ಪೊದೆಯೊಳಗೆ ಸುಟ್ಟು ಕರಕಲಾಗಿರುವ ಸ್ಥಿತಿಯಲ್ಲಿ ಮಹಿಳೆಯ ಮೃತದೇಹ ಪತ್ತೆ! - Mahanayaka

ಪೊದೆಯೊಳಗೆ ಸುಟ್ಟು ಕರಕಲಾಗಿರುವ ಸ್ಥಿತಿಯಲ್ಲಿ ಮಹಿಳೆಯ ಮೃತದೇಹ ಪತ್ತೆ!

12/03/2021

ಫತೇಪುರ;  ಸುಟ್ಟುಕರಕಲಾಗಿರುವ ಸ್ಥಿತಿಯಲ್ಲಿ ಮಹಿಳೆಯೊಬ್ಬರ ಮೃತದೇಹ ಪೊದೆಯೊಂದರಲ್ಲಿ ಪತ್ತೆಯಾಗಿರುವ  ಘಟನೆ ಫತೇಪುರ ಜಿಲ್ಲೆಯ ಕಲ್ಯಾಣಪುರದಲ್ಲಿ  ಪತ್ತೆಯಾಗಿದ್ದು,  ಗ್ರಾಮಸ್ಥರು ನೀಡಿದ ಮಾಹಿತಿಯ ಮೇರೆಗೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ಸುಮಾರು 25 ವರ್ಷ ವಯಸ್ಸಿನ ಮಹಿಳೆಯ ಮೃತದೇಹ ಮುರಾದಿಪುರ-ಬಿಂಡ್ಕಿ ರಸ್ತೆ ಬದಿಯ ಪೊದೆಯಲ್ಲಿ  ಶವ ಪತ್ತೆಯಾಗಿದೆ.  ಈ ಮೃತದೇಹ ಯಾರದ್ದು ಎನ್ನುವುದು ಇನ್ನೂ ಗುರುತು ಪತ್ತೆಯಾಗಿಲ್ಲ. ಹತ್ಯೆ ಮಾಡಿದ ಬಳಿಕ ಸುಟ್ಟು ಪೊದೆಯಲ್ಲಿ ಎಸೆದು ಹೋಗಲಾಗಿದೆ ಎಂದು ಅನುಮಾನ ಸೃಷ್ಟಿಯಾಗಿದೆ.

ಮಹಿಳೆಯನ್ನು ಬೇರೆ ಯಾವುದೋ ಪ್ರದೇಶದಲ್ಲಿ ಕೊಂದು ಶವವನ್ನು ಇಲ್ಲಿ ಎಸೆದು ಬೆಂಕಿ ಹಚ್ಚಿರುವಂತೆ ಕಂಡು ಬರುತ್ತಿದೆ ಎಂದು ಹೇಳಿದರು. ಇನ್ನೂ ಮೃತರ ಗುರುತು ಪತ್ತೆಯಾಗಿ  ನಾಪತ್ತೆಯಾದವರ ವಿವರಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.

ಇತ್ತೀಚಿನ ಸುದ್ದಿ