ಇಕ್ರಾಮುದ್ದೀನ್ ಕಾಮಿಲ್ ರನ್ನು ರಾಯಭಾರಿಯಾಗಿ ನೇಮಿಸಿದ ತಾಲಿಬಾನ್ ಸರ್ಕಾರ: ಪ್ರತಿಕ್ರಿಯೆ ನೀಡದ ಭಾರತ ಸರ್ಕಾರ
ಇಕ್ರಾಮುದ್ದೀನ್ ಕಾಮಿಲ್ ಅವರನ್ನು ಭಾರತದ ರಾಯಭಾರಿಯಾಗಿ ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರ ನೇಮಿಸಿದೆ. ಆದರೆ ಭಾರತ ಸರಕಾರ ಈ ಬೆಳವಣಿಗೆಯ ಬಗ್ಗೆ ಯಾವ ಮಾತನ್ನೂ ಆಡಿಲ್ಲ. ಭಾರತ ಮತ್ತು ಆಫ್ಘಾನಿಸ್ತಾನದ ತಾಲಿಬಾನ್ ಸರಕಾರದ ನಡುವೆ ಉತ್ತಮ ಸಂಬಂಧ ಇರುವುದರ ನಡುವೆಯೇ ಈ ಬೆಳವಣಿಗೆ ನಡೆದಿದೆ. ಅಫ್ಘಾನಿಸ್ತಾನದಲ್ಲಿ ಮಾನವೀಯ ಸೇವೆಗಳಲ್ಲಿ ಭಾರತ ತೊಡಗಿಸಿಕೊಂಡಿರುವುದು ಗಮನಾರ್ಹ.
ಭಾರತದ ರಾಯಭಾರಿಯಾಗಿ ಇಕ್ರಾಮುದ್ದೀನ್ ಕಾಮಿಲ್ ಅವರನ್ನು ವಿದೇಶಾಂಗ ಸಹ ಸಚಿವ ಮೊಹಮ್ಮದ್ ಸ್ಕ್ಯಾನಿಕ್ ಝಾಯಿ ಅವರು ನೇಮಕ ಮಾಡಿದ್ದಾರೆಂದು ಆಫ್ಘಾನಿಸ್ತಾನದ ಮಾಧ್ಯಮಗಳು ವರದಿ ಮಾಡಿವೆ.
ಕಾಮಿಲ್ ಅವರು ಈಗ ಮುಂಬೈಯಲ್ಲಿ ಇದ್ದಾರೆ ಎಂದು ವರದಿ ತಿಳಿಸಿದೆ. ಆದರೆ ಭಾರತ ಸರಕಾರದಿಂದ ಯಾವುದೇ ಸ್ಪಷ್ಟನೆ ಬಂದಿಲ್ಲ. ಒಂದು ವೇಳೆ ರಾಯಭಾರಿಯನ್ನು ಅಧಿಕೃತವಾಗಿ ಭಾರತ ಒಪ್ಪಿಕೊಂಡರೆ ತಾಲಿಬಾನ್ ಸರಕಾರಕ್ಕೆ ಮಾನ್ಯತೆ ನೀಡಿದಂತಾಗುತ್ತದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj