ತನ್ನ ಪ್ರಾಣ ಒತ್ತೆಯಿಟ್ಟು ಉಗ್ರರನ್ನು ತಡೆಯಲು ಯತ್ನಿಸಿದ ಕುದುರೆ ರೈಡರ್ ಸೈಯದ್ ಆದಿಲ್ ಹುಸೇನ್ ಶಾ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ಒಂದೆಡೆ ಉಗ್ರರು ಧರ್ಮ ಕೇಳಿ ಹಿಂದೂ ಪುರುಷರನ್ನು ಹತ್ಯೆ ಮಾಡುತ್ತಿದ್ದರೆ, ಇನ್ನೊಂದು ಕಡೆಯಲ್ಲಿ ಸ್ಥಳೀಯ ಕುದುರೆ ರೈಡರ್ ಸೈಯದ್ ಆದಿಲ್ ಹುಸೇನ್ ಶಾ ತಮ್ಮ ಪ್ರಾಣವನ್ನೇ ಒತ್ತೆಯಿಟ್ಟು ಭಯೋತ್ಪಾದಕರನ್ನು ತಡೆಯಲು ಮುಂದಾಗಿದ್ದು, ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ.
ಪ್ರವಾಸಿಗರ ಮೇಲೆ ದಾಳಿ ನಡೆಸುತ್ತಿದ್ದ ಓರ್ವ ಉಗ್ರನನ್ನು ತಡೆದು ಆತನ ಕೈಯಿಂದ ರೈಫಲ್ ಕಸಿಯುವ ಪ್ರಯತ್ನವನ್ನ ಸೈಯದ್ ಆದಿಲ್ ಹುಸೇನ್ ಶಾ ಮಾಡಿದ್ದಾರೆ. ಆದ್ರೆ ಅದೇ ವೇಳೆ ಅವರು ಗುಂಡೇಟಿಗೆ ಬಲಿಯಾಗಿದ್ದಾರೆ.
ಸೈಯದ್ ಆದಿಲ್ ಹುಸೇನ್ ಶಾ ಅವರು ಕಾರು ಪಾರ್ಕಿಂಗ್ ಸ್ಥಳದಿಂದ ಕುದುರೆಯ ಮೂಲಕ ಪ್ರವಾಸಿಗರನ್ನು ಬೈಸರನ್ ಗೆ ಕರೆದುಕೊಂಡು ಬರುವ ಕೆಲಸ ಮಾಡುತ್ತಿದ್ದರು. ತಮ್ಮ ಕುಟುಂಬಕ್ಕೆ ಇವರು ಏಕೈಕ ಜೀವನಾಧಾರವಾಗಿದ್ದರು. ತಮ್ಮ ಕಣ್ಣ ಮುಂದೆಯೇ ನಡೆಯುತ್ತಿದ್ದ ಮಾರಣಹೋಮವನ್ನು ತಡೆಯಲು ಮುಂದಾಗಿ ಇದೀಗ ತಾನೇ ಬಲಿಯಾಗಿದ್ದಾರೆ.
“ಮಗ ಕೆಲಸಕ್ಕೆ ಪಹಲ್ಗಾಮ್ ಗೆ ಹೋಗಿದ್ದ. ಮಧ್ಯಾಹ್ನ 3 ಗಂಟೆಗೆ ನಮಗೆ ವಿಷಯ ತಿಳಿಯಿತು. ಅವನಿಗೆ ಕರೆ ಮಾಡಿದಾಗ ಫೋನ್ ಸ್ವಿಚ್ ಆಫ್ ಆಗಿತ್ತು. 4:40ಕ್ಕೆ ಸರಿಯಾಗಿ ಆತನ ಫೋನ್ ಆನ್ ಆಯ್ತು ಆದ್ರೆ, ಆ ಕಡೆಯಿಂದ ಯಾರೂ ನಮ್ಮ ಕರೆಗೆ ಉತ್ತರಿಸಲಿಲ್ಲ. ಪೊಲೀಸ್ ಠಾಣೆಗೆ ನಾವು ಹೋದಾಗ ಆತನಿಗೆ ಗಾಯವಾಗಿದೆ ಅಂತ ಗೊತ್ತಾಯ್ತು” ಅಂತ ಸೈಯದ್ ಅವರ ವೃದ್ಧ ತಂದೆ ಹೈದರ್ ಸುದ್ದಿ ಸಂಸ್ಥೆಗಳಿಗೆ ಹೇಳಿಕೆ ನೀಡಿದ್ದಾರೆ.
ಸೈಯದ್ ಆದಿಲ್ ಹುಸೇನ್ ಶಾ ವೃದ್ಧ ಪೋಷಕರು, ಹೆಂಡತಿ ಮತ್ತು ಮಕ್ಕಳನ್ನು ಅಗಲಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: