ತಮಿಳುನಾಡಿನಲ್ಲೂ ಸಿದ್ದರಾಮಯ್ಯಗೆ “ಹೌದು ಹುಲಿಯಾ” ಘೋಷಣೆ
29/03/2021
ಕೃಷ್ಣಗಿರಿ: ತಮಿಳುನಾಡಿಗೆ ಹುಲಿಯಾ ಕಾಲಿಟ್ಟ ತಕ್ಷಣವೇ ಅಲ್ಲಿಯೂ “ಹೌದು ಹುಲಿಯಾ” ಘೋಷಣೆ ಕೇಳಿ ಬಂದಿದ್ದು, ಚುನಾವಣಾ ಪ್ರಚಾರಕ್ಕೆ ತೆರಳಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಅಭಿಮಾನಿಯೋರ್ವ ಹೌದು ಹುಲಿಯಾ ಘೋಷಣೆ ಕೂಗಿದ್ದಾನೆ.
ತಮಿಳುನಾಡು ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಿಂದ ಕಾಂಗ್ರೆಸ್ ನಾಯಕರಾಗಿರುವ ಸಿದ್ದರಾಮಯ್ಯನವರು ಪ್ರಚಾರಕ್ಕೆ ತೆರಳಿದ್ದರು. ಗುಮ್ಮಳಾಪುರದಲ್ಲಿ ಅವರು ಸಿಪಿಐಎಂ ಅಭ್ಯರ್ಥಿ ರಾಮಚಂದ್ರನ್ ಪರವಾಗಿ ಮತಯಾಚನೆ ಮಾಡುತ್ತಿದ್ದರು.
ಇದೇ ಸಂದರ್ಭದಲ್ಲಿ ಸಿದ್ದರಾಮಯ್ಯನವರನ್ನು ಕಂಡ ಅಭಿಮಾನಿಯೋರ್ವ ಹೌದು ಹುಲಿಯಾ ಎಂದು ಘೋಷಣೆ ಕೂಗಿದ್ದಾನೆ. ಕರ್ನಾಟಕದಿಂದ ತಮಿಳುನಾಡಿಗೆ ಹೋದರೂ ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಹುಲಿಯಾ ಎಂಬ ಬಿರುದು ತಪ್ಪಲೇ ಇಲ್ಲ.
ಸಿದ್ದರಾಮಯ್ಯರ ಕಾಲೆಳೆಯಲು ಹೋಗಿ ಜಾರಿ ಬಿದ್ದ ನಳಿನ್ ಕುಮಾರ್!