ಸರ್ಕಾರಿ ಶಾಲೆಗಳ ಹೀನಾಯ ಸ್ಥಿತಿಯ ಬಗ್ಗೆ ಧ್ವನಿ ಎತ್ತದ ಸ್ವಾಮೀಜಿಗಳು ಮೊಟ್ಟೆಗೆ ವಿರೋಧ ಮಾಡ್ತಿದ್ದಾರೆ!
- ಉಮೇಶ್ ಕೆ.ಎನ್.
ಮಕ್ಕಳಲ್ಲಿ ಅಪೌಷ್ಠಿಕತೆಯನ್ನು ನಿವಾರಿಸಲು ಸರ್ಕಾರ ಮೊಟ್ಟೆ ಯೋಜನೆಯನ್ನು ತಂದಿದೆ. ಆದರೆ, ಕೆಲವು ಮಠಾಧೀಶರುಗಳು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವುದು ನಿಜಕ್ಕೂ ದುರಂತವಾಗಿದೆ. ಸಸ್ಯಾಹಾರಿಗಳ ಮಕ್ಕಳಿಗೆ ಬಾಳೆ ಹಣ್ಣು ಕೊಡೋಣ, ಮಾಂಸಾಹಾರಿಗಳ ಮಕ್ಕಳಿಗೆ ಮೊಟ್ಟೆ ಕೊಡೋಣ ಎಂದು ಹೇಳಿದರೂ, ಮೊಟ್ಟೆಯನ್ನು ನೀಡಲೇ ಬಾರದು ಎಂದು ಮಠಾಧೀಶರು ಹೇಳುತ್ತಿರುವುದು ಎಷ್ಟು ಸರಿ?
ಇಂದು ಸರ್ಕಾರಿ ಶಾಲೆಗಳು ಶಿಥಿಲಾವಸ್ಥೆಯಲ್ಲಿವೆ. ಶಾಲೆಗಳಲ್ಲಿ ಸರಿಯಾಗಿ ಶಿಕ್ಷಕರು ಕೂಡ ಇರುವುದಿಲ್ಲ. ಖಾಸಗಿ ಶಾಲೆಗಳ ಮಧ್ಯೆ ಬಡವರ ಮಕ್ಕಳು ಕಲಿಯುತ್ತಿರುವ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳಂತೂ ಇಲ್ಲವೇ ಇಲ್ಲ ಎಂಬಂತಾಗಿದೆ. ಇದರ ವಿರುದ್ಧ ಮಠಾಧೀಶರು ಪ್ರತಿಭಟನೆ ಮಾಡದೇ, ಬಡವರ ಮಕ್ಕಳಿಗೆ ಮೊಟ್ಟೆ ಕೊಡಬಾರದು ಎಂದು ಹೋರಾಟ ಮಾಡುತ್ತಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ.
ಪ್ರತಿಭಟನೆ ಮಾಡಬೇಕಾದರೆ, ಬೇಕಾದಷ್ಟು ವಿಚಾರಗಳಿವೆ. ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಬೇಕು ಎಂದು ಹೋರಾಟ ಮಾಡಿ ನೋಡೋಣ? ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಇಂಗ್ಲಿಷ್ ಕಲಿಕೆಗೆ ಗುಣಮಟ್ಟದ ಶಿಕ್ಷಕರನ್ನು ಹಾಕಲು ಪ್ರತಿಭಟನೆ ಮಾಡಿ. ದೆಹಲಿ ಮಾದರಿಯ ಸರ್ಕಾರಿ ಶಾಲೆಗಳನ್ನು ನಿರ್ಮಿಸಲು ಸರ್ಕಾರಕ್ಕೆ ಒತ್ತಡ ಹಾಕಿ ನೋಡೋಣ? ಸರ್ಕಾರಿ ಶಾಲೆಗಳಲ್ಲಿ ಕಂಪ್ಯೂಟರ್ ಕಲಿಕೆಗೆ ವ್ಯವಸ್ಥೆ ಮಾಡಿಸಿ ಎಂದು ಪ್ರತಿಭಟನೆ ಮಾಡಿ ನೋಡೋಣ? ಇಷ್ಟೆಲ್ಲ ವಿಚಾರಗಳಿದ್ದರೂ, ಮಕ್ಕಳ ಊಟದ ಮೇಲೆ ಕಣ್ಣಿ ಹಾಕುತ್ತಿರುವುದು ಎಷ್ಟು ಸರಿ?
ಅವರವರ ಆಹಾರ ಅವರವರಿಗೆ ಶ್ರೇಷ್ಠವಾದದ್ದು, ಮಾಂಸಹಾರಿಗಳ ಮೇಲಿನ ಕೋಪಕ್ಕೆ ಬಡಮಕ್ಕಳಿಗೆ ಸಿಗುತ್ತಿರುವ ಒಂದು ಮೊಟ್ಟೆಯನ್ನೂ ಇಲ್ಲವಾಗಿಸಬೇಡಿ. ಇದು ಧರ್ಮವಲ್ಲ. ಇದನ್ನು ಬಸವಣ್ಣ ಕೂಡ ಒಪ್ಪಲು ಸಾಧ್ಯವಿಲ್ಲ. ನೀವು ಪಾಪ ಪುಣ್ಯಗಳ ಬಗ್ಗೆ ನಂಬಿಕೆ ಇಟ್ಟಿದ್ದೀರಾಗಿದ್ದರೆ, ಬಡ ಮಕ್ಕಳ ತಡೆಗೆ ಕನ್ನ ಹಾಕಿದ ಪಾಪಾ ಎಂದಿಗೂ ಯಾರನ್ನೂ ಬಿಟ್ಟು ಹೋಗದು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಕಾಲಿನಲ್ಲಿ ವೈಡ್ ಬಾಲ್ ಎಂದು ಸೂಚಿಸಿದ ಅಂಪೈರ್: ಬಿದ್ದು ಬಿದ್ದು ನಕ್ಕ ನೆಟ್ಟಿಗರು
ಗಗನಕ್ಕೇರಿದ ಟೊಮೆಟೋ ಬೆಲೆ: ಗ್ರಾಹಕನ ಜೇಬಿಗೆ ಕತ್ತರಿ ಹಾಕುತ್ತಿರುವ ತರಕಾರಿ!
ಬಿಜೆಪಿಗೆ ಈ ಪರಿಸ್ಥಿತಿ ಬರಬಾರದಿತ್ತು | ಡಿ.ಕೆ.ಶಿವಕುಮಾರ್ ವ್ಯಂಗ್ಯ
ನಮಗೆ ಕಾಂಗ್ರೆಸ್ ನವರ ಪ್ರಮಾಣ ಪತ್ರ ಬೇಕಾಗಿಲ್ಲ | ಸಿಎಂ ಬಸವರಾಜ ಬೊಮ್ಮಾಯಿ
ಪ್ರಾಯೋಗಿಕ ಪರೀಕ್ಷೆಯ ನೆಪ: 17 ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ | ಮಾದಕ ದ್ರವ್ಯ ನೀಡಿ ಅತ್ಯಾಚಾರಕ್ಕೆ ಯತ್ನ
ಮದ್ಯಪ್ರಿಯರಿಗೆ ಶಾಕ್: ನಾಳೆಯಿಂದ 3 ದಿನಗಳ ಕಾಲ ಬಾರ್ ಬಂದ್!
ವಿಕೃತ ಘಟನೆ: ಗರ್ಭಿಣಿ ತಂಗಿಯ ಶಿರಚ್ಛೇದಿಸಿ ಸೆಲ್ಫಿ ತೆಗೆದುಕೊಂಡ ಸಹೋದರ!