ತಾಜ್ ಮಹಲ್ ಗೆ “ರಾಮ್ ಮಹಲ್” ಎಂದು ಮರುನಾಮಕರಣ ಮಾಡುತ್ತೇವೆ ಎಂದ ಬಿಜೆಪಿ ಶಾಸಕ - Mahanayaka
11:20 AM Saturday 21 - September 2024

ತಾಜ್ ಮಹಲ್ ಗೆ “ರಾಮ್ ಮಹಲ್” ಎಂದು ಮರುನಾಮಕರಣ ಮಾಡುತ್ತೇವೆ ಎಂದ ಬಿಜೆಪಿ ಶಾಸಕ

15/03/2021

ಲಕ್ನೋ: ಆಗ್ರಾದಲ್ಲಿರುವ ತಾಜ್ ಮಹಲ್ ಗೆ ರಾಮ್ ಮಹಲ್ ಎಂದು ಮರುನಾಮಕರಣ ಮಾಡುತ್ತೇವೆ ಎಂದು ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ಹೇಳಿಕೆ ನೀಡಿದ್ದು,  ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವದಲ್ಲಿ ರಾಮ್ ಮಹಲ್ ಎಂದು ಹೆಸರಿಡಲಾಗುವುದು ಎಂದು ಹೇಳಿದರು.

ಆಗ್ರಾದ ತಾಜ್ ಮಹಲ್ ಶಿವನ ದೇವಾಲಯವಾಗಿತ್ತು. ಆದ್ದರಿಂದ ಸಿಎಂ ಯೋಗಿ ಆದಿತ್ಯನಾಥ್ ಆಡಳಿತದಲ್ಲಿಯೇ ಮರುನಾಮಕರಣ ಮಾಡಲಾಗುವುದು ಎಂದ ಅವರು ಯೋಗಿ ಆದಿತ್ಯನಾಥ್ ಮಹಾರಾಜ ಶಿವಾಜಿ ವಂಶಸ್ಥರು ಎಂದು ಹೇಳಿದ್ದಾರೆ.

ತಾಜ್ ಮಹಲ್ ನ್ನು ಮೊಘಲ್ ಚಕ್ರವರ್ತಿ ಷಹ ಜಹಾನ್ ತನ್ನ ಮೆಚ್ಚಿನ ಪತ್ನಿ ಮಮ್ತಾಜ್ ಮಹಲ್ ಳ ನೆನಪಿಗಾಗಿ ಕಟ್ಟಿದ್ದನು. ಆದರೆ, ಬಿಜೆಪಿ ಇದೊಂದು ಶಿವನ ದೇಗುಲ ಎಂದು ಇತ್ತೀಚೆಗೆ ವಾದಿಸಲು ಆರಂಭಿಸಿದೆ. ಸದ್ಯ ಉತ್ತರ ಪ್ರದೇಶ ಚುನಾವಣೆ ಸಮೀಪಿಸುತ್ತಿದ್ದು, ಈ ಚುನಾವಣೆಯಲ್ಲಿ ತಾಜ್ ಮಹಲ್ ವಿಚಾರವನ್ನು ಮುಂದಿಡುವ ಸಾಧ್ಯತೆಗಳು ಕಂಡು ಬರುತ್ತಿವೆ ಎಂದು ಹೇಳಲಾಗಿದೆ.


Provided by

1632ರಲ್ಲಿ ತಾಜ್ ಮಹಲ್ ನಿರ್ಮಾಣ ಕಾರ್ಯ ಆರಂಭವಾಗಿತ್ತು. ಸರಿಸುಮಾರು 1653ರ ಹೊತ್ತಿಗೆ ಪೂರ್ಣಗೊಂಡಿತು.ಈ ಸಮಾಧಿಯು 17-ಹೆಕ್ಟೇರ್ (42-ಎಕರೆ)ಸಂಕೀರ್ಣದ ಕೇಂದ್ರವಾಗಿದೆ, ಈ ಭವ್ಯ ಕಟ್ಟಡದ ನಿರ್ಮಾಣ ಕಾರ್ಯದಲ್ಲಿ ಸಾವಿರಾರು ಕುಶಲಕರ್ಮಿಗಳು ಮತ್ತು ನುರಿತ ಕೆಲಸಗಾರರನ್ನು ಬಳಸಿಕೊಳ್ಳಲಾಗಿತ್ತು. ದೇವಸ್ಥಾನದ ಯಾವುದೇ ಲಕ್ಷಣಗಳು ಈ ಸ್ಮಾರಕದಲ್ಲಿಲ್ಲ. ಆದರೂ ಬಿಜೆಪಿ ಮತ್ತೊಂದು ಸುಳ್ಳನ್ನು ಹೆಣೆಯುವ ಮೂಲಕ ದೇಶದ ಇತಿಹಾಸವನ್ನೇ ತಿರುಚಲು ಆರಂಭಿಸಿದೆ ಎನ್ನುವ ಆಕ್ರೋಶಗಳು ಕೇಳಿ ಬಂದಿದೆ.

ಇನ್ನೂ ಈ ಶಾಸಕನ ಹೇಳಿಕೆಯ ಬೆನ್ನಲ್ಲೇ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿಯೂ ಜನರು ಮಾರ್ಮಿಕವಾಗಿ ಉತ್ತರಿಸಿದ್ದಾರೆ. ನಿಮಗೆ ಕಟ್ಟುವ ಯೋಗ್ಯತೆ ಇಲ್ಲ, ಮರು ನಾಮಕರಣ ಮಾಡುವುದು ಮಾತ್ರವೇ ನಿಮಗೆ ತಿಳಿದಿರುವುದು ಎಂದು ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇತ್ತೀಚಿನ ಸುದ್ದಿ