ಸುರತ್ಕಲ್ ನಲ್ಲಿ ಕೊಲೆಯಾದ ವ್ಯಕ್ತಿ ಫ್ಯಾನ್ಸಿ ಅಂಗಡಿ ನಡೆಸಿಕೊಂಡಿದ್ರು: ಎನ್.ಶಶಿಕುಮಾರ್ ಮಾಹಿತಿ - Mahanayaka

ಸುರತ್ಕಲ್ ನಲ್ಲಿ ಕೊಲೆಯಾದ ವ್ಯಕ್ತಿ ಫ್ಯಾನ್ಸಿ ಅಂಗಡಿ ನಡೆಸಿಕೊಂಡಿದ್ರು: ಎನ್.ಶಶಿಕುಮಾರ್ ಮಾಹಿತಿ

n shashikumar
25/12/2022

ಸುರತ್ಕಲ್ ನ ಕಾಟಿಪಳ್ಳದಲ್ಲಿ ನಡೆದ ಜಲೀಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಹೇಳಿಕೆ ನೀಡಿದ್ದಾರೆ.


Provided by

ಕೊಲೆಯಾದವರು ಫ್ಯಾನ್ಸಿ ಅಂಗಡಿ ನಡೆಸಿಕೊಂಡಿದ್ರು. ಇಂದು ಇಬ್ಬರು ಬಂದು ಚೂರಿ ಇರಿದು ಪರಾರಿಯಾಗಿದ್ದಾರೆ. ಈ ಪ್ರಕರಣದ ಹಿಂದಿರುವ ಉದ್ದೇಶ ಏನು ಅನ್ನೋದು ಗೊತ್ತಿಲ್ಲ. ಸ್ಥಳೀಯರು ಕೆಲವು ಅನುಮಾನಗಳನ್ನು ವ್ಯಕ್ತಪಡಿಸಿ ಹೇಳಿದ್ದಾರೆ. ಆ ಅನುಮಾನಗಳ ಬಗ್ಗೆಯೂ ನಾವು  ಪರಿಶೀಲನೆ ನಡೆಸುತ್ತೇವೆ ಎಂದರು.

ಇನ್ನು ಈ ಬಗ್ಗೆ ತನಿಖೆ ನಡೆಸಿದ ಬಳಿಕ ಎಲ್ಲವೂ ಹೇಳಲು ಸಾಧ್ಯ‌. ಘಟನೆ ನಡೆದಿರುವ ಸ್ಥಳ ಹಿಂದಿನಿಂದಲೂ ಸೂಕ್ಷ್ಮ ಪ್ರದೇಶವಾಗಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಕ್ರಿಸ್ಮಸ್ ಇರುವ ಕಾರಣ ಅಗತ್ಯ ಬಿದ್ರೆ ಸೆಕ್ಷನ್ 144 ಜಾರಿ ಮಾಡ್ತೇವೆ ಎಂದು ಸ್ಪಷ್ಟನೆ ನೀಡಿದ ಅವರು, ಈ ಹಿಂದಿನಂತೆ ಅಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗಿತ್ತೋ ಅದು ಮಾಡ್ತೇವೆ. ಹೆಚ್ಚಿನ ಭದ್ರತೆಯನ್ನು  ಅಗತ್ಯ ಸ್ಥಳಗಳಲ್ಲಿ ನಿಯೋಜಿಸಿಲಾಗುತ್ತದೆ. ಸ್ಥಳೀಯರ ಮುಖಂಡರ ಜೊತೆ ಚರ್ಚಿಸಿ ಅಗತ್ಯ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.


Provided by

ಇನ್ನು ಅನೈತಿಕ ಗೂಂಡಾಗಿರಿ ಮಟ್ಟ ಹಾಕಿಲ್ಲ ಅನ್ನೋ ಯು.ಟಿ.ಖಾದರ್ ಆರೋಪದ ಕುರಿತು ಮಾಧ್ಯಮದವರು ಪ್ರತಿಕ್ರಿಯೆ ಕೇಳಿದಾಗ, ಶಾಸಕರು ಏನು ಹೇಳಿದ್ದಾರೆ ಅನ್ನೋ ಬಗ್ಗೆ ನನಗೆ ಮಾಹಿತಿ ಇಲ್ಲ. ಡಿಸೆಂಬರ್ ತಿಂಗಳಲ್ಲಿ ಹಲವು ಗೂಂಡಾಗಿರಿ ಪ್ರಕರಣಗಳು ನಡೆದಿದೆ. ಈ ಎಲ್ಲಾ ಪ್ರಕರಣದಲ್ಲಿ ನಾವು ಪ್ರಕರಣ ದಾಖಲಿಸಿ ಅರೆಸ್ಟ್ ಮಾಡಿದ್ದೇವೆ. ಕಳೆದ ಒಂದು ವಾರದಿಂದ ಇಂತಹ ಕೃತ್ಯದಲ್ಲಿ ಭಾಗಿಯಾದವರ ಮೇಲೆ ಕ್ರಮ ತೆಗೆದುಕೊಳ್ಳಲಾಗಿದೆ. ಅಗತ್ಯ ಕ್ರಮವಾಗಿ ಕೃತ್ಯಕ್ಕೆ ಮುಂದಾದವರ ಮೇಲೆ ಸೂಕ್ತ ಕ್ರಮ ಆಗಿದೆ. ಮುಂದೆ ಅಂತಹ ಕೃತ್ಯ ನಡೆಯದಂತೆಯೂ ಮುಂಜಾಗ್ರತ ಕ್ರಮ ಆಗಿದೆ. ಆದ್ರೆ ನನ್ನ ವ್ಯಾಪ್ತಿಯಲ್ಲಿ ಏನು ಮುಂಜಾಗ್ರತೆ ವಹಿಸಬೇಕೋ ಅದು ಮಾಡಿದ್ದೇವೆ ಎಂದು ಸ್ಪಷ್ಟನೆ ನೀಡಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ