ಟಾಟಾಗೆ ಹೊಸ ಸಾರಥಿ: ಈ ವ್ಯಕ್ತಿಯೇ ಮಂಡಳಿಯ ನೂತನ ಅಧ್ಯಕ್ಷ

ಟಾಟಾ ಕಮ್ಯುನಿಕೇಷನ್ಸ್ ಲಿಮಿಟೆಡ್ ತನ್ನ ನಿರ್ದೇಶಕರ ಮಂಡಳಿಯ ಹೊಸ ಅಧ್ಯಕ್ಷರಾಗಿ ಎನ್ ಗಣಪತಿ ಸುಬ್ರಮಣ್ಯಂ ಅವರನ್ನು ನೇಮಕ ಮಾಡಿದೆ. 2021 ರ ಡಿಸೆಂಬರ್ ನಲ್ಲಿ ಕಾರ್ಯನಿರ್ವಾಹಕೇತರ ನಿರ್ದೇಶಕರಾಗಿ ಮಂಡಳಿಗೆ ಸೇರಿದ ಸುಬ್ರಮಣಿಯಂ ಅವರನ್ನು ಶುಕ್ರವಾರ ಈ ಪಾತ್ರಕ್ಕೆ ಅನುಮೋದಿಸಲಾಯಿತು.
ಗಣಪತಿ ಸುಬ್ರಮಣ್ಯಂ ಅವರು ಭಾರತೀಯ ಐಟಿ ಉದ್ಯಮದ ಅನುಭವಿಯಾಗಿದ್ದು, 40 ವರ್ಷಗಳ ಅನುಭವವನ್ನು ಹೊಂದಿದ್ದಾರೆ. ಮಾರ್ಚ್ 14, 2025 ರಿಂದ ಜಾರಿಗೆ ಬರುವಂತೆ ಟಾಟಾ ಕಮ್ಯುನಿಕೇಷನ್ ನ ನಿರ್ದೇಶಕರ ಮಂಡಳಿಯ ಅಧ್ಯಕ್ಷರಾಗಿ ಅವರನ್ನು ನೇಮಿಸಲಾಗಿದೆ. ಅವರು ಈ ಹಿಂದೆ ಮೇ 2024 ರವರೆಗೆ ಟಿಸಿಎಸ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಕಾರ್ಯನಿರ್ವಾಹಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ನಾಮನಿರ್ದೇಶನ ಮತ್ತು ಸಂಭಾವನೆ ಸಮಿತಿಯ ಶಿಫಾರಸಿನ ಆಧಾರದ ಮೇಲೆ ನೇಮಕಾತಿಯನ್ನು ಮಂಡಳಿ ಅನುಮೋದಿಸಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj