ಅಫ್ಘಾನಿಸ್ತಾನದಲ್ಲಿ ಮತ್ತೊಂದು ಕಠಿಣ ಆದೇಶ ಜಾರಿ: ಮಹಿಳೆಯರ ಬ್ಯೂಟಿ ಸೆಲೂನ್ ಗಳಿಗೆ ಬೀಗ..!
ಅಫ್ಘಾನಿಸ್ತಾನದಲ್ಲಿ ಇನ್ಮುಂದೆ ಮೇಕಪ್ ಬ್ಯಾನ್..! ಹೌದು. ಅಚ್ಚರಿಯಾದರೂ ಸತ್ಯ. ಇಲ್ಲಿ ಮಹಿಳಾ ಬ್ಯೂಟಿ ಸೆಲೂನ್ಗಳಿಗೆ ಬೀಗ ಹಾಕಲಾಗಿದೆ. ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಳ್ವಿಕೆಯ ನಂತರ ಮಹಿಳೆಯರ ಸ್ವಾತಂತ್ರ್ಯವನ್ನು ತಡೆಯುವ ಕೆಲಸವನ್ನು ನಿರಂತರವಾಗಿ ಮಾಡಲಾಗುತ್ತಿದೆ.
ತಾಲಿಬಾನ್ ಅಧಿಕಾರಿಗಳು ಮಹಿಳೆಯರಿಗೆ ಹಲವು ರೀತಿ ನಿರ್ಬಂಧಗಳನ್ನು ಹೇರಿದ್ದಾರೆ. ಏತನ್ಮಧ್ಯೆ, ಈಗ ಅಫ್ಘಾನಿಸ್ತಾನದಲ್ಲಿ ಮಹಿಳೆಯರು ಬ್ಯೂಟಿ ಸಲೂನ್‌ಗಳಿಗೆ ಭೇಟಿ ನೀಡುವುದನ್ನು ನಿಷೇಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮಹಿಳೆಯರು ಬೀದಿಗಿಳಿದು ಪ್ರತಿಭಟನೆ ನಡೆಸಿದ ಘಟನೆ ಕೂಡಾ ನಡೆಯಿತು.
ಅಫ್ಘಾನಿಸ್ತಾನದಲ್ಲಿ ಮಹಿಳೆಯರು ಹೆಚ್ಚು ಶಿಕ್ಷಣ ಪಡೆಯುವಂತಿಲ್ಲ, ಉದ್ಯೋಗ ಮಾಡುವಂತಿಲ್ಲ, ರೆಸ್ಟೋರೆಂಟ್ಗಳಲ್ಲಿ ಪುರುಷರಿಗೆ ಸರಿಸಮನಾಗಿ ಕುಳಿತು ಊಟ ಮಾಡುವಂತಿಲ್ಲ, ಒಬ್ಬರೇ ಓಡಾಡುವಂತಿಲ್ಲ, ಉದ್ಯಾನಗಳಿಗೆ ತೆರಳುವಂತಿಲ್ಲ ಹೀಗೆ ಹಲವು ರೀತಿಯಲ್ಲಿ ಮಹಿಳೆಯರ ಕೈಕಾಲು ಕಟ್ಟುವ ಪ್ರಯತ್ನಗಳು ನಡೆದಿವೆ.
ನಾಲ್ಕು ತಿಂಗಳ ಹಿಂದೆ ಮಹಿಳಾ ಬ್ಯೂಟಿ ಸಲೂನ್‌ಗಳಿಗೆ ಮಾರ್ಗಸೂಚಿಗಳನ್ನು ಕಳುಹಿಸಲಾಗಿತ್ತು. ಆದರೆ ಅವುಗಳನ್ನು ಅನುಸರಿಸಿಲ್ಲ ಎಂದು ಸಚಿವಾಲಯ ಹೇಳಿದೆ.
ಮಹಿಳೆಯರ ಬ್ಯೂಟಿ ಸಲೂನ್‌ಗಳನ್ನು ಬಲವಂತವಾಗಿ ಮುಚ್ಚುವುದರಿಂದ ಮಹಿಳೆಯರ ಆರ್ಥಿಕತೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು ಎಂದು ವಿಶ್ವಸಂಸ್ಥೆ ಹೇಳಿದೆ. ಸೆಕ್ರೆಟರಿ ಜನರಲ್ ಫರ್ಹಾನ್ ಹಕ್ ಅವರ ಉಪ ವಕ್ತಾರರು ಬ್ಯೂಟಿ ಸಲೂನ್‌ಗಳನ್ನು ಮುಚ್ಚುವ ಆದೇಶವನ್ನು ನಿಲ್ಲಿಸುವಂತೆ ತಾಲಿಬಾನ್ ಅಧಿಕಾರಿಗಳನ್ನು ಕೇಳಿದ್ದಾರೆ.
ಅಫ್ಘಾನಿಸ್ತಾನದಲ್ಲಿ 12,000 ಕ್ಕೂ ಹೆಚ್ಚು ಮಹಿಳಾ ಬ್ಯೂಟಿ ಸಲೂನ್‌ಗಳಿವೆ. ಪ್ರತಿಯೊಂದು ಸರಾಸರಿ 5 ಮಹಿಳೆಯರನ್ನು ನೇಮಿಸಿಕೊಂಡಿದೆ. ಕಾಬೂಲ್‌ನಲ್ಲಿ 3,100 ಮಹಿಳೆಯರ ಬ್ಯೂಟಿ ಪಾರ್ಲರ್ಗಳಿತ್ತು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BnbLYSQaXK1Hate4P0Bt3B
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw