ಪತ್ನಿಯ ಶೀಲಶಂಕಿಸಿ ಹತ್ಯೆ: ಸಾಕ್ಷಿ ನಾಶ ಮಾಡಲು ಮೃತದೇಹ ಸುಟ್ಟು ಹಾಕಿದ ಪತಿ
ಕೊಪ್ಪಳ: ಪತ್ನಿಯ ಶೀಲಶಂಕಿಸಿ ಆಕೆಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಲ್ಲದೇ ಸಾಕ್ಷಿ ನಾಶಕ್ಕಾಗಿ ಆಕೆಯ ಮೃತದೇಹವನ್ನು ಸುಟ್ಟು ಹಾಕಿರುವ ಅಮಾನವೀಯ ಘಟನೆ ಉತ್ತರ ಕರ್ನಾಟಕ ಕೊಪ್ಪಳ ಜಿಲ್ಲೆಯ ಅರಕೇರಿ ಗ್ರಾಮದಲ್ಲಿ ನಡೆದಿದೆ.
ಸೆಪ್ಟೆಂಬರ್ 7ರ ತಡ ರಾತ್ರಿ ಈ ಘಟನೆ ನಡೆದಿದೆ. ಪತ್ನಿ ಗೀತಾಳನ್ನು ಪತಿ ದೇವರೆಡ್ಡೆಪ್ಪ ಮಲ್ಲಾರೆಡ್ಡೆಪ್ಪ ಭಾವಿಕಟ್ಟಿ, ಕಟ್ಟಿಗೆಯಿಂದ ಹೊಡೆದು ಅಮಾನವೀಯವಾಗಿ ಹತ್ಯೆ ನಡೆಸಿದ್ದ. ಬಳಿಕ ತನ್ನ ಕುಟುಂಬಸ್ಥರೊಂದಿಗೆ ಸೇರಿ, ಬೆಂಕಿ ಹಾಕಿ ಮೃತದೇಹವನ್ನು ಸುಟ್ಟು ಹಾಕಿದ್ದ.
ಪತ್ನಿಯ ಶೀಲದ ಮೇಲೆ ಶಂಕೆ:
ಪತ್ನಿಯ ಶೀಲದ ಮೇಲೆ ಶಂಕಿಸಿದ್ದ ಪತಿ, ಮಕ್ಕಳಾಗದ ಕಾರಣ ಇಟ್ಟುಕೊಂಡು ಜಗಳ ಆರಂಭಿಸಿದ್ದ ಬಳಿಕ ಮನೆಯ ಬೆಡ್ ರೂಮಿನಲ್ಲಿ ಗೀತಾ ಅವರನ್ನು ಅಮಾನವೀಯವಾಗಿ ಥಳಿಸಿ ಹತ್ಯೆ ಮಾಡಿದ್ದ.
ಹತ್ಯೆಯ ಬಳಿಕ ಮೃತಳ ತಂದೆ, ತಾಯಿಗೆ ಸುಳ್ಳು ಹೇಳಿ ಮೃತ ದೇಹವನ್ನು ಅವಸರದಿಂದ ಸ್ಮಶಾನಕ್ಕೆ ತೆಗೆದುಕೊಂಡು ಹೋಗಿ ಬೆಂಕಿ ಹಾಕಿ ಸುಟ್ಟಿದ್ದರು.
ಮೃತಳ ಸಹೋದರ ಸಿದರೆಡ್ಡಿ ಕುಕನೂರು ಪೊಲೀಸ್ ಠಾಣೆಯಲ್ಲಿ ಘಟನೆ ಸಂಬಂಧ ಪ್ರಕರಣ ದಾಖಲಿಸಿದ್ದಾರೆ. ಸದ್ಯ ಕೊಲೆಗೈದ ಆರೋಪಿ ಹಾಗೂ ಆತನ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: