ಬೆಳಗಾವಿ: ಅರಬ್ಬೀ ಸಮುದ್ರದಲ್ಲಿ ಸೃಷ್ಟಿಯಾಗಿರುವ ತೌಕ್ತೆ ಚಂಡಮಾರುತದಿಂದಾಗಿ ಕರ್ನಾಟಕದ ಹಲವೆಡೆ ಭಾರೀ ಮಳೆ ಸುರಿಯುತ್ತಿದೆ. ನಿನ್ನೆ ದಕ್ಷಿಣ ಕನ್ನಡ, ಉಡುಪಿಯಲ್ಲಿ ರಾದ್ದಾಂತ ಸೃಷ್ಟಿಸಿದ್ದ ಮಳೆ ಬೆಳಗಾವಿಯಲ್ಲಿ ಎರಡು ಜೀವಗಳನ್ನು ಬಲಿ ಪಡೆದಿದೆ. ಸತತವಾಗಿ ಮಳೆ ಸುರಿದ ಪರಿಣಾಮ ಮನೆಯ ಗೋಡೆ ಕುಸಿತಗೊಂಡು ಬೆಳಗಾವಿ ತಾಲೂಕಿನ ಖಾನಾಪುರ ತ...