ರಾಜಕಾರಣವನ್ನು ಸ್ವಚ್ಚಗೊಳಿಸದ ಹೊರತು ಈ ದೇಶ ಊರ್ಜಿತವಾಗುವುದಿಲ್ಲ. ಪಕ್ಷಾಂತರಿಗಳು ಮಾನ್ಯತೆ ಪಡೆದಿದ್ದಾಯಿತು. ಭ್ರಷ್ಟಾಚಾರಿಗಳು ಉನ್ನತ ಸ್ಥಾನಮಾನ ಗಳಿಸಿದ್ದಾಯಿತು. ಅಪರಾಧಿಗಳು ಅಧಿಕಾರ ಪೀಠಗಳನ್ನು ಅಲಂಕರಿಸಿದ್ದಾಯಿತು. ಕೊಲೆಗಡುಕರು, ದೊಂಬಿಕೋರರು, ಗಲಭೆಕೋರರು, ಥಳಿತ ತಜ್ಞರು, ಹಂತಕರು, ವಂಚಕರು ಶಾಸನಸಭೆಗಳಿಗೆ ಪ್ರವೇಶಿಸಿದ್ದಾಯಿತು....
ನಾ ದಿವಾಕರ (ಬದುಕುವುದನ್ನು ಬದುಕುಳಿಯುವುದರಿಂದಲೇ ಕಲಿತವರ ಕತೆ) ಮಹಾಶ್ವೇತಾದೇವಿ (14 ಜನವರಿ 1926- 28 ಜುಲೈ 2016) ಬಂಗಾಲದ ಖ್ಯಾತ ಲೇಖಕಿ, ಕತೆಗಾರ್ತಿ ಮತ್ತು ಎಡಪಂಥೀಯ ಧೋರಣೆಯ ಕಾರ್ಯಕರ್ತೆಯೂ ಆಗಿದ್ದರು. ಹಝಾರ್ ಚೌರಶಿರ್ ಮಾ, ರುಡಾಲಿ ಮತ್ತು ಅರಣ್ಯೇರ್ ಅಧಿಕಾರ್ ಮತ್ತು ಅಗ್ನಿಗರ್ಭ (ಸಣ್ಣಕಥಾ ಸಂಕಲನ) ಮುಂತಾದ ಕೃತಿಗಳನ್ನ...
ಒಂದು ಸ್ವಸ್ಥ ಸಮಾಜ ತನ್ನ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಲು, ಮುಂದಿನ ಪೀಳಿಗೆಗೆ ಆರೋಗ್ಯಕರ ನೆಲೆಗಳನ್ನು ಬಿಟ್ಟುಹೋಗಲು ಬಯಸುವುದು ಸಹಜ. ಮಾನವ ಸಮಾಜದ ಅಭ್ಯುದಯದ ಹಾದಿಯಲ್ಲಿ ಈ ಸ್ವಾಸ್ಥ್ಯ ಸಂರಕ್ಷಣೆಯ ಪ್ರಯತ್ನಗಳು ನಡೆಯುತ್ತಾ ಬಂದಿರುವುದರಿಂದಲೇ ಮನುಕುಲ ಇಂದಿಗೂ ಸಹ ಮಾನವೀಯ ಮೌಲ್ಯಗಳನ್ನು ಉಳಿಸಿಕೊಂಡುಬಂದಿದೆ. ಒಬ್ಬ ಹಿಟ್ಲರಿಗೆ ನ...
ಸಿನಿಮಾ ರಂಗ ಎರಡು ನೆಲೆಗಳಲ್ಲಿ ಕೆಲಸ ಮಾಡುತ್ತದೆ. ಮೊದಲನೆಯದು ಶುದ್ಧ ಮನರಂಜನೆ, ಅಂದರೆ ಪ್ರೇಕ್ಷಕರನ್ನು ರಂಜಿಸುವ ಒಂದು ಮಾಧ್ಯಮವಾಗಿ, ಜನಸಾಮಾನ್ಯರು ಜೀವನದ ಜಂಜಾಟಗಳಿಂದ ಕೆಲ ಕಾಲ ಹೊರಬರಲು ರಜತ ಪರದೆ ನೆರವಾಗುತ್ತದೆ. ಶೇ 90ಕ್ಕೂ ಹೆಚ್ಚು ಸಿನಿಮಾಗಳು ಈ ವರ್ಗಕ್ಕೆ ಸೇರಿರುತ್ತವೆ. ಎರಡನೆಯ ನೆಲೆ ಎಂದರೆ ಸಮಾಜದ ಅಂಕು ಡೊಂಕುಗಳನ್ನು, ಓರ...
ಸಂಜಯ್ ಶರ್ಮ ( ಲಿಬರೇಷನ್ ಪತ್ರಿಕೆ-ಸಿಪಿಐಎಂಎಲ್ ಮುಖವಾಣಿ) ಅನುವಾದ : ನಾ ದಿವಾಕರ ಆಹಾರ ಪದಾರ್ಥಗಳನ್ನು ಉತ್ಪಾದಿಸುವ ಬಹುಪಾಲು ದೇಶಗಳಲ್ಲಿ ಆಹಾರ ಉತ್ಪಾದನೆ ಒಟ್ಟಾರೆ ಹೆಚ್ಚಳ ಕಂಡಿರುವ ಸಂದರ್ಭದಲ್ಲಿಯೇ ವಿಶ್ವದಾದ್ಯಂತ ಹಸಿವು ಮತ್ತು ಅಪೌಷ್ಟಿಕತೆಯೂ ತೀವ್ರ ಹೆಚ್ಚಳ ಕಂಡಿರುವುದು ಅಚ್ಚರಿಯ ವಿಚಾರ ಅಲ್ಲವೇ ? ಈ ಜಿಜ್ಞಾಸೆಗೆ ಉತ್ತರ ...
ಮಾನವನ ಉಗಮ ಮತ್ತು ಅಭ್ಯುದಯದ ಇತಿಹಾಸವನ್ನು ಅರಿತಿರುವ ಯಾರಿಗೇ ಆದರೂ ಒಂದು ಅಂಶ ತಿಳಿದಿರಲೇಬೇಕು. ಅದೇನೆಂದರೆ, ಮಾನವನಲ್ಲಿ ಸ್ವಾಭಾವಿಕವಾದ ಆಂದೋಲನದ ತುಡಿತ ಮತ್ತು ಸಂವೇದನೆ ಇಲ್ಲದೆ ಹೋಗಿದ್ದಲ್ಲಿ ಬಹುಶಃ ಮನುಕುಲ ಶಿಲಾಯುಗದಿಂದ ಒಂದು ಹೆಜ್ಜೆಯೂ ಮುಂದೆ ಚಲಿಸಲಾಗುತ್ತಿರಲಿಲ್ಲ. ತನಗೆ ಹಸಿವಾಗುವುದನ್ನು ಹೇಳಲಾರದೆ ರಚ್ಚೆ ಹಿಡಿಯುವ ಎಳೆ ಕೂ...
ಭಾರತದ ಪ್ರಜಾತಂತ್ರ ವ್ಯವಸ್ಥೆ ನಾಲ್ಕೂ ದಿಕ್ಕುಗಳಿಂದ ಸವಾಲುಗಳನ್ನು ಎದುರಿಸುತ್ತಿದೆ. ಆಡಳಿತ ವ್ಯವಸ್ಥೆಯ ನಾಲ್ಕೂ ಸ್ತಂಭಗಳು ಶಿಥಿಲವಾಗುತ್ತಿರುವಂತೆ ಭಾಸವಾಗುತ್ತಿದೆ. ನ್ಯಾಯಾಂಗದ ಮೂಲಕ ಈ ದೇಶದ ಸಾಮಾನ್ಯ ಪ್ರಜೆಗಳು ಕೊಂಚ ಉಸಿರಾಡುತ್ತಿದ್ದರೂ ಕೆಲವು ಸಂದರ್ಭಗಳಲ್ಲಿ ನ್ಯಾಯಾಂಗವೂ ಮುಂಚಿನಂತಿಲ್ಲ ಎಂದೆನಿಸಿದರೆ ಅಚ್ಚರಿಯೇನಿಲ್ಲ. ಇದು ಇಂದ...
ಜಗತ್ತಿನ ಯಾವುದೇ ಮೂಲೆಯಲ್ಲಿ ಒಂದು ನೋವಿನ ಧ್ವನಿ ಕೇಳಿಬಂದರೂ ಸಾಂತ್ವನ ಹೇಳುವ ಮನಸ್ಥಿತಿ ಇದ್ದರೆ ಮಾತ್ರ ನಾವು ನಾಗರಿಕ ಜಗತ್ತಿನ ಮನುಷ್ಯರು ಎಂದು ಎದೆ ಮುಟ್ಟಿ ಹೇಳಿಕೊಳ್ಳಲು ಸಾಧ್ಯ. ಹಾಗೆಯೇ ಜಗತ್ತಿನ ಯಾವುದೇ ಮೂಲೆಯಲ್ಲಿ ನಡೆಯುವ ದೌರ್ಜನ್ಯ ಮತ್ತು ಅನ್ಯಾಯದ ವಿರುದ್ಧ ದನಿ ಎತ್ತುವ ಮನಸ್ಥಿತಿ ಇದ್ದರೆ ಮಾತ್ರ ನಮ್ಮಲ್ಲಿ ಮನುಷ್ಯತ್ವ ಇದೆ...