ಆಕ್ರಂದನ: ತಮ್ಮವರ ಮೃತದೇಹವನ್ನು ಹುಡುಕಿ ಆಸ್ಪತ್ರೆಗೆ ಬರುತ್ತಿರುವ ಸಿರಿಯನ್ನರು
ಸಿರಿಯಾದ ಅಧ್ಯಕ್ಷ ಬಶ್ಯಾರುಲ್ ಅಸದ್ ಅವರ ಎರಡೂವರೆ ದಶಕಗಳ ಅಧಿಕಾರ ಕೊನೆಗೊಂಡ ಬಳಿಕ ಇದೀಗ ಸಿರಿಯನ್ನರು ತಮ್ಮವರ ಮೃತ ದೇಹವನ್ನು ಹುಡುಕಿ ಆಸ್ಪತ್ರೆಗೆ ಧಾವಿಸುತ್ತಿದ್ದಾರೆ. ಅನ್ಯಾಯವಾಗಿ ಬಂಧನದಲ್ಲಿಟ್ಟು ಅಸದ್ ಇವರನ್ನು ಹತ್ಯೆಗೈದಿದ್ದು, ಈ ಬಡಪಾಯಿಗಳನ್ನು ಹುಡುಕಿ ಮುಸ್ತಹದ್ ಆಸ್ಪತ್ರೆಯಲ್ಲಿ ತೂಗು ಹಾಕಲಾದ ಮೃತಪಟ್ಟವರ ಫೋಟೋದಲ್ಲಿ ಹುಡುಕುತ್ತಿದ್ದಾರೆ.
ಅಸದ್ ಬಂಧನದಲ್ಲಿಟ್ಟವರಲ್ಲಿ 38 ಮಂದಿಯ ಮೃತ ದೇಹಗಳಿಗಾಗಿ ಮುಸ್ತಹದ ಆಸ್ಪತ್ರೆಯಲ್ಲಿ ಅವರ ಕುಟುಂಬಿಕರು ಹುಡುಕಾಡಿದ್ದಾರೆ. ಪ್ರಭುತ್ವದ ಕ್ರೂರ ದೌರ್ಜನ್ಯದಿಂದಾಗಿ ಇವರು ಬಂಧನ ಕೇಂದ್ರದಲ್ಲಿ ಮೃತಪಟ್ಟಿದ್ದರು. ಅವರ ಮುಖ ಗುರುತು ಹಚ್ಚಲಾಗದಷ್ಟು ಜರ್ಜರಿತವಾಗಿತ್ತು ಹಲವರು ಮೃತಪಟ್ಟು ವಾರಗಳಾದುದರಿಂದ ಮುಖಭಾವ ಪತ್ತೆಹಚ್ಚುವುದಕ್ಕೆ ಕಷ್ಟವಾಗುತ್ತಿತ್ತು. ಆಸ್ಪತ್ರೆಯ ಮೋರ್ಚರ್ ನಲ್ಲಿ ಮೃತ ದೇಹಗಳು ದೊಡ್ಡ ಸಂಖ್ಯೆಯಲ್ಲಿವೆ ಎಂದು ಹೇಳಲಾಗಿದೆ. ಆಸ್ಪತ್ರೆಯ ಹೊರಗಡೆ ಅವರ ಭಾವಚಿತ್ರವನ್ನು ಹಾಕಲಾಗಿದ್ದು ಒಳಗಡೆ ಮೃತ ದೇಹವನ್ನು ಅದೇ ರೂಪದಲ್ಲಿ ಪತ್ತೆಹಚ್ಚಲು ಸಾಧ್ಯವಾಗದಷ್ಟು ವಿರೂಪಗೊಂಡಿವೆ ಎಂದು ಹೇಳಲಾಗಿದೆ. ಜೈಲಿನಲ್ಲಿ ನೀಡಲಾದ ದೌರ್ಜನ್ಯದ ಪ್ರತಿ ಕುರುಹುಗಳೂ ದೇಹ ದ ಮೇಲೆಲ್ಲ ಇವೆ ಎಂದು ಕುಟುಂಬಿಕರು ಹೇಳಿದ್ದಾರೆ
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj