ತಲಾಖ್ ನೀಡಿದ ಬಳಿಕವೂ ಪತ್ನಿಯ ಅಶ್ಲೀಲ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟ ಪತಿ! - Mahanayaka

ತಲಾಖ್ ನೀಡಿದ ಬಳಿಕವೂ ಪತ್ನಿಯ ಅಶ್ಲೀಲ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟ ಪತಿ!

muzaffarnagar
29/08/2021

ಮುಝಾಫರ್ ನಗರ: ತನ್ನ ಪತ್ನಿಗೆ ತಲಾಖ್ ನೀಡಿದ ಬಳಿಕವೂ ಪತಿಯೋರ್ವ ಆಕೆಗೆ ಕಿರುಕುಳ ನೀಡಿದ್ದು, ಆಕೆಯ ಅಶ್ಲೀಲ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಟ್ಟಿದ್ದಾನೆ. ಇದರಿಂದ ಮನನೊಂದ ಮಹಿಳೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮುಜಾಫರ್ ನಗರ ಜಿಲ್ಲೆಯ ಕೃಷ್ಣನಗರ ಎಂಬಲ್ಲಿ ನಡೆದಿದೆ.

ನಾಲ್ಕು ವರ್ಷಗಳ ಹಿಂದೆ ವಿವಾಹವಾದ ಈ ದಂಪತಿಗೆ 18 ತಿಂಗಳ ಮಗು ಇದ್ದು,  ಆರೋಪಿಯು ಮೂರು ತಿಂಗಳ ಹಿಂದೆ ಮಹಿಳೆಗೆ ತ್ರಿವಳಿ ತಲಾಖ್ ನೀಡಿದ್ದ. ತಲಾಖ್ ನೀಡಿದ ಬಳಿಕವೂ ಆರೋಪಿ ತನ್ನ ಪತ್ನಿಯ ಮೇಲೆ ದ್ವೇಷ ಸಾಧಿಸುತ್ತಿದ್ದು, ಆಕೆಯ ಚಾರಿತ್ರ್ಯಹರಣಕ್ಕಾಗಿ ತನ್ನ ಬಳಿಯಿದ್ದ ಪತ್ನಿಯ ಅಶ್ಲೀಲ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯ ಕೃತ್ಯದಿಂದ ಮನನೊಂದ ಮಹಿಳೆ ವಿಷಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದು, ಈ ಸಂಬಂಧ ಮುಜಾಫರ್ ನಗರದ ಭೋಪಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆರೋಪಿಯ ಬಂಧನವಾದ ಬಗ್ಗೆ ಯಾವುದೇ ಮಾಹಿತಿ ಲಭಿಸಿಲ್ಲ.

ಇನ್ನಷ್ಟು ಸುದ್ದಿಗಳು…

ಬುಡಕಟ್ಟು ಸಮುದಾಯದ ವ್ಯಕ್ತಿಯನ್ನು ಲಾರಿಗೆ ಕಟ್ಟಿ ಎಳೆದೊಯ್ದು ಭೀಕರ ಹತ್ಯೆ: ಪೊಲೀಸರ ಬಳಿ ಸುಳ್ಳು ಕಥೆ ಕಟ್ಟಿದ ಆರೋಪಿಗಳು

ನಾವು ಭಾರತದೊಂದಿಗೆ ಉತ್ತಮ ಬಾಂಧವ್ಯ ಬಯಸುತ್ತೇವೆ | ತಾಲಿಬಾನ್ ನಾಯಕ ಮೊಹಮ್ಮದ್ ಅಬ್ಬಾಸ್ ಸ್ಟ್ಯಾನಿಕಜೈ

ದೇವಸ್ಥಾನದ ಆವರಣದಲ್ಲಿ ಟಿಕ್ ಟಾಕ್ ವಿಡಿಯೋ ಮಾಡಿದಕ್ಕೆ ವಿರೋಧ | ಪೊಲೀಸರಿಗೆ ದೂರು

ಮದುವೆಯಾದ ಮೂರೇ ದಿನದಲ್ಲಿ ಮದುಮಗಳು ಸಾವು: ಸಂಭ್ರಮದ ಮನೆಯಲ್ಲಿ ಮಡುಗಟ್ಟಿದ ಶೋಕ

ಪರಿಶಿಷ್ಟ ಜಾತಿಯ ಯುವಕನಿಗೆ ಮೂತ್ರ ಕುಡಿಸಿದ ಪ್ರಕರಣ | ಆರೋಪಿ ಪಿಎಸ್ ಐ ಅರ್ಜುನ್ ಜಾಮೀನು ಅರ್ಜಿ ವಜಾ

ಬೆತ್ತಲೆ ವಿಡಿಯೋ ಕಾಲ್ ಮಾಡಿದ ಯುವತಿ, ಆಟೋ ಚಾಲಕನನ್ನೂ ಬೆತ್ತಲೆಗೊಳಿಸಿ ವಿಡಿಯೋ ವೈರಲ್ ಮಾಡಿಸಿದಳು!

ಇತ್ತೀಚಿನ ಸುದ್ದಿ