ಟೇಕ್ವಾಂಡೋ ಮಾರ್ಷಲ್ ಆರ್ಟ್ಸ್ ಸ್ಪರ್ಧೆಯಲ್ಲಿ ಚಿನ್ನ ಗೆದ್ದ ಕೆ.ಸಿ.ಸಾಯಿ ನಿಹಾರ್ , ಶರ್ಮನ್ ಬಿ. ಪೂಜಾರಿ

ಕಾರ್ಕಳ: ಭಾರತ ಸರ್ಕಾರದಿಂದ ಮತ್ತು ಒಲಿಂಪಿಕ್ ಕ್ರೀಡಾಕೂಟದಲ್ಲಿ ಮಾನ್ಯತೆಯನ್ನು ಪಡೆದ ಟೇಕ್ವಾಂಡೋ ಮಾರ್ಷಲ್ ಆರ್ಟ್ಸ್ ಸ್ಪರ್ಧೆಯಲ್ಲಿ ಕಾರ್ಕಳ ಬೈಪಾಸ್ ರಸ್ತೆಯ, ಅವಿನಾಶ್ ಕಾಂಪೌಂಡ್ ನಿವಾಸಿ ಕೆ.ಸಿ.ಸಾಯಿ ನಿಹಾರ್ ಚಿನ್ನದ ಪದಕ ಗೆಲ್ಲುವ ಮೂಲಕ ಸಾಧನೆ ಮೆರೆದಿದ್ದಾರೆ.
ಬೆಂಗಳೂರಿನ ರಿಯಾನ್ ಇಂಟರ್ನ್ಯಾಷನಲ್ ಸ್ಕೂಲ್ ನಲ್ಲಿ ನಡೆದ ಮೂರನೇ ಟೇಕ್ವಾಂಡೋ ಇಂಟರ್ನ್ಯಾಷನಲ್ ಸ್ಪರ್ಧೆಯಲ್ಲಿ ಭಾಗವಹಿಸಿದ ಅವರು ಚಿನ್ನದ ಪದಕ ಗೆದ್ದರು.
ಇವರು ಕಾರ್ಕಳ ಬೈಪಾಸ್ ರಸ್ತೆ ಬಳಿಯ, ಕೆ.ಸಿ.ಪಾಂಡು ಎನ್ ಹಾಗೂ ದೀಪ ದಂಪತಿಯ ಪುತ್ರನಾಗಿದ್ದಾರೆ. ತರಬೇತುದಾರರಾದ ಸುರೇಶ್ ನಿಟ್ಟೆಯವರಿಂದ ಸಾಯಿ ನಿಹಾರ್ ತರಬೇತಿ ಪಡೆದಿದ್ದರು.
ಚಿನ್ನದ ಪದಕ ಗೆದ್ದ ಶರ್ಮನ್ ಬಿ ಪೂಜಾರಿ:
ಭಾರತ ಸರ್ಕಾರದಿಂದ ಮತ್ತು ಒಲಿಂಪಿಕ್ ಕ್ರೀಡಾಕೂಟದಲ್ಲಿ ಮಾನ್ಯತೆ ಪಡೆದ ಟೇಕ್ವಾಂಡೋ ಮಾರ್ಷಲ್ ಆರ್ಟ್ಸ್ ಸ್ಪರ್ಧೆಯಲ್ಲಿ ಕಾರ್ಕಳ ಜೋಡುರಸ್ತೆ ನಿವಾಸಿ ಶರ್ಮನ್ ಬಿ. ಪೂಜಾರಿ ಇವರು ಚಿನ್ನದ ಪದಕ ಗೆದ್ದಿದ್ದಾರೆ.
ಇವರು ಬೆಂಗಳೂರಿನ ರಿಯಾನ್ ಇಂಟರ್ನ್ಯಾಷನಲ್ ಸ್ಕೂಲ್ ನಲ್ಲಿ ನಡೆದ ಮೂರನೇ ಟೇಕ್ವಾಂಡೋ ಇಂಟರ್ನ್ಯಾಷನಲ್ ಸ್ಪರ್ಧೆಯಲ್ಲಿ ಭಾಗವಹಿಸಿ ಚಿನ್ನದ ಪದಕವನ್ನು ಗೆದ್ದಿದ್ದಾರೆ.
ಕಾರ್ಕಳ ಜೋಡು ರಸ್ತೆಯ ಭೋಜ ಪೂಜಾರಿ ಹಾಗೂ ಸೌಮ್ಯ ಪೂಜಾರಿ ದಂಪತಿ ಪುತ್ರನಾಗಿರುವ ಶರ್ಮನ್ ಅವರು ತರಬೇತುದಾರರಾದ ಸುರೇಶ್ ನಿಟ್ಟೆಯವರಿಂದ ತರಬೇತಿ ಪಡೆದಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw