ಫಯಾಝ್ ನ ಪ್ರಾಣ ತೆಗೊಳ್ಳುತ್ತೇನೆ ಎಂದು ಶಪಥ ಮಾಡಿದ್ದೇನೆ: ನೇಹಾಳ ತಂದೆ ಹೇಳಿಕೆ
ಹುಬ್ಬಳ್ಳಿ: ನನ್ನ ಪ್ರಾಣ ಹೋದರೂ ಪರವಾಗಿಲ್ಲ, ಫಯಾಝ್ ನ ಪ್ರಾಣ ತಗೊಳ್ಳುತ್ತೇನೆ ಎಂದು ನನ್ನ ಮಗಳ ಮೃತದೇಹದ ಮೇಲೆ ನಾನು ಶಪಥ ಮಾಡಿದ್ದೇನೆ ಎಂದು ನೇಹಾಳ ತಂದೆ ನಿರಂಜನ ಹಿರೇಮಠ ಹೇಳಿದರು.
ನೇಹಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಸಿಐಡಿ ತಂಡದಿಂದ ನೇಹಾ ತಂದೆ ನಿರಂಜನ, ತಾಯಿ ಗೀತಾ ವಿಚಾರಣೆ ನಡೆಯಿತು. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ನನ್ನ ಪ್ರಾಣ ಹೋದರೂ ಪರವಾಗಿಲ್ಲ, ಫಯಾಝ್ ನ ಪ್ರಾಣ ತಗೊಳ್ಳುತ್ತೇನೆ ಎಂದು ನನ್ನ ಮಗಳ ಶವದ ಮೇಲೆ ನಾನು ಶಪಥ ಮಾಡಿದ್ದೇನೆ. ಆರೋಪಿ ಫಯಾಝ್ ಗೆ ಸಹಾಯ ಮಾಡಿದವರನ್ನೂ ಬಂಧಿಸಬೇಕು ಎಂದು ಒತ್ತಾಯಿಸಿದರು.
ಎಲ್ಲ ವಿಷಯಗಳನ್ನು ಸಿಐಡಿ ಅಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ನಿನ್ನೆ ಫಯಾಝ್ ನನ್ನು ಮಹಜರು ಮಾಡಿರುವ ಬಗ್ಗೆಯೂ ಅವರು ತಿಳಿಸಿದರು. ಹಂತಕ ಫಯಾಝ್ ನನ್ನ ಮಗಳನ್ನು ಕಿಡ್ನ್ಯಾಪ್ ಮಾಡಲು ಯತ್ನಿಸಿದ್ದ. ಕೆಲ ದಿನಗಳಿಂದ ನಮಗೆ ಬೆದರಿಕೆ ಇದೆ.
ಯಾರೋ ಮನೆಗೆ ಬಂದು ವಿಡಿಯೋ ಮಾಡುತ್ತಿದ್ದಾರೆ. ಕೆಲ ದಿನಗಳಿಂದ ಅನಾಮಿಕರು ಮನೆ ಸುತ್ತಮುತ್ತ ಒಡಾಡುತ್ತಿದ್ದಾರೆ. ಇದನ್ನು ಸಿಐಡಿ ಅಧಿಕಾರಿಗಳ ಗಮನಕ್ಕೂ ತಂದಿದ್ದೇನೆ ಎಂದು ಅವರು ಹೇಳಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth