ಕೇರಳದಲ್ಲಿ ಆತಂಕ ಸೃಷ್ಟಿಸಿದ ಹಂದಿ ಜ್ವರ: ಗಡಿನಾಡಿನಲ್ಲಿ ಪಶು ಇಲಾಖೆ ಅಲರ್ಟ್

05/09/2023
ಚಾಮರಾಜನಗರ: ಕೇರಳದಲ್ಲಿ ಹೆಚ್ಚಾಗುತ್ತಿರುವ ಹಂದಿ ಜ್ವರ ಹಿನ್ನೆಲೆಯಲ್ಲಿ ಗಡಿ ಜಿಲ್ಲೆಯಲ್ಲಿ ಆತಂಕ ಸೃಷ್ಟಿಯಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಕೇರಳ ಗಡಿಯಲ್ಲಿ ಪಶು ಇಲಾಖೆ ಅಲರ್ಟ್ ಆಗಿದೆ.
ಗುಂಡ್ಲುಪೇಟೆ ತಾಲೂಕಿನ ಮೂಲೆಹೊಳೆ ಚೆಕ್ ಪೋಸ್ಟ್ ನಲ್ಲಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆ ಅಲರ್ಟ್ ಆಗಿದ್ದು, ಕೇರಳದಿಂದ ಕರ್ನಾಟಕಕ್ಕೆ ಬರುವ ವಾಹನಗಳ ಮೇಲೆ ನಿಗಾ ಇರಿಸಿದೆ.
ಪಶು ಇಲಾಖೆ ವಾಹನಗಳಿಗೆ ಸ್ಯಾನಿಟೈಸ್ ಮಾಡುತ್ತಿದೆ. ಕೇರಳದಲ್ಲಿ ಹೆಚ್ಚಾಗುತ್ತಿರುವ ಆಫ್ರಿಕನ್ ಸ್ವೈನ್ ಫೀವರ್ (ಹಂದಿ ಜ್ವರ.) ಪತ್ತೆಯಾಗಿದ್ದು, ಈ ವೈರಸ್ ಕರೋನ ವೈರಸ್ ನಂತೆ ಬೇಗ ಹರಡುವ ವೈರಲ್ ಫೀವರ್ ಆಗಿದೆ.
ಸದ್ಯ ಕಾಡು ಹಂದಿಗಳಲ್ಲಿ ಈ ಫೀವರ್ ಕಾಣಿಸಿಕೊಳ್ಳುತ್ತಿದೆ. ಜ್ವರ ಹೆಚ್ಚಾಗಿ ಹಂದಿಗಳು ಸಾವನ್ನಪ್ಪುತ್ತಿರುವ ಘಟನೆ ನಡೆಯುತ್ತಿದೆ. ಹಂದಿಗಳಿಂದ ಬೇರೆ ಕಾಡು ಪ್ರಾಣಿಗಳಿಗೂ ಹರಡುವ ಭೀತಿ ಸೃಷ್ಟಿಯಾಗಿರುವ ಕಾರಣ ಜ್ವರ ಹರಡದಂತೆ ಪಶು ಇಲಾಖೆ ಮುನ್ನಚ್ಚರಿಕೆ ಕ್ರಮ ವಹಿಸಿದೆ.