ಸುರತ್ಕಲ್ ಟೋಲ್ ಸುಲಿಗೆಯ ಹಣ ಬಿಜೆಪಿ ಬೆಂಬಲಿತ ಕ್ರಿಮಿನಲ್ ಕೂಟಗಳ ಪಾಲು: ಅಭಯ ಚಂದ್ರ ಜೈನ್ ಆರೋಪ - Mahanayaka

ಸುರತ್ಕಲ್ ಟೋಲ್ ಸುಲಿಗೆಯ ಹಣ ಬಿಜೆಪಿ ಬೆಂಬಲಿತ ಕ್ರಿಮಿನಲ್ ಕೂಟಗಳ ಪಾಲು: ಅಭಯ ಚಂದ್ರ ಜೈನ್ ಆರೋಪ

abhayachandra jain
10/10/2022

ಮೂಡಬಿದ್ರೆ: ಸರಕಾರದ ತೀರ್ಮಾನದ ಹೊರತಾಗಿಯು ಸುರತ್ಕಲ್ ಅಕ್ರಮ ಟೋಲ್ ಗೇಟ್ ತೆರವುಗೊಳಿಸದೆ ಇರುವುದರ ಹಿಂದೆ ಬಿಜೆಪಿಯ ಶಾಸಕ, ಸಂಸದರು ಇದ್ದಾರೆ. ಅಲ್ಲಿ ಜನರಿಂದ ಸುಲಿಗೆ ಮಾಡುವ ಹಣ ಬಿಜೆಪಿ ಬೆಂಬಲಿತ ಕ್ರಿಮಿನಲ್ ಗಳ, ಗೂಂಡಾಗಳ ಪಾಲಾಗುತ್ತದೆ. ಕ್ರಿಮಿನಲ್ ಗೂಂಡಾಗಳನ್ನು ಸಾಕಲಿಕ್ಕಾಗಿಯೇ ಬಿಜೆಪಿ ನಾಯಕರು ಸುರತ್ಕಲ್ ಟೋಲ್ ಗೇಟ್ ತೆರವಿಗೆ ಅಡ್ಡಿಯಾಗಿದ್ದಾರೆ. ಈ ಅಕ್ರಮದಲ್ಲಿ ಸಂಸದರು, ಶಾಸಕರುಗಳು ಭಾಗಿಯಾಗಿದ್ದಾರೆ ಎಂದು ಮಾಜಿ ಸಚಿವ ಅಭಯ ಚಂದ್ರ ಜೈನ್ ಗಂಭೀರ ಆರೋಪ ಮಾಡಿದರು.


Provided by

ಅಕ್ಟೋಬರ್ 18 ರಂದು ನಡೆಯಲಿರುವ ಸುರತ್ಕಲ್ ಟೋಲ್ ಗೇಟ್ ಮುತ್ತಿಗೆ ಪ್ರತಿಭಟನೆಯ ಸಿದ್ದತೆಗಾಗಿ  ಮೂಡಬಿದ್ರೆ ಸಮಾಜ ಮಂದಿರದಲ್ಲಿ ಆಯೋಜಿಸಲಾಗಿದ್ದ ತಾಲೂಕು ಮಟ್ಟದ ಸಮಾನ ಮನಸ್ಕ ಸಂಘಟನೆಗಳ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ ಮಾತನಾಡಿ, ಶಾಂತಿಯುತವಾಗಿ ನಡೆಯಲಿರುವ ಟೋಲ್ ಗೇಟ್ ಮುತ್ತಿಗೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನರು ಭಾಗವಹಿಸುವಂತೆ ಪ್ರೇರೇಪಿಸಬೇಕು. ಆ ಮೂಲಕ ಬಿಜೆಪಿಯ ಜನ ವಿರೋಧಿ ಆಡಳಿತಕ್ಕೆ ತಕ್ಕ ಪಾಠ ಕಲಿಸಲು ಸಾಧ್ಯವಾಗಬೇಕು ಎಂದು ಹೇಳಿದರು.


Provided by

muttige

ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಕೆ.ಯಾದವ ಶೆಟ್ಟಿ, ತಾಲೂಕು ಕಾಂಗ್ರೆಸ್ ಅಧ್ಯಕ್ಷ ವಲೇರಿಯನ್, ವಕ್ತಾರ ರಾಜೇಶ್ ಕಡಲಕೆರೆ, ಪುರಸಭಾ ಸದಸ್ಯರಾದ ಸುರೇಶ್ ಕೋಟ್ಯಾನ್, ಪುರಂದರ,,ಮಹೇಶ್ ಪ್ರಭು, ಕರೀಂ,  ಕಾರ್ಮಿಕ ಮುಂದಾಳುಗಳಾದ ರಮಣಿ, ಲಕ್ಷ್ಮಿ ಮೂಡಬಿದ್ರೆ, ದಲಿತ ನಾಯಕರಾದ ಎಂ.ದೇವದಾಸ್, ರಘು ಎಕ್ಕಾರು, ರೈತ ಸಂಘದ ಲಿಯೋ ನಝರತ್, ಓಲ್ವಿನ್ ಮೆನೇಜಸ್, ಸುಂದರ ಶೆಟ್ಟಿ, ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ‌ ಆಸಿಫ್ ಮೂಡಬಿದ್ರೆ, ಸಾಮಾಜಿಕ ಕಾರ್ಯಕರ್ತರಾದ ಹೇಮಲತಾ, ಮಾನಸಿ ಶೆಟ್ಟಿ, ನಿಸಾರ್ ಕರಾವಳಿ, ಸಿರಾಜ್ ಬಜ್ಪೆ ಮತ್ತಿತರರು ಉಪಸ್ಥಿತರಿದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ