ಸುರತ್ಕಲ್ ಟೋಲ್ ಶುಲ್ಕ ಸಂಗ್ರಹ ರದ್ದು: ಸಂಸದರು, ಶಾಸಕರಿಗೆ ದಿಕ್ಕಾರ ಕೂಗಿ ವಿಜಯೋತ್ಸವ!
ಮಂಗಳೂರು ನಗರದ ಸುರತ್ಕಲ್ ಎನ್ ಐಟಿಕೆ ಟೋಲ್ ಗೇಟ್ ನಲ್ಲಿ ನವೆಂಬರ್ 30ರ ಮಧ್ಯರಾತ್ರಿಯಿಂದ ಟೋಲ್ ಶುಲ್ಕ ಸಂಗ್ರಹ ನಿಲ್ಲಿಸಿದೆ.
ಟೋಲ್ ಗೇಟ್ ನಲ್ಲಿ ಟೋಲ್ ಸಂಗ್ರಹ ನಿಲ್ಲಿಸಿದ ಕ್ಷಣವೇ ಹೋರಾಟಗಾರರ ಸಂಭ್ರಮ ಮುಗಿಲು ಮುಟ್ಟಿತ್ತು. ಹೋರಾಟ ಸಮಿತಿಯ ಮುಖಂಡರು ಕೇಕ್ ಗಳನ್ನು ಕತ್ತರಿಸುವ ಮೂಲಕ ಸಂಭ್ರಮಾಚರಣೆಯನ್ನು ಆಚರಿಸಿದರು.
ಹೋರಾಟ ಸಮಿತಿಯ ಮುಖಂಡರು, ಕಾರ್ಯಕರ್ತರು ಹಾಗೂ ದ.ಕ. ಮತ್ತು ಉಡುಪಿ ಜಿಲ್ಲೆಯ ಸಮಾನ ಮನಸ್ಕ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು.
ಸಂಭ್ರಮಾಚರಣೆಯ ವೇಳೆ ಹೋರಾಟ ಸಮಿತಿಗೆ ಜಯಘೋಷಗಳನ್ನು ಕೂಗಿದರು. ಚಂಡೆಯ ವಾದನ, ಹಾಡುಗಳಿಗೆ ಕುಣಿದು ಕುಪ್ಪಳಿಸಿದ ಕಾರ್ಯಕರ್ತರು, ಟೋಲ್ ಗೇಟ್ ಬಳಿ ಹಾಕಲಾಗಿದ್ದ ಧರಣಿ ಮಂಟಪದ ಬಳಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಜೊತೆಗೆ ಅವಿಭಜಿತ ದ.ಕ. ಜಿಲ್ಲೆಯ ಸಂಸದರು, ಶಾಸಕರಿಗೆ ದಿಕ್ಕಾರ ಕೂಗಿದರು.
ನಾಳೆಯಿಂದ ಮತ್ತೊಂದು ಹೋರಾಟ:
ಕಳೆದ 35 ದಿನಗಳಿಂದ ಮಂಗಳೂರು ನಗರದ ಸುರತ್ಕಲ್ ಅಕ್ರಮ ಟೋಲ್ ಗೇಟ್ ತೆರವುಗೊಳಿಸಬೇಕೆಂದು ಆಗ್ರಹಿಸಿ ನಡಿತಾ ಇದ್ದ ಹಗಲು ರಾತ್ರಿ ಧರಣಿ ಇಂದು ಮುಕ್ತಾಯಗೊಂಡಿದೆ.
ಅಲ್ಲದೆ ಟೋಲ್ ಗೇಟ್ ಸಮೀಪದ ಧರಣಿ ವೇದಿಕೆಯಲ್ಲಿ ಗೆಲುವಿನ ಸಂಭ್ರಮಾಚರಣೆ ಕೂಡ ಮಾಡಲಾಗಿದೆ. ಇದೇ ಬೆನ್ನಲ್ಲೇ ಮತ್ತೊಂದು ಹೋರಾಟಕ್ಕೆ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ನಿರ್ಧಾರ ಮಾಡಿದೆ.
ಸುರತ್ಕಲ್ ಅಕ್ರಮ ಟೋಲ್ ಸುಂಕವನ್ನು ಹೆಜಮಾಡಿಯಲ್ಲಿ ಸಂಗ್ರಹಿಸುವ ಆದೇಶ ರದ್ದುಗೊಳಿಸಲು ಆಗ್ರಹಿಸಿ ಸಂಸದ, ಶಾಸಕರ ವೈಫಲ್ಯ ಖಂಡಿಸಿ ಹೆಜಮಾಡಿ ಚಲೋ ಎಂಬ ಸಾಮೂಹಿಕ ಧರಣಿ ನಡೆಸಲು ವಿರೋಧಿ ಹೋರಾಟ ಸಮಿತಿ ಹಾಗೂ ಸಮಾನಮನಸ್ಕಾರ ಸಂಘಟನೆಗಳು ಉಡುಪಿ ದಕ್ಷಿಣ ಕನ್ನಡ ನಿರ್ಧಾರ ಮಾಡಿದೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಗ್ಗೆ 9:30 ರಿಂದ ಹೆಜಮಾಡಿ ಚಲೋ ಎಂಬ ಸಾಮೂಹಿಕ ಧರಣಿ ನಾಳೆಯಿಂದ ಆರಂಭವಾಗಲಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka