ನಿಶ್ಚಿತಾರ್ಥದ ಬಳಿಕ ತಾಜ್ ಮಹಲ್ ನೋಡಲು ಹೋಗಿದ್ದ ಜೋಡಿ ದುರಂತ ಸಾವು
11/09/2022
ನಿಶ್ಚಿತಾರ್ಥದ ಬಳಿಕ ತಾಜ್ ಮಹಲ್ ನೋಡಲು ಹೋಗಿದ್ದ ಜೋಡಿಯೊಂದು ದುರಂತಕ್ಕೀಡಾಗಿ ಸಾವನ್ನಪ್ಪಿದ ದಾರುಣ ಘಟನೆ ಯಮುನಾ ಎಕ್ಸ್’ಪ್ರೆಸ್ ಬಳಿ ನಡೆದಿದೆ.
ವಿಶಾಲ್ ಪ್ರಸಾದ್(29) ಮತ್ತು ಅಲ್ಕಾ(26) ಮೃತಪಟ್ಟ ಯುವ ಜೋಡಿಯಾಗಿದ್ದು, ಇವರ ವಿವಾಹ ಇದೇ ತಿಂಗಳಲ್ಲಿ ನಡೆಯಬೇಕಿತ್ತು ಆದರೆ, ಅದಕ್ಕೂ ಮೊದಲು ಅಪಘಾತದಲ್ಲಿ ಇಬ್ಬರೂ ಸಾವನ್ನಪ್ಪಿದ್ದಾರೆ.
ತಾಜ್ ಮಹಲ್ ವೀಕ್ಷಣೆಗೆ ತೆರಳಿದ್ದ ವೇಳೆ ಜೋಡಿ ಪ್ರಯಾಣಿಸುತ್ತಿದ್ದ ಕಾರಿಗೆ ವಾಹನವೊಂದು ಡಿಕ್ಕಿ ಹೊಡೆದಿದ್ದು, ಪರಿಣಾಮವಾಗಿ ಇಬ್ಬರೂ ಸಾವನ್ನಪ್ಪಿದ್ದಾರೆ ಎಂದು ಉತ್ತರ ಪ್ರದೇಶ ಪೊಲೀಸರು ತಿಳಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka