ಜಾತಕ ಸರಿ ಇಲ್ಲ ಎಂದು ಮುರಿದು ಬಿದ್ದ ಮದುವೆ: ನೊಂದ ಲೇಡಿ ಕಾನ್ಸ್ ಟೇಬಲ್ ಸಾವಿಗೆ ಶರಣು!
ಹೈದರಾಬಾದ್: ಮದುವೆಯ ವಯಸ್ಸಾದರೂ ಇನ್ನೂ ಮದುವೆಯಾಗಿಲ್ಲ ಎನ್ನುವ ನೋವಿನಿಂದ ಮಹಿಳಾ ಕಾನ್ಸ್ ಟೇಬಲ್ ವೊಬ್ಬರು ಸಾವಿಗೆ ಶರಣಾಗಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.
ತೆಲಂಗಾಣದ ಕಂದಕುರ ಮಂಡಲದ ಜೈತವರಮ್ ಗ್ರಾಮದ ಸುರೇಖಾ(28) ಸಾವಿಗೆ ಶರಣಾಗಿರುವ ಮಹಿಳಾ ಕಾನ್ಸ್ ಟೇಬಲ್ ಆಗಿದ್ದು, ಇವರು ಹೈದರಾಬಾದ್ ನ ಛತ್ರಿನಕ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸಿದ್ದರು.
ಒಂದು ವರ್ಷದ ಹಿಂದೆಯಷ್ಟೇ ಇವರಿಗೆ ಯುವಕನೋರ್ವನೊಂದಿಗೆ ನಿಶ್ಚಿತಾರ್ಥ ನಡೆದಿತ್ತು. ಆದರೆ ಇಬ್ಬರ ಜಾತಕ ಹೊಂದಾಣಿಕೆಯಾಗುವುದಿಲ್ಲ ಎಂಬ ವಿವಾದದಿಂದಾಗಿ ನಿಶ್ಚಿತಾರ್ಥ ಮುರಿದು ಬಿದ್ದಿತ್ತು. ಮದುವೆಯ ಬಗ್ಗೆ ಸಾಕಷ್ಟು ಕನಸು ಕಂಡಿದ್ದ ಸುರೇಖಾ, ಮದುವೆ ಮುರಿದು ಬಿದ್ದ ಹಿನ್ನೆಲೆಯಲ್ಲಿ ತೀವ್ರವಾಗಿ ನೊಂದು ಮೇ 3ರಂದು ಅವರು ತಮ್ಮ ಮನೆಯಲ್ಲೇ ಸಾವಿಗೆ ಶರಣಾಗಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw