ಜಾತಿ ಬೇಧದಿಂದ ನಲುಗಿ ಹೋಗಿದ್ದ ಕೇರಳದಲ್ಲಿ ಆಗಲೇ ನಾರಾಯಣಗುರುಗಳು ಕೇರಳದ ತೀಯಾ ಸಮಾಜ ದವರಾದ ಮದನ್ ಆಸನ್ ಹಾಗೂ ಕುಟ್ಟಿ ಅಮ್ಮಾಳ್ ಎಂಬ ದಂಪತಿಗಳಿಗೆ ಮಗನಾಗಿ ಜನಿಸುತ್ತಾರೆ. ಕೇರಳ ರಾಜ್ಯ ಆಗ ಈಗಿನಂತೆ ಜಾತ್ಯತೀತೆಯಿಂದ ಕೂಡಿರಲಿಲ್ಲ. ಅಲ್ಲಿ ಸದ್ಯ ಉತ್ತರ ಪ್ರದೇಶದಲ್ಲಿ ಹೇಗೆ ಅಸ್ಪೃಷ್ಯತೆ, ಅಸಮಾನತೆ, ಅತ್ಯಾಚಾರ, ದೌರ್ಜನ್ಯಗಳು ನಡೆಯುತ್...