ತಮಿಳು ಗೊತ್ತಿದ್ದವರಿಗೆ ಮಾತ್ರ ಸರ್ಕಾರಿ ನೌಕರಿ | ತಮಿಳುನಾಡು ಸರ್ಕಾರದಿಂದ ಮಹತ್ವದ ನಿರ್ಧಾರ
ಚೆನ್ನೈ: ಮಾತೃ ಭಾಷೆಯಲ್ಲಿಯೇ ಜನರಿಗೆ ಸರ್ಕಾರಿ ಸೇವೆಗಳು ಲಭ್ಯವಾಗ ಬೇಕು ಎಂಬ ನಿಟ್ಟಿನಲ್ಲಿ ತಮಿಳುನಾಡು ಸರ್ಕಾರವು ಮಹತ್ವದ ಹೆಜ್ಜೆಯನ್ನಿಟ್ಟಿದ್ದು, ತಮಿಳು ಗೊತ್ತಿದ್ದವರಿಗೆ ಮಾತ್ರವೇ ಸರ್ಕಾರಿ ನೌಕರಿ ನೀಡಲು ಮಹತ್ವದ ತೀರ್ಮಾನ ಕೈಗೊಂಡಿದೆ.
ತಮಿಳುನಾಡಿನಲ್ಲಿ ತಮಿಳುನಾಡಿನವರಿಗೆ ಮಾತ್ರವೇ ಉದ್ಯೋಗ ಸಿಗಲು ಇದು ಸಹಕಾರಿಯಾಗಿದ್ದು, ಮಾತ್ರವಲ್ಲದೇ ಹೊರ ರಾಜ್ಯಗಳಿಂದ ಆಗಮಿಸಿ, ಸರ್ಕಾರಿ ಕಚೇರಿಗಳಲ್ಲಿ ಹಿಂದಿ ದರ್ಬಾರ್ ನಡೆಸುವುದನ್ನು ತಪ್ಪಿಸಿ, ಹಿಂದಿ ಗೊತ್ತಿಲ್ಲದ ತಮಿಳರಿಗೆ ಸರ್ಕಾರಿ ಕಚೇರಿಯಲ್ಲಿ ತಮಿಳಿನಲ್ಲಿಯೇ ಸೇವೆ ಸಿಗಲು ತಮಿಳುನಾಡು ಸರ್ಕಾರ ಈ ಮಹತ್ವದ ತೀರ್ಮಾನವನ್ನು ಕೈಗೊಂಡಿದೆ.
ತಮಿಳುನಾಡಿನಲ್ಲಿ ಇನ್ನು ಮುಂದೆ ಸರ್ಕಾರಿ ನೌಕರಿ ಬೇಕಾದರೆ, ತಮಿಳು ಗೊತ್ತಿರಲೇ ಬೇಕಾಗಿದೆ. ಇಲ್ಲವಾದರೆ, ತಮಿಳುನಾಡಿನಲ್ಲಿ ಉದ್ಯೋಗ ಸಿಗುವುದಿಲ್ಲ. ಈ ಬಗ್ಗೆ ಈಗಾಗಲೇ ತಮಿಳು ಭಾಷೆಯನ್ನು ಕಡ್ಡಾಯಗೊಳಿಸಿ ಸರ್ಕಾರ ಆದೇಶ ನೀಡಿದೆ.
ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು ಹಾಗೂ ರಾಜ್ಯ ಸರ್ಕಾರಿ ಸ್ವಾಮ್ಯದ ಉದ್ದಿಮೆಗಳಿಗೆ ನೇಮಕಾತಿ ಮಾಡಿಕೊಳ್ಳಲು ತಮಿಳುನಾಡು ಲೋಕಸೇವಾ ಆಯೋಗ ನಡೆಸುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ 10ನೇ ತರಗತಿಯ ತಮಿಳು ಪರೀಕ್ಷೆಗಳಲ್ಲಿ ಇನ್ನು ಮುಂದೆ ಪ್ರಶ್ನೆಪತ್ರಿಕೆ ಇರುತ್ತದೆ. ಅದರಲ್ಲಿ ಕನಿಷ್ಟ 40 ಅಂಕಗಳನ್ನು ಪಡೆದು ಉತ್ತೀರ್ಣರಾದರೆ ಮಾತ್ರ ಅಭ್ಯರ್ಥಿಯು ಟಿಎನ್ ಪಿಎಸ್ ಸಿ ಪರೀಕ್ಷೆಯಲ್ಲಿ ಬರೆದ ಇನ್ನಿತರ ವಿಷಯಗಳ ಉತ್ತರ ಪತ್ರಿಕೆಗಳನ್ನು ಮೌಲ್ಯ ಮಾಪನ ಮಾಡಲಾಗುತ್ತದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಹಿರಿಯ ನಟ ಶಿವರಾಮ್ ಪಂಚಭೂತಗಳಲ್ಲಿ ಲೀನ: ಬನಶಂಕರಿ ಚಿತಾಗಾರದಲ್ಲಿ ಅಂತ್ಯಕ್ರಿಯೆ
ನಂಬರ್ ಪ್ಲೇಟ್ ನಲ್ಲಿ SEX ಪದ ಬಳಕೆ: ಸಾರಿಗೆ ಇಲಾಖೆಗೆ ಮಹಿಳಾ ಆಯೋಗ ನೋಟಿಸ್
“ನಿನ್ನನ್ನು ನೋಡೋಕೆ ಬಂದಿದ್ದೀನಿ…” | ಪುಟಾಣಿ ಅಭಿಮಾನಿ ಜೊತೆಗೆ ಸಿದ್ದರಾಮಯ್ಯ ಮಾತು
ಭೀಕರ ಜ್ವಾಲಾಮುಖಿ ಸ್ಫೋಟ: 13 ಮಂದಿ ಸಾವು, ಗ್ರಾಮ ಬಿಟ್ಟು ಓಡಿದ ಜನ
ಡಿಸೆಂಬರ್ 6ರಂದು ಶಬರಿಮಲೆ ಯಾತ್ರೆಗೆ ಸಿದ್ಧತೆ ನಡೆಸಿದ್ದರಂತೆ ಹಿರಿಯ ನಟ ಶಿವರಾಮ್