ಕೇವಲ 11 ನಿಮಿಷ ಮಾತ್ರ ರೇಪ್ ಆಗಿದೆ ಎಂದು ಶಿಕ್ಷೆ ಕಡಿಮೆ ಮಾಡಿ ತೀರ್ಪು ನೀಡಿದ ನ್ಯಾಯಾಧೀಶ!
ಅಪರಾಧಿಯು ಕೇವಲ 11 ನಿಮಿಷಗಳ ಕಾಲ ಮಾತ್ರವೇ ರೇಪ್ ಮಾಡಿದ್ದಾನೆ. ಸಂತ್ರಸ್ತೆಗೆ ಹೆಚ್ಚು ಗಾಯ ಕೂಡ ಮಾಡಿಲ್ಲ. ಎನ್ನುವ ಕಾರಣ ನೀಡಿ ಆತನ ಶಿಕ್ಷೆಯನ್ನು ನಾಲ್ಕೂವರೆ ವರ್ಷದಿಂದ ಮೂರು ವರ್ಷಗಳಿಗೆ ಇಳಿಸಿ ಬಾಸೆಲ್ ನ್ಯಾಯಾಲಯದ ನ್ಯಾಯಾಧೀಶರೋರ್ವರು ತೀರ್ಪು ನೀಡಿದ್ದು, ಈ ತೀರ್ಪಿನ ವಿರುದ್ಧ ಮಹಿಳೆಯರು ಸಿಡಿದೆದ್ದು ಪ್ರತಿಭಟಿಸುತ್ತಿದ್ದಾರೆ.
ಬಾಸೆಲ್ ನ್ಯಾಯಾಲಯದ ಮುಂದೆ ಮಹಿಳೆಯರು ತೀವ್ರ ಪ್ರತಿಭಟನೆ ನಡೆಸಿದ್ದು, ಬ್ಯಾನರ್ ಹಿಡಿದುಕೊಂಡು “11 ನಿಮಿಷಗಳು ಬಹಳಷ್ಟು ಹೆಚ್ಚು” ಎಂದು ನ್ಯಾಯಾಲಯದ ತೀರ್ಪಿನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ವರ್ಷ ನೈಟ್ ಕ್ಲಬ್ ಗೆ ಭೇಟಿ ನೀಡಿದ್ದ ಮಹಿಳೆಯನ್ನು 33 ವರ್ಷ ವಯಸ್ಸಿನ ವ್ಯಕ್ತಿ ಹಾಗೂ 17 ವರ್ಷ ವಯಸ್ಸಿನ ಅಪ್ರಾಪ್ತ ವಯಸ್ಕ ಸೇರಿ ಅತ್ಯಾಚಾರ ನಡೆಸಿದ್ದರು. ಈ ಪ್ರಕರಣ ಸದ್ಯ ಸ್ವಿಸ್ ನ ಬಾಲಾಪರಾಧಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಈ ಪ್ರಕರಣದಲ್ಲಿ ಸಂತ್ರಸ್ತೆ ಹಾಗೂ ಆರೋಪಿಗಳ ಗುರುತನ್ನು ಈವರೆಗೆ ಬಹಿರಂಗಪಡಿಸಿಲ್ಲ.
ಇನ್ನೂ ನ್ಯಾಯಾಧೀಶರ ಹೇಳಿಕೆಯು ಸಂತ್ರಸ್ತೆಯನ್ನು ದೂಷಿಸಿದಂತಾಗಿದೆ. ಈ ತೀರ್ಪಿನಿಂದ ನಾವು ಆಘಾತಕ್ಕೊಳಗಾಗಿದ್ದೇವೆ ಎಂದು ಸಂತ್ರಸ್ತೆ ಪರ ವಕೀಲರು ಹೇಳಿದ್ದಾರೆ. ಕಳೆದ ತಿಂಗಳು ಪ್ರಕಟಿಸಲಾಗಿರುವ ಈ ತೀರ್ಪು ಲಿಖಿತ ರೂಪದಲ್ಲಿ ಕೆಲವೇ ದಿನಗಳಲ್ಲಿ ಪ್ರಕಟವಾಗಲಿದೆ ಎಂದು ಹೇಳಲಾಗಿದೆ.
ಇನ್ನಷ್ಟು ಸುದ್ದಿಗಳು…
ಪ್ರಾಜೆಕ್ಟ್ ವರ್ಕ್ ನೆಪದಲ್ಲಿ ಮನೆಗೆ ಕರೆಸಿ ವಿದ್ಯಾರ್ಥಿನಿಯ ಮೇಲೆ ಶಿಕ್ಷಕನಿಂದ ಅತ್ಯಾಚಾರ, ಬ್ಲ್ಯಾಕ್ ಮೇಲ್
ನೀವು ಬೆಳೆದ ಬೆಳೆಗಳನ್ನು ಕೊಟ್ಟು, ಐಶಾರಾಮಿ ಕಾರು ಕೊಂಡುಹೋಗಿ: ಟೊಯೋಟಾದಿಂದ ರೈತರಿಗೆ ಆಫರ್
ವಾಟ್ಸಾಪ್ ಮೂಲಕ ಕೊವಿಡ್ ಲಸಿಕೆ ಪ್ರಮಾಣ ಪತ್ರ ಪಡೆಯುವುದು ಹೇಗೆ?
ಎಟಿಎಂ ಒಡೆಯುತ್ತಿದ್ದ ವೇಳೆ ಎಟಿಎಂನಲ್ಲಿ ಸಿಕ್ಕಿಹಾಕಿಕೊಂಡ ಕಳ್ಳ! | ಮುಂದೆ ನಡೆದದ್ದೇನು ಗೊತ್ತಾ?