ದೇವರ ದರ್ಶನಕ್ಕೆ ಹೋದ ಸ್ವಾಮೀಜಿಯನ್ನು ದರದರನೇ ಎಳೆದೊಯ್ದ ದೇವಸ್ಥಾನದ ಸಿಬ್ಬಂದಿ: ವಿಡಿಯೋ ವೈರಲ್ - Mahanayaka
4:21 PM Thursday 12 - December 2024

ದೇವರ ದರ್ಶನಕ್ಕೆ ಹೋದ ಸ್ವಾಮೀಜಿಯನ್ನು ದರದರನೇ ಎಳೆದೊಯ್ದ ದೇವಸ್ಥಾನದ ಸಿಬ್ಬಂದಿ: ವಿಡಿಯೋ ವೈರಲ್

swamiji
19/10/2021

ಸೇಡಂ:  ದೇವರ ದರ್ಶನಕ್ಕೆ ತೆರಳಿದ್ದ ಸಾಧುವನ್ನು ದರದರನೇ ಎಳೆದೊಯ್ದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕಲಬುರ್ಗಿ ಜಿಲ್ಲೆಯ ಯಾನಾಗುಂದಿ ಗ್ರಾಮದ ದೇವಸ್ಥಾನದ ಸಿಬ್ಬಂದಿ ಈ ಕೃತ್ಯ ಮೆರೆದಿದ್ದಾರೆ ಎಂದು ಹೇಳಲಾಗಿದೆ.

ಗ್ರಾಮದ ಬೆಟ್ಟದ ಮೇಲಿನ ಮಾತೆ ಮಾಣಿಕೇಶ್ವರಿಯ ಸನ್ನಿಧಿಯತ್ತ ತೆರಳಲು ಸಾಧು ಮುಂದಾದರು. ಆಗ ದೇವಸ್ಥಾನದ ಸಿಬ್ಬಂದಿ ಬಂದು, ‘ಕೀಲಿ ಏಕೆ ಒಡೆಯುತ್ತಿದ್ದಿಯಾ’ ಎಂದು ಪ್ರಶ್ನಿಸಿ ದರದರನೆ ಎಳೆದೊಯ್ದು ನಿಂದಿಸಿದ್ದಾರೆ ಎಂದು ಹೇಳಲಾಗಿದೆ.

ತನ್ನನ್ನು ದೇವಸ್ಥಾನದ ಸಿಬ್ಬಂದಿ ದರದರನೇ ಎಳೆದೊಯ್ಯುವಾಗ ಸಾಧು ‘ಓ ನಮೋ ನಾರಾಯಣ’ ಎಂದು ಬೊಬ್ಬಿಡುತ್ತಿರುವುದು ಕೂಡ ವಿಡಿಯೋದಲ್ಲಿ ಸೆರೆಯಾಗಿದೆ ಎನ್ನಲಾಗಿದೆ. ಇನ್ನೂ ಈ ಘಟನೆಯ ಬಗ್ಗೆ ದೇವಸ್ಥಾನದ ಆಡಳಿತ ಮಂಡಳಿ ಯಾವುದೇ ಸ್ಪಷ್ಟನೆ ನೀಡಿಲ್ಲ ಎಂದು ತಿಳಿದು ಬಂದಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DvHWsFS1hwLKfIX9njyNyb

ಇನ್ನಷ್ಟು ಸುದ್ದಿಗಳು…

ಸಮಾಜ ಪರಿವರ್ತನಾ ಚಳುವಳಿಯಲ್ಲಿ ಕಾನದ– ಕಟದರ ಹೆಜ್ಜೆ ಗುರುತು:

ದಕ್ಷಿಣ ಕನ್ನಡ: ನೇಣು ಬಿಗಿದುಕೊಂಡು ವೃದ್ಧ ದಂಪತಿ ಆತ್ಮಹತ್ಯೆಗೆ ಶರಣು

ಆಟವಾಡುತ್ತಾ ಹೋದ ಬಾಲಕ ಮರಳಿ ಬರಲಿಲ್ಲ: ಬಾಲಕನನ್ನು ಬಲಿಪಡೆದ ನೀರಿನ ತೊಟ್ಟಿ

ನೆಲ್ಯಾಡಿ: ಮನೆಯ ಕೋಣೆಯಲ್ಲಿಯೇ ನೇಣಿಗೆ ಶರಣಾದ ಮಹಿಳೆ

ಅನೈತಿಕ ಪೊಲೀಸ್ ಗಿರಿಯ ಸಮರ್ಥನೆ: ಸಂಕಷ್ಟ ಸಿಲುಕಿದ ಸಿಎಂ ಬಸವರಾಜ್ ಬೊಮ್ಮಾಯಿ

ಮಧ್ಯಪ್ರದೇಶ: 12 ಲಕ್ಷ ಎತ್ತುಗಳ ‘ವೃಷಣ ಬೀಜ’ ಒಡೆಯುವ ಯೋಜನೆಗೆ ಬಿಜೆಪಿ ಸಂಸದೆಯಿಂದಲೇ ವಿರೋಧ

KSRTCಯಲ್ಲಿ ಕೆಲಸದ ಆಫರ್ ನೀಡಿ 500 ಮಂದಿಯನ್ನು ವಂಚಿಸಿದ ಇಬ್ಬರು ಅರೆಸ್ಟ್

 

ಇತ್ತೀಚಿನ ಸುದ್ದಿ