ಸಿರಿಯಾ ಅಧ್ಯಕ್ಷ ಪಲಾಯನ: ಅತಂತ್ರ ಸ್ಥಿತಿ ನಿರ್ಮಾಣ; ಇಸ್ರೇಲ್ ನಿಂದ ಕುತಂತ್ರ
ಸಿರಿಯಾದ ಅಧ್ಯಕ್ಷ ಅಸದ್ ಅವರು ರಷ್ಯಾಕ್ಕೆ ಪಲಾಯನ ಮಾಡಿದ ಬಳಿಕ ಸಿರಿಯಾದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದ್ದು ಇಸ್ರೇಲ್ ಇದರ ದುರ್ಬಳಕೆಗೆ ಮುಂದಾಗಿದೆ. ಸಿರಿಯಾದ ಮೇಲೆ ಮುನ್ನೂರಕ್ಕಿಂತಲೂ ಅಧಿಕ ವೈಮಾನಿಕ ದಾಳಿಯನ್ನು ನಡೆಸಿದೆ. ಗೋಲಾನ್ ಬೆಟ್ಟಕ್ಕೆ ತಾಗಿಕೊಂಡಿರುವ ಅನೇಕ ಗ್ರಾಮಗಳ ಮೇಲೆ ಇಸ್ರೇಲ್ ಸೇನೆ ಆದಿಪತ್ಯ ಸ್ಥಾಪಿಸಿದೆ ಮತ್ತು ಇದೀಗ ಸಿರಿಯಾದ ರಾಜಧಾನಿ ಡಮಾಸ್ಕಸ್ ನತ್ತ ಮುಂದುವರಿಯುತ್ತಿದೆ ಎಂದು ವರದಿಯಾಗಿದೆ.
ಅಸದ್ ಅವರ ಕಾಲದಲ್ಲಿದ್ದ ವೈಮಾನಿಕ ಕೇಂದ್ರ, ನೌಕಾದಳ ಮತ್ತು ಶಸ್ತ್ರಾಸ್ತ್ರ ಕೊಠಡಿಗಳ ಮೇಲೆ ಇಸ್ರೇಲ್ ಬಾಂಬನ್ನು ಸುರಿಸಿದೆ. ಆದರೆ ಅಸದ್ ರನ್ನು ದೇಶದಿಂದ ಪಲಾಯನ ಮಾಡುವಂತೆ ಮಾಡಿದ ಹಯಾತ್ ತಹ್ ರೀರ್ ಅಲ್ ಶಾಮ್ ನ ಸೈನಿಕರು ಮತ್ತು ಮುಖಂಡರು ಈ ಬಗ್ಗೆ ಯಾವ ಹೇಳಿಕೆಯನ್ನೂ ನೀಡಿಲ್ಲ. ಅಸದ್ ರನ್ನು ಓಡಿಸುವುದಕ್ಕೆ ಅವರಿಗಿದ್ದ ಉತ್ಸಾಹ ಇದೀಗ ದೇಶವನ್ನು ರಕ್ಷಿಸಿಕೊಳ್ಳುವಲ್ಲಿ ಇಲ್ಲ ಎಂಬ ಆರೋಪ ಕೇಳಿ ಬಂದಿದೆ.
ಸಿರಿಯಾವನ್ನು ಸಂಪೂರ್ಣ ನಿರಸ್ತ್ರ ಗೊಳಿಸುವ ಉದ್ದೇಶ ಇಸ್ರೇಲ್ ಹೊಂದಿದಂತಿದೆ. ಸಿರಿಯಾದಲ್ಲಿ ಯಾರೇ ಅಧಿಕಾರಕ್ಕೆ ಬಂದರೂ ತನ್ನ ವಿರುದ್ಧ ತುಟಿ ಬಿಚ್ಚದಂತಹ ಒಂದು ಪರಿಸ್ಥಿತಿಯನ್ನು ನಿರ್ಮಾಣ ಮಾಡಲು ಇಸ್ರೇಲ್ ತೀರ್ಮಾನಿಸಿದೆ. ಸಿರಿಯಾದಲ್ಲಿ ಬಹುತೇಕ ಇಸ್ರೇಲ್ ಸೇನೆ ವ್ಯಾಪಿಸಿಕೊಂಡಿದ್ದು ಇದನ್ನು ತನ್ನ ಪ್ರತಿರೋಧದ ಭಾಗ ಎಂದು ಇಸ್ರೇಲ್ ಸಮರ್ಥಿಸಿಕೊಂಡಿದೆ ಮಾತ್ರ ಅಲ್ಲ ಇಸ್ರೇಲ್ ನ ಈ ಕಾರ್ಯಾಚರಣೆಯನ್ನು ಅಮೆರಿಕ ಬೆಂಬಲಿಸಿದೆ. ಆದರೆ ಈ ವಿಷಯದಲ್ಲಿ ಇತರ ಯಾವುದೇ ಯುರೋಪಿಯನ್ ರಾಷ್ಟ್ರಗಳು ಪ್ರತಿಕ್ರಿಯಿಸಿಲ್ಲ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj