ಮಲಯಾಳಂ ನಟ ಸುರೇಶ್ ಗೋಪಿಯ ವಿಚಿತ್ರ ಗಡ್ಡ ನೋಡಿ ವೆಂಕಯ್ಯ ನಾಯ್ಡು ಕೇಳಿದ್ದೇನು? | ವಿಡಿಯೋ ವೈರಲ್
ನವದೆಹಲಿ: ಖ್ಯಾತ ಮಲಯಾಳಂ ನಟ, ರಾಜ್ಯಸಭಾ ಸದಸ್ಯ ಸುರೇಶ್ ಗೋಪಿ ಹಾಗೂ ರಾಜ್ಯಸಭಾ ಸಭಾಪತಿ, ಉಪ ರಾಷ್ಟ್ರಪತಿ ವೆಂಕಯ್ಯನಾಯ್ಡು ಅವರ ಸಂಭಾಷಣೆಯ ವಿಡಿಯೋ ಇದೀಗ ತೀವ್ರ ಚರ್ಚೆಯಾಗುತ್ತಿದೆ.
ಸುರೇಶ್ ಗೋಪಿ ಅವರು ಮಾತನಾಡಲು ಎದ್ದು ನಿಂತು ಮಾತು ಆರಂಭಿಸಿದರು. ಈ ವೇಳೆ ಸುರೇಶ್ ಗೋಪಿ ಅವರ ಗಡ್ಡ ನೋಡಿ ಅಚ್ಚರಿಗೊಳಗಾದ ವೆಂಕಯ್ಯ ನಾಯ್ಡು, ಇದೇನು ಗಡ್ಡವೋ ಅಥವಾ ಮುಖವಾಡವೋ ಎಂದು ಕೇಳಿದರು. ಇದಕ್ಕೆ ಉತ್ತರಿಸಿದ ಸುರೇಶ್ ಗೋಪಿ, ಸರ್, ಗಡ್ಡ ಇದು… ನನ್ನ ಹೊಸ ಸಿನಿಮಾಕ್ಕೆ ಎಂದು ಉತ್ತರಿಸಿದರು.
ವೆಂಕಯ್ಯನಾಯ್ಡು ಹಾಗೂ ಸುರೇಶ್ ಗೋಪಿ ಅವರ ಸಂಭಾಷಣೆಯ ಕೆಲವೇ ಕ್ಷಣಗಳ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಏಳು ವರ್ಷಗಳ ನಂತರ ನಿರ್ದೇಶಕ ಜೋಶಿ ಮತ್ತು ಸುರೇಶ್ ಗೋಪಿ ಮತ್ತೆ ಒಂದಾಗುತ್ತಿದ್ದು, ‘ಪಾಪ್ಪನ್’ ಎಂಬ ಚಿತ್ರದಲ್ಲಿ ನಿರ್ಮಾಣದಲ್ಲಿ ತೊಡಗಿದ್ದಾರೆ. ಮ್ಯಾಥ್ಯೂಸ್ ಪಾಪ್ಪನ್ ಐಪಿಎಸ್ ಪಾತ್ರದಲ್ಲಿ ಸುರೇಶ್ ಗೋಪಿ ನಟಿಸಲಿದ್ದಾರೆ. ಚಿತ್ರದಲ್ಲಿ ಗೋಕುಲ್ ಸುರೇಶ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ.
ಬಹಳ ದಿನಗಳ ನಂತರ ಸುರೇಶ್ ಗೋಪಿ ಈ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿಯಾಗಿ ನಟಿಸುತ್ತಿದ್ದಾರೆ. ಸೂಪರ್ ಹಿಟ್ ‘ಪೊರಿಂಚು ಮರಿಯಮ್ ಜೋಸ್ ‘ ನಂತರ ಜೋಶಿ ಅವರ ಮತ್ತೊಂದು ಕ್ರೈಮ್ ಥ್ರಿಲ್ಲರ್ ಚಿತ್ರ ‘ಪಾಪ್ಪನ್’ ಚಿತ್ರವಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ https://chat.whatsapp.com/FZkISFWKknBDvdYkMVFArW
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಪ್ರೇಯಸಿಯ ನಗ್ನ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಯುವಕನ ಬಂಧನ
ಚಲಿಸುತ್ತಿದ್ದ ಬಸ್ಸಿನಲ್ಲಿ ಬಿಯರ್ ಕುಡಿದು ಡಾನ್ಸ್ ಮಾಡಿದ ವಿದ್ಯಾರ್ಥಿಗಳು!: ವಿಡಿಯೋ ವೈರಲ್
ಅರವಿಂದ್ ಕೇಜ್ರಿವಾಲ್ ‘ಅರ್ಬನ್ ನಕ್ಸಲ್’: ಬಿಜೆಪಿ ಮುಖಂಡ ಅಮಿತ್ ಮಾಳವಿಯಾ
ಪತಿಯನ್ನು ಮರಕ್ಕೆ ಕಟ್ಟಿ, ಪತ್ನಿ ಮೇಲೆ ಸಾಮೂಹಿಕ ಅತ್ಯಾಚಾರ
ಬಿರ್ಭೂಮ್ ಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ಆದೇಶಿಸಿದ ಕೋಲ್ಕತ್ತಾ ಹೈಕೋರ್ಟ್