ಅಫ್ಘಾನಿಸ್ತಾನ: ವಾಲಿಬಾಲ್ ಆಟಗಾರ್ತಿಯ ಶಿರಚ್ಚೇದನ ನಡೆಸಿದ ತಾಲಿಬಾನಿಗಳು - Mahanayaka
7:56 AM Sunday 14 - September 2025

ಅಫ್ಘಾನಿಸ್ತಾನ: ವಾಲಿಬಾಲ್ ಆಟಗಾರ್ತಿಯ ಶಿರಚ್ಚೇದನ ನಡೆಸಿದ ತಾಲಿಬಾನಿಗಳು

hakimi
20/10/2021

ಅಫ್ಘಾನಿಸ್ತಾನ:  ಅಫ್ಘಾನಿಸ್ತಾನದ ಜೂನಿಯರ್ ಮಹಿಳಾ ವಾಲಿಬಾಲ್ ಟೀಮ್ ನ ಸದಸ್ಯೆಯೋರ್ವಳನ್ನು ತಾಲಿಬಾನಿಗಳು ಶಿರಚ್ಚೇದನ ನಡೆಸಿದ ಘಟನೆ ನಡೆದಿದ್ದು, ಈ ಮೂಲಕ ತಾನು ಬದಲಾಗಿದ್ದೇನೆ ಎಂದು ಹೇಳಿಕೊಂಡಿದ್ದ ತಾಲಿಬಾನ್ ತನ್ನ ಕ್ರೂರತನ ಬಿಟ್ಟಿಲ್ಲ ಎನ್ನುವುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.


Provided by

ಮಹ್ಜಬಿನ್ ಹಕಿಮಿ ಹೆಸರಿನ ಆಟಗಾರ್ತಿಯನ್ನು ಶಿರಚ್ಛೇದ ಮಾಡಿರುವ ತಾಲಿಬಾನಿಗಳು, ಈ ವಿಚಾರವನ್ನು ಬಾಯಿ ಬಿಡದಂತೆ  ಪೋಷಕರಿಗೆ ಬೆದರಿಕೆ ಒಡ್ಡಿತ್ತು ಎನ್ನಲಾಗಿದ್ದು, ಈ ಕಾರಣದಿಂದಾಗಿ ಈ ವಿಚಾರ ತಡವಾಗಿ ಬೆಳಕಿಗೆ ಬಂದಿದೆ ಎಂದು ಅವರ ತಂಡದ ಕೋಚ್ ಹೇಳಿಕೆ ನೀಡಿದ್ದಾರೆ.

ಅಶ್ರಫ್ ಘನಿ ಆಡಳಿತದ ಸರ್ಕಾರ ಬೀಳುವ ಮೊದಲು ಮಹ್ಜಬಿನ್ ಅವರು ಕಾಬೂಲ್ ಮುನಿಸಿಪಾಲಿಟಿ ವಾಲಿಬಾಲ್ ಕ್ಲಬ್ ನಲ್ಲಿ ಆಡಿದ್ದರು. ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ಮಹ್ಜಬಿನ್ ಶಿರಚ್ಛೇದನದ ವಿಡಿಯೋ ವೈರಲ್ ಆಗಿದೆ ಎಂದು ತಿಳಿದು ಬಂದಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DvHWsFS1hwLKfIX9njyNyb

ಇನ್ನಷ್ಟು ಸುದ್ದಿಗಳು…

ಸಾರ್ವಜನಿಕ ಸ್ಥಳಗಳಲ್ಲಿ ತಲ್ವಾರ್ ಪ್ರದರ್ಶಿಸಿದ ಸಂಘ ಪರಿವಾರದ ವಿರುದ್ಧ ಪ್ರಕರಣ ದಾಖಲಿಸಲು ಪಾಪ್ಯುಲರ್ ಫ್ರಂಟ್ ಆಗ್ರಹ

ನಿರ್ಲಜ್ಜ, ನೀಚ ರಾಜಕಾರಣಿಗಳ ಬದಲು ಹಿಂದೂ ಸಂಘಟನೆಗಳಿಗೆ ಬಲ ತುಂಬಿ: ಬಿಜೆಪಿ ವಿರುದ್ಧ ಮುತಾಲಿಕ್ ಪರೋಕ್ಷ  ಕಿಡಿ

“ರಾಹುಲ್ ಗಾಂಧಿ ಡ್ರಗ್ಸ್ ಪೆಡ್ಲರ್” ಎಂಬ ನಳಿನ್ ಹೇಳಿಕೆ ಸರಿಯಲ್ಲ: ಬಿ.ಎಸ್.ಯಡಿಯೂರಪ್ಪ

ಐವನ್ ಡಿಸೋಜ ಮನೆಗೆ ನುಗ್ಗಲು ಬಜರಂಗದಳದ ಕಾರ್ಯಕರ್ತರಿಂದ ಯತ್ನ: 8 ಮಂದಿ ಅರೆಸ್ಟ್

65 ಸಾವಿರ ರೂ.ಗಳ ಹಳೆಯ ನೋಟನ್ನು ಬದಲಿಸಿಕೊಡುವಂತೆ ಜಿಲ್ಲಾಧಿಕಾರಿ ಮೊರೆ ಹೋದ ದೃಷ್ಟಿಹೀನ ವಿಕಲಚೇತನ!

45 ವರ್ಷದ ವ್ಯಕ್ತಿಯೊಂದಿಗೆ 25 ವರ್ಷದ ಯುವತಿಯ ಮದುವೆ: ಈ ಚಿತ್ರದ ಅಸಲಿ ಕಥೆ ಏನು?

ಇತ್ತೀಚಿನ ಸುದ್ದಿ