ಒಂದು ಕೈ ಸ್ವಾಧೀನ ಇಲ್ಲದಿದ್ದರೂ ದುಡಿಯುವ ಉತ್ಸಾಹ ಬತ್ತಿಲ್ಲ: ಬಣಕಲ್ ನಲ್ಲೊಬ್ಬರು ಛಲದಂಕಮಲ್ಲ
ಕೊಟ್ಟಿಗೆಹಾರ : ಛಲವೊಂದಿದ್ದರೆ ಯಾವ ಸಾಧನೆಯನ್ನು ಮಾಡಬಹುದು ಎನ್ನುವುದಕ್ಕೆ ಎಡಗೈ ಅಂಗವಿಕಲತೆ ಹೊಂದಿರುವ ವ್ಯಕ್ತಿಯೊಬ್ಬರ ಸಾಹಸಗಾಥೆಯೇ ಉದಾಹರಣೆ.
ಒಂದು ಕೈ ಸ್ವಾಧೀನ ಕಳೆದುಕೊಂಡಿದ್ದರೂ ಕೂಡ ಅದನ್ನು ಪರಿಗಣಿಸದೆ ಸ್ವಾವಲಂಬಿ ಬದುಕು ನಡೆಸುತ್ತಿರುವ ಇಂತಹ ಒಬ್ಬ ಛಲಗಾರ ವಿಶೇಷಚೇತನರನ್ನು ಕಾಣಬೇಕಾದರೆ ಬಣಕಲ್ ಗ್ರಾಮಕ್ಕೆ ತೆರಳಬೇಕು. ಅಲ್ಲಿ ಕಾಣ ಸಿಗುವ ವ್ಯಕ್ತಿಯೇ ಸ್ವಾಮಿ.
ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ನಂಜೇಗೌಡ ಸಣ್ಣಮ್ಮ ದಂಪತಿಯರ 4 ಜನ ಮಕ್ಕಳಲ್ಲಿ ಎರಡನೆಯವರೇ ನಮ್ಮ ಹೆಮ್ಮೆಯ ಸ್ವಾಮಿ. ಹುಟ್ಟುವಾಗಲೇ ಅವರ ಒಂದು ಕೈ ಬೆಳವಣಿಗೆ ಇರಲಿಲ್ಲ ಪೋಷಕರಿಗೆ ಒಂದು ಕಡೆ ಮಗು ಜನಿಸಿದ ಸಂತೋಷ ಇನ್ನೊಂದು ಕಡೆ ಮಗುವಿನ ಸ್ಥಿತಿ ಕಂಡು ಪೋಷಕರಿಗೆ ದಿಕ್ಕೇ ತೋಚದಂತಾಯಿತು. ಅವನ ಮುಂದಿನ ಭವಿಷ್ಯ ಹೇಗೆ ಎಂಬ ಬಗ್ಗೆ ಅವರಿಗೆ ಪ್ರಶ್ನಾರ್ಥಕ ಚಿನ್ಹೆ ಮೂಡಿತ್ತು.
ಒಂದು ಕೈ ಬೆಳವಣಿಗೆ ಇಲ್ಲದ ಕಾರಣ ಹೇಗೆ ಬದುಕು ಕಟ್ಟಿಕೊಳ್ತಾನೆ ಎಂದು ಚಿಂತೆ ಆಗಿತ್ತು. ಎಲ್ಲಾ ಮಕ್ಕಳಂತೆ ನನ್ನ ಮಗನಿಲ್ಲ ಎಂದು ಚಿಂತೆ ಕಾಡುತ್ತಲೇ ಇತ್ತು. ಅದಕ್ಕೆಲ್ಲ ಉತ್ತರವೆಂಬತೆ ಸ್ವಾಮಿ, ಇವತ್ತು ಅಂಗ ವೈಕಲ್ಯತೆಯನ್ನು ಮೆಟ್ಟಿ ನಿಂತು ಮಾದರಿಯಾಗಿದ್ದಾರೆ.
ತನಗೆ ಒಂದು ಕೈ ನಲ್ಲಿ ಮಾತ್ರ ದಿನ ನಿತ್ಯದ ಚಟುವಟಿಕೆಗಳನ್ನು ಮಾಡಲು ಆಗುವುದು ಎಂದು ಯಾವತ್ತಿಗೂ ನೋವು ಪಡದೆ ದೈರ್ಯದಿಂದ ಬದುಕುತಿದ್ದಾರೆ.ತಾನು ವಿಶೇಷ ಚೇತನ ವ್ಯಕ್ತಿ ಎಂಬುದನ್ನು ಮರೆತಿದ್ದ ಅವರು, ಜೀವನದ ಯಶಸ್ಸಿನತ್ತ ಮನಸ್ಸು ಚಾಚಿದರು. ಚಿಕ್ಕನಂದಿನಲ್ಲಿ ಅವರು ತಂದೆ ಜೊತೆ ಹೊಲದಲ್ಲಿ ಸಹಾಯ ಮಾಡುತ್ತಾ ಇದ್ದರು. ಬಳಿಕ ಸಣ್ಣ ಪುಟ್ಟ ಕೂಲಿ ಕೆಲಸ ಮಾಡಲು ಆರಂಭಿಸಿದರು. ಮನೆಯಲ್ಲಿ ಕಡುಬಡತನ ಇದ್ದ ಕಾರಣ ಸ್ವಾಮಿ ಅವರಿಗೆ ಹೆಚ್ಚು ಓದಲೂ ಸಾಧ್ಯವಾಗಲಿಲ್ಲ. ಅಂಗವೈಕಲ್ಯ ಎಂದು ಇವರನ್ನು ಕೂಲಿ ಕೆಲಸಕ್ಕೂ ಜನ ಸೇರಿಸಿಕೊಳ್ಳುತ್ತಿರಲಿಲ್ಲ, ಆದರೂ ಇವರು ಧೃತಿಗೆಡಲಿಲ್ಲ, ಬದುಕಲು ನೂರು ದಾರಿ ಇದೆ ಎಂದು ಅರಿತುಕೊಂಡ ಸ್ವಾಮಿ ಮೂಟೆ ಹೊರುವ . ಜತೆಗೆ ಇನ್ನೂ ಕೆಲವೊಂದು ಕೂಲಿ ವಿದ್ಯೆ ಕಲಿತರು. ಈಗ ಬಣಕಲ್ ನಲ್ಲಿ ಕಳೆದ 20 ವರ್ಷಗಳಿಂದ ಇವರು ಮೂಟೆ ಹೊರುವ ಕಾಯಕ ಮಾಡುತ್ತಿದ್ದಾರೆ.
ಯಾರೇ ಕೆಲಸಕ್ಕೆ ಕರೆದರೂ ನಿಯತ್ತಿನಿಂದ ಕೆಲಸ ಮಾಡುತ್ತಾರೆ ಕೆಲಸದಲ್ಲಿ ನಿಪುಣ. ಎಷ್ಟೇ ಕಷ್ಟದ ಕೆಲಸ ಆಗಿದ್ದರೂ ಕೆಲಸ ಮಾಡುತ್ತಾರೆ. ಅಚ್ಚುಕಟ್ಟಾಗಿ ವೃತ್ತಿ ಮಾಡುತ್ತಿದ್ದ ಇವರು ಕ್ರಮೇಣ ಜನಪ್ರಿಯತೆ ಗಳಿಸುತ್ತ ಹೋದರು. ಬಳಿಕ ಒಬ್ಬೊಬ್ಬರಾಗಿ ಇವರನ್ನು ಕೆಲಸಕ್ಕೆ ಕರೆಯುವ ಪರಿಪಾಠ ಬೆಳೆಸಿಕೊಂಡಾಗ ಸ್ವಾಮಿ ಜೀವನದಲ್ಲಿ ನಿಟ್ಟುಸಿರು ಬಿಟ್ಟಿದ್ದಾರೆ. ಇನ್ನು ಬದುಕಬಹುದು, ಜನ ನನ್ನನ್ನು ಗುರುತಿಸಿದ್ದಾರೆ ಎಂಬ ಸಂತೋಷ ಮನದಲ್ಲಿ ಬಂದಿತ್ತು. ಇವತ್ತು ಸ್ವಾಮಿ ಯಾವುದೇ ಕೆಲಸಕ್ಕೂ ಎತ್ತಿದ ಕೈ . ಸ್ವಾಮಿ ಅವರದು ಪತ್ನಿ, ಇಬ್ಬರು ಪುತ್ರರಿರುವ ಪುಟ್ಟ ಸಂಸಾರ.
ಒಂದು ದಿನವೂ ಬಿಡದೆ ಕೂಲಿ ಕೆಲಸಕ್ಕೆ ತೆರಳುತ್ತಾರೆ. ವಿಶೇಷ ಚೇತನ ಎಂದು ಹೇಳಿ ಎಲ್ಲೂ ಯಾರ ಬಳಿಯೂ ಇಷ್ಟು ವರ್ಷ ಯಾವುದಕ್ಕೂ ಕೈ ಚಾಚಲೇ ಇಲ್ಲ. ಸರಕಾರದಿಂದ 1,200 ಮಾಸಿಕ ವೇತನ ಬರುತ್ತಿದೆ.
ಒಂದು ಕೈ ಸ್ವಾಧೀನ ಇಲ್ಲದಿದ್ದರೂ ಸ್ವಂತ ಕಾಲಿನ ಮೇಲೆ ನಿಂತುಕೊಂಡ ತೃಪ್ತಿ ನನಗಿದೆ. ನಾನು ಮಾಡದ ಕೂಲಿ ಕೆಲಸವಿಲ್ಲ, . ಇಷ್ಟು ದಿನ ಶಕ್ತಿ ಇಲ್ಲದ ನನ್ನ ಎಡ ಕೈ ಯಾವ ತೊಂದರೆಯನ್ನೂ ನೀಡಿಲ್ಲ ಎಂದರು.
ಸ್ವಾಮಿ ಅವರು ಇನ್ನೊಬ್ಬರಿಗೆ ಮಾದರಿ. ತನ್ನ ಒಂದು ಕೈ ಶಕ್ತಿ ಕಳೆದುಕೊಂಡಿದ್ದರೂ ಜೀವನದಲ್ಲಿ ಅವರು ಎಂದೂ ಸೋತಿಲ್ಲ. ಸರಕಾರದಿಂದ ಸಿಗುವ ಒಂದಿಷ್ಟು ಮಾಸಿಕ ವೇತನ ಮತ್ತು ದುಡಿದ ಹಣದಿಂದ ಕುಟುಂಬವನ್ನು ಸಲಹಿ, ಮಕ್ಕಳಿಗೂ ಶಿಕ್ಷ ಣ ಕೊಡಿಸಿದ್ದಾರೆ.. ಇದು ಅವರಿಗೆ ನೆಮ್ಮದಿ ತರಿಸಿದೆ ಮುಂದೆಯೂ ಅವರ ಜೀವನ ಇದೆ ರೀತಿ ಸುಖಕರವಾಗಿ ಸಾಗಲಿ ಎಂಬುದು ಮಹಾನಾಯಕ ಮಾಧ್ಯಮದ ಹಾರೈಕೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw