ಚಿನ್ನ ಗೆದ್ದ ರಕ್ಷಿತಾರಾಜುಗೆ ಟೈಲರ್ಸ್ ಸಂಘ ಸನ್ಮಾನ

11/11/2023
ಕೊಟ್ಟಿಗೆಹಾರ: ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್ ಕ್ಷೇತ್ರ ಸಮಿತಿ ಮೂಡಿಗೆರೆ ವತಿಯಿಂದ ಪ್ಯಾರಾ ಏಷಿಯನ್ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದ ರಕ್ಷಿತಾರಾಜು ಅವರನ್ನು ಬಾಳೂರಿನ ಗುಡ್ನಳ್ಳಿಯ ಅವರ ಮನೆಯಲ್ಲಿ ಶಾಲು ಹೊದಿಸಿ ಸನ್ಮಾನಿಸಿದರು.
ಕೋಚ್ ರಾಹುಲ್ ಬಾಲಕೃಷ್ಣ, ತಬರೇಜ್ ಖಾನ್ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಕ್ಷೇತ್ರ ಸಮಿತಿ ಅಧ್ಯಕ್ಷ ಶಿವೇಗೌಡ,ಉಪಾಧ್ಯಕ್ಷ ಎಂ.ಕೆ.ಶಣ್ಮುಖಾನಂದ, ಬಣಕಲ್ ವಲಯ ಸಮಿತಿ ಅಧ್ಯಕ್ಷ ಶಂಕರ್ ಟೈಲರ್,ಉಪಾಧ್ಯಕ್ಷ ಕೃಷ್ಣ ಟೈಲರ್ ಜಾವಳಿ, ಬಿಳುಗುಳ ವಲಯ ಸಮಿತಿ ಅಧ್ಯಕ್ಷ ಮಂಜುಳ ಟೈಲರ್,ಸಂಘಟನಾ ಕಾರ್ಯದರ್ಶಿ ಎಂ.ಎನ್. ಗಿರೀಶ್,ತೀರ್ಥ ಟೈಲರ್, ವಿಶ್ವನಾಥ್, ಮತ್ತಿತರರು ಇದ್ದರು.