ಚಂಡೀಘರ್: ಲಾಕ್ ಡೌನ್ ನಿಂದಾಗಿ ತೀವ್ರ ಸಂಕಷ್ಟಕ್ಕೀಡಾದ ರೈತನೋರ್ವ ತನ್ನ ಕುಟುಂಬಕ್ಕೆ ಬೆಂಕಿಯಿಟ್ಟು ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಪಂಜಾಬ್ ನಲ್ಲಿ ನಡೆದಿದೆ. ಧರ್ಮಪಾಲ್ ಎಂಬ ರೈತ ಈ ಕೃತ್ಯ ನಡೆಸಿದವನಾಗಿದ್ದಾನೆ. ವ್ಯಕ್ತಿಯೊಬ್ಬನಿಂದ 8 ಲಕ್ಷ ರೂಪಾಯಿಯನ್ನು ಇವರು ಸಾಲ ರೂಪದಲ್ಲಿ ಪಡೆದಿದ್ದರು. ಇದರ ಜೊತೆಗೆ ವ್ಯಕ್ತಿಯೊ...