ಪೆರಿಯಾರ್ ಜನ್ಮದಿನವನ್ನು ಸಾಮಾಜಿಕ ನ್ಯಾಯದಿನವನ್ನಾಗಿ ಆಚರಿಸಲು ನಿರ್ಧಾರ | ಎಂ.ಕೆ.ಸ್ಟ್ಯಾಲಿನ್  - Mahanayaka

ಪೆರಿಯಾರ್ ಜನ್ಮದಿನವನ್ನು ಸಾಮಾಜಿಕ ನ್ಯಾಯದಿನವನ್ನಾಗಿ ಆಚರಿಸಲು ನಿರ್ಧಾರ | ಎಂ.ಕೆ.ಸ್ಟ್ಯಾಲಿನ್ 

periyar
06/09/2021

ಚೆನ್ನೈ: ಸಮಾಜ ಸುಧಾರಕ ಇ.ವಿ.ರಾಮಸ್ವಾಮಿ ಪೆರಿಯಾರ್ ಅವರ ಜನ್ಮದಿನವಾದ ಸೆ.17 ಅನ್ನು ಪ್ರತಿ ವರ್ಷ ರಾಜ್ಯದಾದ್ಯಂತ ಸಾಮಾಜಿಕ ನ್ಯಾಯದಿನವನ್ನಾಗಿ ಆಚರಿಸಲು ತಮಿಳುನಾಡು ಸರ್ಕಾರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಎಂ.ಕೆ,.ಸ್ಟ್ಯಾಲಿನ್  ಘೋಷಿಸಿದ್ದಾರೆ.

ಸೋಮವಾರ ಈ ವಿಚಾರವನ್ನು ವಿಧಾನಸಭೆಯಲ್ಲಿ ಘೋಷಿಸಿದ  ಅವರು, ಸಾಮಾಜಿಕ ನ್ಯಾಯ, ಸ್ವಾಭಿಮಾನ, ವೈಚಾರಿಕತೆ ಮತ್ತು ಸಮಾನತೆಯ ಅಂಶಗಳನ್ನೊಳಗೊಂಡ ಪೆರಿಯಾರ್‌ ಸಿದ್ದಾಂತವು, ಕಳೆದ ಶತಮಾನದಲ್ಲಿ ತಮಿಳು ಸಮಾಜದ ಬೆಳವಣಿಗೆಗೆ ಅಡಿಪಾಯ ಹಾಕಿತು. ಹಾಗೆಯೇ, ಭವಿಷ್ಯದ ಸಾಮಾಜಿಕ ಬೆಳವಣಿಗೆಯ ಹಾದಿಯನ್ನೂ ಸುಗಮಗೊಳಿಸುತ್ತದೆ ಎಂದರು.

ಪೆರಿಯಾರ್ ಪ್ರತಿಪಾದಿಸಿದ ಸಮಾನತೆಯ ತತ್ವಗಳನ್ನು ಬಲವರ್ಧನೆಗೊಳಿಸುವುದಕ್ಕಾಗಿ ಸರ್ಕಾರ ಪ್ರತಿ ವರ್ಷ ಅವರ ಜನ್ಮ ದಿನವನ್ನು ‘ಸಾಮಾಜಿಕ ನ್ಯಾಯ’ ದಿನವನ್ನಾಗಿ ಆಚರಿಸಲು ನಿರ್ಧರಿಸಿದೆ. ಪ್ರತಿ ವರ್ಷ ಪೆರಿಯಾರ್ ಜನ್ಮ ದಿನದಂದು ಮುಖ್ಯ ಕಾರ್ಯದರ್ಶಿಯವರ ಕಚೇರಿಯೂ ಸೇರಿದಂತೆ ರಾಜ್ಯದ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿನ ಉದ್ಯೋಗಿಗಳು, ಸಮಾನತೆ, ಸ್ವಾಭಿಮಾನ ಮತ್ತು ವೈಚಾರಿಕತೆ ಒಳಗೊಂಡಂತಹ ಉನ್ನತ ಆದರ್ಶಗಳ ಮೌಲ್ಯಗಳನ್ನು ಅನುಸರಿಸುವುದಾಗಿ ಪ್ರತಿಜ್ಞಾವಿಧಿ ಸ್ವೀಕರಿಸಲಿದ್ದಾರೆ ಎಂದು ಅವರು ತಿಳಿಸಿದರು.

ಇನ್ನಷ್ಟು ಸುದ್ದಿಗಳು…




ಎನ್.ಮಹೇಶ್ ಅವರ ಪತ್ನಿ ವಿಜಯ ಮಹೇಶ್ ಅವರಿಗೆ ಅಂತಿಮ ನಮನ | ವಿಡಿಯೋ

ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ: ಬೆಳಗಾವಿ ಬಿಜೆಪಿ ತೆಕ್ಕೆಗೆ, ಧಾರವಾಡ, ಕಲಬುರ್ಗಿ ಅತಂತ್ರ

ಗಣೇಶನ ಹಬ್ಬದಂದು ಗಬ್ಬೆದ್ದು ನಾರಲಿದೆ ಬೆಂಗಳೂರು! | ಸ್ವಚ್ಛತಾ ಸೈನಿಕರು ಕೊಟ್ರು ನೋಡಿ ಶಾಕ್!

ಕಾನ್ಶಿ ಫೌಂಡೇಶನ್ ಬಗ್ಗೆ ವಿಜಯ ಮಹೇಶ್ ಅಪಾರವಾದ ಕನಸನ್ನು ಹೊಂದಿದ್ದರು | ಯೋಗೇಶ್ ಮಾಸ್ಟರ್

ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಅವರ ಪತ್ನಿ, ಖ್ಯಾತ ಚಳುವಳಿಗಾರ್ತಿ ವಿಜಯ ಮಹೇಶ್ ನಿಧನ

ತಾಲಿಬಾನಿಗಳ ವಿರುದ್ಧ ಸಿಡಿದೆದ್ದ ಅಮ್ರುಲ್ಲಾ ಸಾಲೇಹ್ ಯಾರು? | ಜೈಲಿನಲ್ಲಿ ತಾಲಿಬಾನಿಗರ ದಂಗೆಯನ್ನು ಇವರು ಎದುರಿಸಿದ್ದು ಹೇಗೆ?

ವಿವಾದಿತ ಕೃಷಿ ಕಾಯ್ದೆ ವಾಪಸ್ ಪಡೆಯದಿದ್ದರೆ ಬಿಜೆಪಿ ವಿರುದ್ಧ ಪ್ರಚಾರ ಮಾಡುತ್ತೇವೆ | ರೈತ ನಾಯಕರಿಂದ ಎಚ್ಚರಿಕೆ

ನನ್ನ ವಿರುದ್ಧದ ಆರೋಪ ಸಾಬೀತಾದರೆ, ಸಾರ್ವಜನಿಕವಾಗಿ ನೇಣಿಗೇರುತ್ತೇನೆ | ಮಮತಾ ಬ್ಯಾನರ್ಜಿ ಅಳಿಯ ಅಭಿಷೇಕ್ ಬ್ಯಾನರ್ಜಿ ಹೇಳಿಕೆ

ಇತ್ತೀಚಿನ ಸುದ್ದಿ