ಗಲಭೆ ಪೀಡಿತ ಜಿಲ್ಲೆಯಲ್ಲಿ ಕಾರ್ಯಕ್ರಮ ನಡೆಸಲು ಪೊಲೀಸರು ಅನುಮತಿ ನಿರಾಕರಿಸಿದ ನಂತರ ನೂಹ್ ನಲ್ಲಿ ನಡೆಯಬೇಕಿದ್ದ ಹಿಂದೂ ಮಹಾಪಂಚಾಯತ್ ಈಗ ಪಲ್ವಾಲ್ ನಲ್ಲಿ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ನೂಹ್ ನಲ್ಲಿ ಹಿಂದೂ ಗುಂಪುಗಳು ಮಹಾಪಂಚಾಯತ್ ಗೆ ಅನುಮತಿ ಕೋರಿದ್ದವು. ಆದರೆ ಭದ್ರತಾ ಕಾರಣಗಳಿಂದಾಗಿ ಅದನ್ನು ನಿರಾಕರಿಸಲಾಗಿದೆ ಎಂದು ನೂಹ್ ...
ವಸಾಹತುಶಾಹಿ ಯುಗದ ಭಾರತೀಯ ದಂಡ ಸಂಹಿತೆಯನ್ನು (ಐಪಿಸಿ) ಬದಲಾಯಿಸಲು ಪ್ರಯತ್ನಿಸುವ ಭಾರತೀಯ ನ್ಯಾಯ ಸಂಹಿತಾ ಮಸೂದೆ - 2023 ರಾಜಕೀಯ ಉದ್ದೇಶಗಳಿಗಾಗಿ ಕಠಿಣವಾಗಿ ಪೊಲೀಸ್ ಅಧಿಕಾರಗಳನ್ನು ಬಳಸಲು ಅನುಮತಿಸುತ್ತದೆ ಎಂದು ರಾಜ್ಯಸಭಾ ಸಂಸದ ಮತ್ತು ಹಿರಿಯ ವಕೀಲ ಕಪಿಲ್ ಸಿಬಲ್ ಆರೋಪಿಸಿದ್ದಾರೆ. ಹಿರಿಯ ವಕೀಲ ಕಪಿಲ್ ಸಿಬಲ್ ಅವರು, 'ಇಂತಹ ಕಾನೂ...
ದೆಹಲಿಯಲ್ಲಿ ಅಧಿಕಾರಿಗಳ ವರ್ಗಾವಣೆ ಮತ್ತು ನೇಮಕಾತಿಗಳ ಮೇಲೆ ನಿಯಂತ್ರಣ ಹೊಂದುವ ಸಂಬಂಧ ಕೇಂದ್ರ ಸರ್ಕಾರ ಸಂಸತ್ತಿನ ಉಭಯ ಸದನಗಳಲ್ಲಿ ಅಂಗೀಕರಿಸಲ್ಪಟ್ಟಿದ್ದ ದಿಲ್ಲಿ ಸೇವಾ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶನಿವಾರ ಸಹಿ ಹಾಕಿದ್ದಾರೆ. ಇದರೊಂದಿಗೆ, ಈ ಮಸೂದೆಯು ಕಾನೂನು ಆಗುತ್ತದೆ. ಕೇಂದ್ರ ಸರ್ಕಾರ ದೆಹಲಿ ಆಡಳಿತ ಸೇವೆಗಳ ...
ಬಿಜೆಪಿ ಪಕ್ಷದ ನಾಯಕನೊಂದಿಗೆ ಖಾಸಗಿ ಕ್ಷಣಗಳನ್ನು ಕಳೆದ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ಅಸ್ಸಾಂನ ಬಿಜೆಪಿ ಮಹಿಳಾ ಮುಖಂಡೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಸ್ಸಾಂನ ಗುವಾಹಟಿಯ ಬಾಮುನಿಮೈದಂ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಚೇಂಬರ್ ಆಫ್ ಕಾಮರ್ಸ್ನ ಉಪಾಧ್ಯಕ್ಷೆ ಹಾಗೂ ಕಿಸಾನ್ ಮೋರ್ಚಾದ ಖಜಾಂಚಿ ಆಗಿದ್ದ ಇಂದ್ರಾ...
ಬಿಜೆಪಿ ಸರ್ಕಾರವು ಮಧ್ಯಪ್ರದೇಶದಲ್ಲಿ ಭ್ರಷ್ಟಾಚಾರ ನಡೆಸುತ್ತಿದೆ ಎಂದು ಆರೋಪಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೆ ನೀಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಬಿಜೆಪಿ ನಾಯಕರು ಎಚ್ಚರಿಕೆ ನೀಡಿದ್ದಾರೆ. ಈ ಆರೋಪವನ್ನು ಅಲ್ಲಗಳೆದಿರುವ ಸಂಸದ, ಗೃಹ ಸಚಿವ ನರೋತ್ತಮ್ ಮಿಶ್ರಾ,...
ತೈವಾನ್ ಉಪಾಧ್ಯಕ್ಷ ವಿಲಿಯಂ ಲೈ ಅವರು ಶನಿವಾರ ಅಮೆರಿಕಕ್ಕೆ ಭೇಟಿ ನೀಡಲಿದ್ದಾರೆ. ಇದು ಚೀನಾದ ಅಧಿಕಾರಿಗಳನ್ನು ಕೆರಳಿಸಿದೆ. ಪ್ರಜಾಪ್ರಭುತ್ವ ದ್ವೀಪವನ್ನು ಚೀನಾ ತನ್ನದೆಂದು ಹೇಳಿಕೊಂಡಿದೆ. ಅದು ಒಂದಲ್ಲ ಒಂದು ದಿನ ಅಗತ್ಯವಿದ್ದರೆ ಬಲವಂತದಿಂದ ಈ ಭೂಪ್ರದೇಶವನ್ನು ವಶಪಡಿಸಿಕೊಳ್ಳುವುದಾಗಿ ಪ್ರತಿಜ್ಞೆ ಮಾಡಿತ್ತು. ಹೀಗಾಗಿ ರಾಜಕೀಯ ಮತ್ತು...
ಹವಾಯಿಯಲ್ಲಿ ಸಂಭವಿಸಿದ ಭೀಕರ ಕಾಡ್ಗಿಚ್ಚಿನಿಂದ ಸಾವನ್ನಪ್ಪಿದವರ ಸಂಖ್ಯೆ 67 ಕ್ಕೆ ಏರಿದೆ ಎಂದು ಮೌಯಿ ಕೌಂಟಿ ಸರ್ಕಾರವನ್ನು ಉಲ್ಲೇಖಿಸಿ ಸಿಎನ್ ಎನ್ ವರದಿ ಮಾಡಿದೆ. "ಲಹೈನಾ ಬೆಂಕಿಯನ್ನು ಇನ್ನೂ ನಿಯಂತ್ರಿಸಲಾಗಿಲ್ಲ" ಎಂದು ಸರ್ಕಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಇದಕ್ಕೂ ಮುನ್ನ ಹವಾಯಿ ಗವರ್ನರ್ ಜೋಶ್ ಗ್ರೀನ್ ಅವರು, ಹವಾಯಿಯ ಮೌಯಿ ...
ಇಂದೇರ್ ಪುರಿಯ ನಿಗಮ್ ಪ್ರತಿಭಾ ವಿದ್ಯಾಲಯದಲ್ಲಿ ಅನಿಲ ಸೋರಿಕೆ ಘಟನೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ. ಮುನ್ಸಿಪಲ್ ಶಾಲೆಯಲ್ಲಿ ಶುಕ್ರವಾರ ವರದಿಯಾದ ಘಟನೆಯ ಬಗ್ಗೆ ಪೊಲೀಸರು ಪ್ರಸ್ತುತ ತನಿಖೆ ನಡೆಸುತ್ತಿದ್ದಾರೆ ಎಂದು ಉಪ ಪೊಲೀಸ್ ಆಯುಕ್ತ (ಪಶ್ಚಿಮ) ವಿಚಿತ...
ಅವಿಶ್ವಾಸ ನಿಲುವಳಿ ಮೇಲಿನ ಚರ್ಚೆ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿ ಭಾಷಣದ ಬಗ್ಗೆ ಎಐಸಿಸಿ ನಾಯಕ ರಾಹುಲ್ ಗಾಂಧಿ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಿಂಸಾಚಾರ, ಅತ್ಯಾಚಾರ, ಹತ್ಯೆಗಳಿಂದ ಮಣಿಪುರವು ತತ್ತರಿಸಿ ಹೋಗಿದೆ. ಇತ್ತ ಪ್ರಧಾನಿ ಸಂಸತ್ನಲ್ಲಿ ನಗುತ್ತಾ ಜೋಕ್ಗಳನ್ನು ಮಾಡಿಕೊಂಡಿದ್ದಾರೆ. ವಿಪಕ್ಷಗಳನ್ನು ಟೀಕಿಸುತ...
ವಿಶ್ವದಲ್ಲಿ 57 ಮುಸ್ಲಿಂ ರಾಷ್ಟ್ರಗಳಿವೆ. ಅಲ್ಲಿ ಮುಸ್ಲಿಮೇತರರೂ ಇದ್ದಾರೆ. ಆದರೆ ಅಲ್ಲಿ ಯಾರಿಗೂ ತೊಂದರೆ ಆಗುತ್ತಿಲ್ಲ. ಆದ್ರೆ ಭಾರತದಲ್ಲಿ ಹಿಂದೂ ಮುಸ್ಲಿಮರ ನಡುವಿನ ಸಂಬಂಧ ಅಪಾಯದಂಚಿನಲ್ಲಿದೆ. ದೇಶದಲ್ಲಿ ಯಾಕೆ ಮುಸ್ಲಿಮರನ್ನ ಕಂಡರೆ ಇಷ್ಟೊಂದು ದ್ವೇಷ..? ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ಮುಸ್ಲಿಮರ ಮನದ ಮಾತನ್ನೂ ಕೇಳಿ, ಅವರ ಸ...