ಬಿಟ್ರೋಟ್ ಬಳಕೆಯಿಂದ ನಮ್ಮ ಆರೋಗ್ಯಕ್ಕೆ ಏನೇನು ಲಾಭ ಇದೆ ಗೊತ್ತಾ? - Mahanayaka
3:46 AM Thursday 21 - November 2024

ಬಿಟ್ರೋಟ್ ಬಳಕೆಯಿಂದ ನಮ್ಮ ಆರೋಗ್ಯಕ್ಕೆ ಏನೇನು ಲಾಭ ಇದೆ ಗೊತ್ತಾ?

surprising health benefits of beetroot
09/08/2021

ಮುಖದ ಮತ್ತು ಚರ್ಮದ ಆರೋಗ್ಯಕ್ಕಾಗಿ ಬಹಳಷ್ಟು ಜನರು ರಾಸಾಯನಿಕಗಳ ಮೊರೆ ಹೋಗುತ್ತಾರೆ. ಇದರಿಂದ ನಾನಾ ರೀತಿಯ ಆರೋಗ್ಯ ಸಮಸ್ಯೆಗೆ ಜನರು ತುತ್ತಾಗುವುದೂ ಇದೆ. ಆದರೆ,  ಕಬ್ಬಿನಾಂಶ ಮತ್ತು ವಿಟಮಿನ್ ಗಳ ಉಗ್ರಾಣ ಎಂದೇ ಕರೆಯಲ್ಪಡುವ ಬಿಟ್ರೋಟ್ ಬಳಕೆಯಿಂದ ನಮ್ಮ ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ.

ಮೈ ಬಣ್ಣವನ್ನು ಹೆಚ್ಚಿಸಲು ಬಿಟ್ರೋಟ್ ರಸವನ್ನು ಮುಖಕ್ಕೆ ಹಚ್ಚಿಕೊಂಡು 10-15 ನಿಮಷಗಳ ಬಳಿಕ ತೊಳೆಯ ಬೇಕು. ಬಿಟ್ರೋಟ್ ನಲ್ಲಿರುವ ವಿಟಮಿನ್ ಸಿ ಚರ್ಮದ ವರ್ಣದ್ರವ್ಯವನ್ನು ತಡೆಯುತ್ತದೆ. ಈ ರೀತಿಯಾಗಿ ಮಾಡುವುದರಿಂದ ಚರ್ಮದ ಆರೋಗ್ಯವು ನೈಸರ್ಗಿಕವಾಗಿ ಸುಧಾರಿಸುತ್ತದೆ.

ಬಹುತೇಕ ಮಹಿಳೆಯರು ತಮ್ಮ ತುಟಿಗಳ ಸೌಂದರ್ಯಕ್ಕೆ  ಲಿಪ್ಸ್ ಸ್ಟಿಕ್  ಬಳಸುತ್ತಾರೆ. ಇದರಿಂದ ಬಹಳಷ್ಟು ಮಹಿಳೆಯರ ತುಟಿಗಳಿಗೆ ಹಾನಿಯಾಗುತ್ತದೆ. ಜೊತೆಗೆ ರಾಸಾಯನಿಕಗಳನ್ನು ಲಿಪ್ಸ್ ಸ್ಟಿಕ್ ಗಳಲ್ಲಿ ಬಳಸುವುದರಿಂದಾಗಿ ಅವು ಹೊಟ್ಟೆಗೆ ಹೋಗಿ ನಾನಾ ಕಾಯಿಲೆಗಳಿಗೂ ಕಾರಣವಾಗಬಹುದು. ಆದರೆ ಬಿಟ್ರೋಟ್ ತುಟಿಗಳ ಸೌಂದರ್ಯಕ್ಕೆ ಉತ್ತಮವಾಗಿದೆ.

ಕಪ್ಪು ಮತ್ತು ಒಣ ತುಟಿಗಳ ಆರೋಗ್ಯಕ್ಕೆ ಬಿಟ್ರೋಟ್ ಉತ್ತಮ ಪರಿಹಾರವಾಗಿದೆ. ಬಿಟ್ರೋಟ್ ರಸವನ್ನು ನೇರವಾಗಿ ತುಟಿಗಳಿಗೆ ಹಚ್ಚಬಹುದು. ಅಥವಾ ಬಿಟ್ರೋಟ್ ಸ್ಲೈಸ್ ತೆಗೆದುಕೊಂಡು ಅದರ ಮೇಲೆ ಸಕ್ಕರೆ ಹಾಕಿ ಅದನ್ನು ತುಟಿಗೆ ಹಚ್ಚಬೇಕು. ಇದರಿಂದ ತುಟಿಯಲ್ಲಿ ಸತ್ತ ಜೀವಕೋಶಗಳಿಗೆ ಸತ್ವ ಬರುತ್ತದೆ. ಜೊತೆಗೆ ತುಟಿಯಲ್ಲಿ ಆವರಿಸಿರುವ ಕಪ್ಪು ಬಣ್ಣ ಕ್ರಮೇಣ ಬದಲಾಗುತ್ತಾ ಹೋಗುತ್ತದೆ.




ಇತ್ತೀಚಿನ ಸುದ್ದಿ