ್ಕೆ ವಿವಿಧ ನಾಯಕ ನಟರು ಕೂಡ ಸೆಲ್ಯೂಟ್ ಹೊಡೆದಿದ್ದಾರೆ. ಹಾಸ್ಯನಟ ವಡಿವೇಲು ಕೂಡ ಈ ಚಿತ್ರ ನೋಡಿ ಕಣ್ಣೀರು ಬಂತು ಎಂದು ಟ್ವೀಟ್ ಮಾಡಿದ್ದಾರೆ.
ಸೂರರೈ ಪೊಟ್ರು ಸಿನಿಮಾವು ತಮಿಳು, ಕನ್ನಡ, ತೆಲುಗು ಭಾಷೆಗಳಲ್ಲಿ ಬಿಡುಗಡೆ ಆಗಿದೆ. ಡೆಕ್ಕನ್ ಏವಿಯೇಶನ್ಸ್ ಸಂಸ್ಥಾಪಕ ಕ್ಯಾಪ್ಟನ್ ಗೋಪಿನಾಥ್ ಅವರ ಜೀವನ ಆಧರಿಸಿದ ಸಿನಿಮಾವನ್ನು ಸಾಧಾರಣ ಕಮರ್ಷಿಯಲ್ ಲುಕ್ ನೀಡಿ ಚಿತ್ರೀಕರಿಸಲಾಗಿದೆ.
ಸಿನಿಮಾದಲ್ಲಿ ದೊಡ್ಡ ಪಾತ್ರಗಳಿವೆ. ಕನ್ನಡಿಗರಾದ ಅಚ್ಯುತ್ ಕುಮಾರ್, ಪ್ರಕಾಶ್ ಬೆಳವಾಡಿ ಈ ಚಿತ್ರದಲ್ಲಿದ್ದಾರೆ. ನಾಯಕನ ಪಾತ್ರ ಸೂರ್ಯ ನಿರ್ವಹಿಸಿದ್ದಾರೆ. ನಾಯಕಿಯಾಘಿ ಅಪರ್ಣಾ ಕಿಶೋರ್ ನಟಿಸಿದ್ದಾರೆ. ಇನ್ನು ಚಿತ್ರದಲ್ಲಿ ಪರೇಶ್ ರಾವಲ್, ಮೋಹನ್ ಬಾಬು, ಊರ್ವಶಿ ಸೇರಿದಂತೆ ಹಲವರು ನೆನಪಿನಲ್ಲಿಟ್ಟುಕೊಳ್ಳುವಂತೆ ಪಾತ್ರಗಳನ್ನು ನಿರ್ವಹಿಸಿದ್ದಾರೆ.