ಮಲತಂದೆಯಿಂದಲೇ ಬಾಲಕಿಯ ಅತ್ಯಾಚಾರ | ಗರ್ಭಿಣಿಯಾದ ಬಾಲಕಿಗೆ ಎಚ್ ಐವಿ ಪಾಸಿಟಿವ್!

31/01/2021

ಮಧುರೈ:  ಮಲತಂದೆಯಿಂದಲೇ ಅತ್ಯಾಚಾರಕ್ಕೊಳಗಾಗಿ ಅಪ್ರಾಪ್ತ ವಯಸ್ಸಿನ ಬಾಲಕಿಯೊಬ್ಬಳು 4 ತಿಂಗಳ ಗರ್ಭಿಣಿಯಾಗಿರುವ ಘಟನೆ ತಮಿಳುನಾಡಿನ ಮಧುರೈನಲ್ಲಿ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಮಧುರೈನ ಟಿ ಕಲ್ಲುಪಟ್ಟಿ ನಿವಾಸಿ ರಾಮಮೂರ್ತಿ ಬಂಧಿತ ಆರೋಪಿಯಾಗಿದ್ದಾನೆ.  9 ವರ್ಷಗಳ ಹಿಂದೆ ಕೇರಳದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಸಂತ್ರಸ್ತ ಹುಡುಗಿಯ ತಾಯಿಗೆ ಆರೋಪಿ ರಾಮಮೂರ್ತಿ ಪರಿಚಯವಾಗಿದ್ದ. ಆ ಬಳಿಕ ಒಬ್ಬರಿಗೊಬ್ಬರು ತಿಳಿದ ಬಳಿಕ ಪರಸ್ಪರ ಒಪ್ಪಿ ಮದುವೆಯಾಗಿದ್ದರು.

ಕೆಲವು ದಿನಗಳ ಹಿಂದೆ ತನ್ನ 14 ವರ್ಷದ ಮಗಳು ಹೊಟ್ಟೆ ನೋವು ಎಂದು ತಾಯಿಗೆ ಹೇಳಿದ್ದು, ಹೀಗಾಗಿ ತಾಯಿ ಮಗಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ಬಾಲಕಿ ಗರ್ಭಿಣಿಯಾಗಿದ್ದಾಳೆ ಎಂದು ವೈದ್ಯರು ತಿಳಿಸಿದ್ದು, ಈ ವೇಳೆ ತಾಯಿಗೆ ಆಘಾತವಾಗಿದೆ. ರಾಮಮೂರ್ತಿಯ ಅಸಲಿ ಮುಖ ಆಗಷ್ಟೇ ತಾಯಿಗೆ ತಿಳಿದಿದೆ.

ಈ ಆಘಾತದಿಂದ ಹೊರ ಬರುವಷ್ಟರಲ್ಲಿ ಇನ್ನೊಂದು ಆಘಾತಕಾರಿ ಅಂಶವನ್ನು ವೈದ್ಯರು ಹೇಳಿದ್ದು, ಬಾಲಕಿಗೆ ಹ್ಯೂಮನ್ ಇಮ್ಯುನೊ ಡಿಫಿಷಿಯನ್ಸಿ ವೈರಸ್ (ಎಚ್‌ಐವಿ) ಪಾಸಿಟಿವ್ ರಿಪೋರ್ಟ್ ಬಂದಿದೆ.

ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಆರೋಪಿ ರಾಮಮೂರ್ತಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಮಹಿಳೆಗೆ ನಂಬಿಕೆ ದ್ರೋಹ ಎಸಗಿದ್ದ ರಾಮಮೂರ್ತಿ, ಇನ್ನೂ ಜಗತ್ತು ಏನು ಎನ್ನುವುದು ತಿಳಿಯದೇ ಇರುವ 14 ವರ್ಷದ ಬಾಲಕಿಯ ಜೀವನವನ್ನೇ ನರಕ ಮಾಡಿದ್ದಾನೆ.

ಇತ್ತೀಚಿನ ಸುದ್ದಿ

Exit mobile version