ತಮಿಳು ನಟ ವಿಶಾಲ್ ಆರೋಗ್ಯ ಏರುಪೇರು: ಆಸ್ಪತ್ರೆಗೆ ದಾಖಲು - Mahanayaka

ತಮಿಳು ನಟ ವಿಶಾಲ್ ಆರೋಗ್ಯ ಏರುಪೇರು: ಆಸ್ಪತ್ರೆಗೆ ದಾಖಲು

vishal
07/01/2025

ಚೆನ್ನೈ: ಮದಗಜರಾಜ ಚಿತ್ರದ ಪ್ರಮೋಷನ್ ವೇಳೆ ತಮಿಳು ಚಿತ್ರರಂಗದ ಖ್ಯಾತ ಸ್ಟಾರ್ ನಟ ವಿಶಾಲ್ ಮೈಕ್ ಹಿಡಿದು ಮಾತನಾಡಲೂ ಕಷ್ಟಪಟ್ಟ ಘಟನೆ ನಡೆದಿತ್ತು. ಅವರ ಮೈ ಪೂರ್ತಿ ನಡುಕ ಕಂಡು ಬಂದಿತ್ತು. ಅವರನ್ನು ನೋಡಿ ಅಭಿಮಾನಿಗಳು ಶಾಕ್ ಆಗಿದ್ದರು. ಇದೀಗ ವಿಶಾಲ್ ಆರೋಗ್ಯದಲ್ಲಿ ಮತ್ತೆ ಏರುಪೇರಾಗಿದೆ ಎಂದು ತಿಳಿದು ಬಂದಿದೆ.

ವಿಶಾಲ್ ಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು, ವಿಶಾಲ್ ಸಂಪೂರ್ಣವಾಗಿ ವಿಶ್ರಾಂತಿ ಪಡೆಯುವಂತೆ ಸೂಚನೆ ನೀಡಿದ್ದಾರೆನ್ನಲಾಗಿದೆ. ಆದರೆ, ತಮ್ಮ ಚಿತ್ರದ ಪ್ರಮೋಷನ್ ಗಾಗಿ ವಿಶಾಲ್ ಹೊರ ಬಂದಿದ್ದರು. ಚಿತ್ರದ ಪ್ರಮೋಷನ್ ಗೆ ಬಂದಿದ್ದ ವಿಶಾಲ್ ಗೆ ಇದೀಗ ಮತ್ತೆ ಆರೋಗ್ಯ ಕೈಕೊಟ್ಟಿದ್ದು, ಅವರನ್ನು ಚೆನ್ನೈನ ಅಪೊಲೋ ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿಶಾಲ್ ಗೆ ವೈರಲ್ ಇನ್ಫೆಕ್ಷನ್ ನಿಂದ ತುಂಬಾ ಜ್ವರ ಇದೆ. ಮತ್ತೊಬ್ಬರ ಸಹಾಯವಿಲ್ಲದೇ ಅವರಿಂದ ನಡೆಯಲು ಸಾಧ್ಯವಿಲ್ಲ ಎಂದು ಹೇಳಲಾಗಿದೆ. ಆದರೆ ಅವರಿಗೆ ಬೇರೆ ಅನಾರೋಗ್ಯಗಳು ಇರುವ ಬಗ್ಗೆಯೂ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ ನಡೆಯುತ್ತಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.


Provided by

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/HEkqDgrW2BlJLad5kZ1DX7

 

ಇತ್ತೀಚಿನ ಸುದ್ದಿ