ಸನ್ಮಾನ ಮಾಡಿದ್ದೇ ಬಂತು; ಸ್ವಚ್ಛತಾ ಕಾರ್ಮಿಕರಿಗೆ ಇನ್ನೂ ಸಿಕ್ಕಿಲ್ಲ ವೇತನ
ಬೆಂಗಳೂರು: ಕೊರೊನಾ ಸಂದರ್ಭದಲ್ಲಿ ಸ್ವಚ್ಛತಾ ಕಾರ್ಮಿಕರಿಗೆ ಹೂವಿನಅಭಿಷೇಕ ಮಾಡಿದ್ದೇ … ಮಾಡಿದ್ದು… ಆದ್ರೆ… ಸಂಬಳ ಇಲ್ಲಿಯವರೆಗೆ ನೀಡಿಲ್ವಂತೆ. ಇದೇ ನೋಡಿ ಸನ್ಮಾನ ಮಾಡಿ ಕತ್ತು ಕೊಯ್ಯುವುದು ಅಂದ್ರೆ….
ಕೊವಿಡ್ ಕೇರ್ ಸೆಂಟರ್ ಗಳಲ್ಲಿ ತಮ್ಮ ಪ್ರಾಣವನ್ನೂ ಲೆಕ್ಕಿಸದೇ ಹೌಸ್ ಕೀಪಿಂಗ್, ಕೊರೊನಾ ಸೋಂಕಿತರ ಬಟ್ಟೆ ವಾಶ್ ಮಾಡುತ್ತಾ, ಅವರಿಗೆ ಊಟ-ಉಪಚಾರ ಮಾಡುತ್ತಿದ್ದವರಿಗೆ ಬಿಬಿಎಂಪಿ ಇನ್ನೂ ವೇತನ ನೀಡೇ ಇಲ್ಲ. 1 ತಿಂಗಳುಗಳ ಕಾಲ ಕೊರೊನಾ ಸೋಂಕಿತರ ನಡುವೆ 300 ಕೆಲಸಗಾರರು ತಮ್ಮ ಪ್ರಾಣವನ್ನೂ ಲೆಕ್ಕಿಸದೇ ಕೆಲಸ ಮಾಡಿದ್ದಾರೆ. ಆದರೆ 300 ಕೆಲಸಗಾರರ ಸಂಬಳವನ್ನು ಕೊಡುವ ಯೋಗ್ಯತೆ ಬಿಬಿಎಂಪಿಗೆ ಇಲ್ಲವಾಗಿದೆ.
ಕೊವಿಡ್ ಸೆಂಟರ್ ಗಳನ್ನು ಮುಚ್ಚಿ 3-4 ತಿಂಗಳಾಗಿದೆ. ಆದರೆ ಕಾರ್ಮಿಕರಿಗೆ ಇನ್ನೂ ಹಣ ನೀಡಲಾಗಿಲ್ಲ. ಕೆಲಸ ಮಾಡಿದವರು ಸಂಬಳ ಕೇಳುತ್ತಿದ್ದಾರೆ. ಗುತ್ತಿಗೆದಾರರು ಬಿಬಿಎಂಪಿಯಿಂದ ಹಣ ಬರದೇ ಹಣ ನೀಡಲು ಸಾಧ್ಯವಾಗದೇ ಕಂಗಾಲಾಗಿದ್ದಾರೆ.
300 ಕೆಲಸಗಾರರು ಕರ್ತವ್ಯ ನಿರ್ವಹಿಸಿದ್ದರು. ಇದು ಸೇರಿದಂತೆ ಒಟ್ಟು 8 ಕೋಟಿಯಷ್ಟು ಬಿಲ್ ಬಾಕಿ ಇದ್ದು, ಈ ಹಣಕ್ಕಾಗಿ ದಿನನಿತ್ಯ ಬಿಬಿಎಂಪಿ ಕಚೇರಿಗೆ ಗುತ್ತಿಗೆದಾರರು ಅಲೆದಾಡುತ್ತಿದ್ದಾರೆ.