ಪತ್ನಿಯ ಜೊತೆಗೆ ಅಕ್ರಮ ಸಂಬಂಧವಿದೆ ಎಂದು ಶಂಕಿಸಿ ತಮ್ಮನನ್ನೇ ಹತ್ಯೆ ಮಾಡಿದ ಅಣ್ಣ! - Mahanayaka
12:50 AM Wednesday 10 - September 2025

ಪತ್ನಿಯ ಜೊತೆಗೆ ಅಕ್ರಮ ಸಂಬಂಧವಿದೆ ಎಂದು ಶಂಕಿಸಿ ತಮ್ಮನನ್ನೇ ಹತ್ಯೆ ಮಾಡಿದ ಅಣ್ಣ!

bantwala news
07/08/2021

ಬಂಟ್ವಾಳ: ತನ್ನ ಪತ್ನಿಯ ಜೊತೆಗೆ ತಮ್ಮನಿಗೆ ಅಕ್ರಮ ಸಂಬಂಧವಿದೆ ಎಂದು ಶಂಕಿಸಿ ಅಣ್ಣನೇ ತಮ್ಮನನ್ನು ಹತ್ಯೆ ಮಾಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪಾಣೆಮಂಗಳೂರಿನ ಬೊಂಡಾಲ ಶಾಂತಿಗುಡ್ಡೆಯಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ.


Provided by

ಶಾಂತಿ ಗುಡ್ಡೆ ನಿವಾಸಿ 30 ವರ್ಷ ವಯಸ್ಸಿನ ಸುಂದರ ಹತ್ಯೆಗೀಡಾದ ವ್ಯಕ್ತಿಯಾಗಿದ್ದು, ಈತನ ಅಣ್ಣ ರವಿ ಹತ್ಯೆ ನಡೆಸಿದ ಆರೋಪಿಯಾಗಿದ್ದಾನೆ. ಕೃತ್ಯದ ಬಳಿಕ ಆರೋಪಿಯು ತಲೆ ಮರೆಸಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.

ಹತ್ಯೆಗೀಡಾಗಿರುವ ಸುಂದರ ಅವಿವಾಹಿತನಾಗಿದ್ದು, ತನ್ನ ಮನೆಯಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದ.  ಆತನ ಮನೆಯ ಸಮೀಪವೇ ಅಣ್ಣನ ಮನೆ ಇತ್ತು. ರವಿಯ ಪತ್ನಿ ಸುಂದರನಿಗೆ ಊಟ, ತಿಂಡಿ ನೀಡುತ್ತಿದ್ದಳು. ಇದನ್ನು ರವಿ ತಪ್ಪಾಗಿ ಗ್ರಹಿಸಿಕೊಂಡು ಯಾವಾಗಲೂ ಪತ್ನಿ ಹಾಗೂ ಸುಂದರನ ಜೊತೆಗೆ ಪದೇ ಪದೇ ಜಗಳವಾಡುತ್ತಿದ್ದ ಎಂದು ಹೇಳಲಾಗಿದೆ.

ಶುಕ್ರವಾರ ತಡರಾತ್ರಿ ಸುಂದರ ಜೋರಾಗಿ ಬೊಬ್ಬೆ ಹಾಕಿರುವುದು ಕೇಳಿ ಬಂದಿದ್ದು, ಈ ವೇಳೆ ಸುಂದರನ ಇನ್ನೋರ್ವ ಅಣ್ಣ ರಮೇಶ್ ಸುಂದರ ಮನೆಗೆ ಓಡಿ ಹೋಗಿ ನೋಡಿದ್ದು, ಈ ವೇಳೆ ರವಿಯು ಸುಂದರನ ತಲೆಗೆ ಸಲಾಕೆಯೊಂದರಿಂದ ಹೊಡೆದಿದ್ದು ಪರಿಣಾಮವಾಗಿ ಸುಂದರ ಗಂಭೀರವಾಗಿ ಗಾಯಗೊಂಡಿದ್ದ. ಆತನಿಗೆ ಆರೈಕೆ ಮಾಡುತ್ತಿರುವ ಸಂದರ್ಭದಲ್ಲಿಯೇ ಸುಂದರ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ ಎಂದು ವರದಿಯಾಗಿದೆ.

ತನ್ನ ತಮ್ಮನನ್ನು ಹತ್ಯೆ ಮಾಡಿದ ಬಳಿಕ ರವಿ ಸ್ಥಳದಿಂದ ಓಡಿ ತಲೆ ಮರೆಸಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಆಗಮಿಸಿರುವ ಬಂಟ್ವಾಳ ನಗರ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದು, ಆರೋಪಿಯನ್ನು ಬಂಧಿಸಲು ಬಲೆ ಬೀಸಿದ್ದಾರೆ.

ಇನ್ನಷ್ಟು ಸುದ್ದಿಗಳು…

ಶಾಕಿಂಗ್ ನ್ಯೂಸ್:  ಬ್ಲೂಟೂತ್ ಹೆಡ್ ಫೋನ್ ಸ್ಫೋಟ ಯುವಕ ದಾರುಣ ಸಾವು

ಕಂಠಪೂರ್ತಿ ಕುಡಿದು ರಸ್ತೆಯ ಮಧ್ಯೆ ಯುವತಿ ಮಾಡಿದ ಕೆಲಸ ಏನು ಗೊತ್ತಾ? | ವಿಡಿಯೋ ವೈರಲ್

ಮತ್ತೆ ಕೃಷ್ಣನ ತಂತ್ರಗಾರಿಗೆ ತೋರುತ್ತಾರಾ ರಮೇಶ್ ಜಾರಕಿಹೊಳಿ?

ಸಿಹಿ ಸುದ್ದಿ: ಭಾರತಕ್ಕೆ ಬರಲಿದೆ ಸಿಂಗಲ್ ಡೋಸ್ ಕೊವಿಡ್ ಲಸಿಕೆ

ಮಹಿಳಾ ಹಾಕಿ ತಂಡಕ್ಕೆ ಪ್ರಧಾನಿಯಿಂದ ವಿಡಿಯೋ ಕಾಲ್ | ಕಣ್ಣೀರು ಹಾಕಿದ ಆಟಗಾರ್ತಿಯರು

ಇತ್ತೀಚಿನ ಸುದ್ದಿ